ವಲಯ ಮಟ್ಟದ ವಿಶೇ? ಮಕ್ಕಳ ವಿಶೇ? ಓಲಂಪಿಕ್ಸ್ ಕ್ರೀಡಾ ಸ್ಪರ್ಧೆ.
ಗಂಗಾವತಿ: ನವೆಂಬರ್-೧೦ ಭಾನುವಾರ ಸ್ಪೆ?ಲ್ ಓಲಂಪಿಕ್ಸ್ ಭಾರತ-ಕರ್ನಾಟಕ ಹಾಗೂ ಆಸರೆ ಬುದ್ದಿಮಾಂದ್ಯ ಮಕ್ಕಳ ವಸತಿ ರಹಿತ ಶಾಲೆ ಸಿಂಧನೂರು ಇವರ ಸಂಯುಕ್ತಾಶ್ರಯದಲ್ಲಿ ರಾಯಚೂರು ವಲಯ ಮಟ್ಟದ ಮಾನಸಿಕ ವಿಕಲಚೇತನರ ಕ್ರೀಡಾಕೂಟವನ್ನು ಸಿಂಧನೂರು ನಗರದ ಆರ್.ಜಿ.ಎಂ ಶಾಲಾ ಆವರಣದಲ್ಲಿ ಆಯೋಜಿಸಲಾಗಿತ್ತು. ಸದ್ರಿ ಕ್ರೀಡಾ ಸ್ಪರ್ಧೆಯಲ್ಲಿ ರಾಯಚೂರ ಜಿಲ್ಲೆಯ ೩೬, ವಿಜಯನಗರ ಜಿಲ್ಲೆಯ ೪೨, ಕೊಪ್ಪಳ ಜಿಲ್ಲೆಯ ೩೬ ಹಾಗೂ ಬಳ್ಳಾರಿ ಜಿಲ್ಲೆಯಿಂದ ೫೬ ರಂತೆ ಒಟ್ಟು ೧೭೦ ವಿಶೇ? ಚೇತನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಕ್ರೀಡಾಕೂಟದಲ್ಲಿ ಗಂಗಾವತಿ ನಗರದ ಲಯನ್ಸ್ ಚಾರಿಟೇಬಲ್ ಟ್ರಸ್ಟ್ ಸಂಸ್ಥೆಯ ಆಶ್ರಿತ ಲಯನ್ಸ್ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆಯ ೨೧ ವಿದ್ಯಾರ್ಥಿಗಳು ಭಾಗವಹಿಸಿ, ಓಟ, ಚೆಂಡು ಎಸೆತ ಹಾಗೂ ಗುಂಡು ಎಸೆತ ಸ್ಪರ್ಧೆಯಲ್ಲಿ ಪ್ರಥಮ-೫, ದ್ವೀತಿಯ-೯ ಹಾಗೂ ತೃತಿಯ-೫ ಹೀಗೆ ಒಟ್ಟು ೧೯ ಬಹುಮಾನ, ಪದಕ ಹಾಗೂ ಪ್ರಮಾಣ ಪತ್ರಗಳನ್ನು ಪಡೆದು ಕೊಪ್ಪಳ ಜಿಲ್ಲೆಗೆ ಪ್ರಥಮ ಸ್ಥಾನ ತಂದು, ಜಿಲ್ಲೆಗೆ ಹಾಗೂ ಸಂಸ್ಥೆಗೆ ಕಿರ್ತಿ ತಂದಿದ್ದಾರೆ.
ಕಾರ್ಯಕ್ರಮದಲ್ಲಿ ರಾಯಚೂರು ಜಿಲ್ಲೆಯ ಅಂಗವಿಕಲರ ಕಲ್ಯಾಣಾಧಿಕಾರಿಗಳು, ಸಿಂಧನೂರು ನಗರದ ಪೌರಾಯುಕ್ತರು ಹಾಗೂ ಸಂಘ ಸಂಸ್ಥೆಯ ಮುಖ್ಯಸ್ಥರು ಉಪಸ್ಥಿತರಿದ್ದರು.
ಮಕ್ಕಳ ಸಾಧನೆಗೆ ಸಂಸ್ಥೆಯ ಪದಾಧಿಕಾರಿಗಳು, ಮುಖ್ಯ ಗುರುಗಳು, ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ.
Comments are closed.