ವಿದ್ಯಾರ್ಥಿಗಳ ಬದುಕು ರೂಪಿಸಿದ ಶಿಕ್ಷಕ ಎಸ್ ಎಮ್ ಕಟ್ಟಿಮನಿ: ಆರ್ ಎಸ ಬುರಡಿ

Get real time updates directly on you device, subscribe now.

ಗದಗ:೯ ಉತ್ತಮ ಬೋಧನೆ, ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಮತ್ತು ಕಲಿಕೆಗೆ ಪ್ರೇರಣೆಯ ಮೂಲಕ ನೂರಾರು ವಿದ್ಯಾರ್ಥಿಗಳ ಬದುಕು ಕಟ್ಟಿಕೊಟ್ಟು ತಾವು ಸೇವೆ ಸಲ್ಲಿಸಿದ ಪ್ರತಿಯೊಂದು ಶಾಲೆಗಳಲ್ಲಿ ವಿಶೇಷವಾಗಿ ಹಿಂದೂಳಿದ ಸಮುದಾಯಗಳ ಬಡ ಮಕ್ಕಳು ಹೆಚ್ಚಾಗಿ ಇರುವ ಶಾಲೆಗಳಲ್ಲಿ ಪ್ರಾಮಾಣಿಕ ಮತ್ತು ಕರ್ತವ್ಯನಿಷ್ಠೆಯಿಂದ ಕೆಲಸ ಮಾಡಿ ವಿದ್ಯಾರ್ಥಿಗಳ ಮತ್ತು ಪಾಲಕರ ಅಚ್ಚು ಮೆಚ್ಚಿನ ಶಿಕ್ಷಕರು ಎಸ್ ಎಮ್ ಕಟ್ಟಿಮನಿಯವರು ಎಂದು ಗದಗ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಆರ್ ಎಸ್ ಬುರಡಿಯವರು ನಿರಂತರ ಪ್ರಕಾಶನ ಗದಗ ಮತ್ತು ಎಸ್ ಎಮ್ ಕಟ್ಟಿಮನಿ ಅಭಿಮಾನಿ ಬಳಗದ ಸಂಯುಕ್ತ ಆಶ್ರಯದಲ್ಲಿ ಜರುಗಿದ ಗದಗ ಗ್ರಾಮೀಣ ವಲಯದ ಚಿಕ್ಕೊಪ್ಪ ಶಾಲೆಯ ನಿವೃತ್ತ ಶಿಕ್ಷಕರಾದ ಎಸ್ ಎಮ್ ಕಟ್ಟಿಮನಿ ಇವರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿ ಸಮಾರೂಪ ಭಾಷಣ ಮಾಡಿದ ಗದಗ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿ ವಿ ನಡವಿನಮನಿ ಶಿಕ್ಷಕರಾದವರು ಸಮಯ ನಿಷ್ಠೆ, ಕರ್ತವ್ಯನಿಷ್ಠೆ, ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉತ್ತಮ ನಾಗರಿಕರಾಗಲು ಸಾಧ್ಯವಾಗುತ್ತದೆ. ಅಂತಹ ಸಂತೃಪ್ತ ಕಾರ್ಯ ಎಸ್ ಎಮ ಕಟ್ಟಿಮನಿ ಶಿಕ್ಷಕರಿಂದ ಸಾಧನೆಗೊಂಂಡಿರುವದು ಸಂತಸ ಸಂಗತಿ ಅವರ ನಿವೃತ್ತಿ ಜೀವನ ಸದಾಕಾಲ ನೆಮ್ಮದಿ ಸುಖ ಸಂತೋಷದಿಂದ ಮತ್ತು ಉತ್ತಮ ಆರೋಗ್ಯ ಸಿಗಲೆಂದು ಹಾರೈಸಿದರು.
ಗದಗ ಡೈಟನ ಉಪನ್ಯಾಸಕಿಯರಾದ ಸುಧಾ ಬನ್ನಿಕಲ್ ಇವರು ಎಸ್ ಎಮ್ ಕಟ್ಟಿಮನಿ ಇವರ ಅಭಿನಂದನಾ ಪರ ನುಡಿಗಳಲ್ಲಿ ಅವರ ಬಾಲ್ಯದ ವಿದ್ಯಾರ್ಥಿ ಜೀವನ ಮತ್ತು ಅವರ ಹೋರಾಟ ಬದುಕು ಅವರ ಕ್ರೀಡೆ ಶಿಕ್ಷಣದಲ್ಲಿ ಸಾಧನೆಯ ಮೆಟ್ಟಿಲುಗಳನ್ನು ಪರಿಚಯ ಮಾಡಿಕೊಟ್ಟರು. ಕಾರ್ಯಕ್ರಮದಲ್ಲಿ ಅತಿಥಿ ಸ್ಥಾನ ವಹಿಸಿದ್ದ ನಿರಂತರ ಪ್ರಕಾಶನ ಸಂಸ್ಥಾಪಕರು ಹಿರಿಯ ಸಾಹಿತಿ ಎ.ಎಸ್ ಮಕಾಂದಾರ ಪ್ರಕಾಶನ ಪರವಾಗಿ ಸನ್ಮಾನಿಸಿ ಕಟ್ಟಿಮನಿಯವರ ಬದುಕಿನ ಅನೇಕ ಘಟನೆಗಳನ್ನು ಉಲ್ಲೇಖಿಸಿದರು. ಕಾರ್ಯಕ್ರಮದಲ್ಲಿ ಅಭಿನಂದನಾ ಸ್ವೀಕರಿಸಿ ಮಾತನಾಡಿದ ಎಸ್ ಎಮ್ ಕಟ್ಟಿಮನಿಯವರು ನನ್ನ ವೃತ್ತಿ ಬದುಕಿನಲ್ಲಿ ನನಗೆ ಸೇವೆ ಮಾಡಲು ಸಿಕ್ಕ ಅವಕಾಶಗಳನ್ನು ಬಹಳ ತೃಪ್ತಿಯಿಂದ ನಿರ್ವಹಣೆ ಮಾಡಿದ ಖುಷಿ ಇದೆ. ನನ್ನ ಪಾಲಿನ ಕರ್ತವ್ಯಗಳನ್ನು ನಿಷ್ಠೆಯಿಂದ ಮಾಡಿ ಪವಿತ್ರ ಶಿಕ್ಷಕ ವೃತಿಗೆ ನ್ಯಾಯವದಗಿಸಿದ ಸಂತಸ ಆಗಿದೆ ಎಂದು ಹೇಳುತ್ತಾ ತಮ್ಮ ವೃತ್ತಿ ಬದುಕಿನೂದ್ದಕ್ಕು ಮಾರ್ಗದರ್ಶನ ಮಾಡಿದ ಇಲಾಖೆಯ ಅಧಿಕಾರಿಗಳನ್ನು ಸಹಕರಿಸಿ ಪ್ರೋತ್ಸಾಹಿಸಿದ ಸಹದ್ಯೋಗಿಗಳನ್ನು ಸ್ಮೇಹಿತರನ್ನ ಕುಟುಂಬದವರನ್ನು ಧರ್ಮಪತ್ನಿ ಲಪೀತಾಬೇಗಂ ಪುತ್ರಿ ನೂಹಾಳನ್ನು ವಿನಮ್ರದಿಂದ ನೆನಪಿಸಿ ಕೃತಜ್ಞೆತೆಗಳನ್ನು ಸಲ್ಲಿಸಿದರು. ಅಭಿಮಾನಿಗಳು ವೃತ್ತಿಬಾಂದವರು ಸ್ನೇಹಿತರು ಎಸ್ ಎಮ್ ಕಟ್ಟಿಮನಿಯವರ ಸೇವಾ ನಿವೃತ್ತಿ ನಿಮಿತ್ಯ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಗದಗ ಡಿಡಿಪಿಐ ಕಛೇರಿಯ ಎಪಿಸಿಓರಾದ ಶಿವಕುಮಾರ ಕುರಿಯರವರು ಗದಗ-ಬೆಟಗೇರಿ ನಗರಾಭಿವೃದ್ದಿ ಪ್ರಾಧಿಕಾರದ ನಾಮನಿರ್ದೇಶನ ಸದಸ್ಯರಾದ ಬಿ ಎನ್ ಯರನಾಳ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಎಸ ಐ ಯಾಳಗಿ ನರಸಾಪೂರ ಶಾಲೆಯ ಪ್ರಧಾನ ಗುರುಗಳಾದ ಬಿ ಡಿ ಮಾದರ ಮಕ್ಕಳ ಸಾಹಿತಿ ಡಾ.ರಾಜೇಂದ್ರ ಗಡಾದ ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯೋತ್ಸವ ನಿಮಿತ್ಯ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯ ಹಿರಿಯ ಮತ್ತು ಉದಯೋನ್ಮೂಖ ಕವಿಗಳು ಕವಿತೆ ಚುಟುಕು ಗಝಲಗಳನ್ನು ವಾಚಿಸಿದರು. ಪ್ರಾರಂಭದಲ್ಲಿ ಶಿಕ್ಷಕಿಯರಾದ ಅನ್ನಪೂರ್ಣ ಕೋಟಗಿ ಶೋಭಾ ಗೌಡರ ಪ್ರಾರ್ಥಿಸಿದರು. ಪ್ರಧಾನ ಗುರುಗಳಾದ ಬಿ ವಾಯ್ ಡೊಳ್ಳಿನ ಸ್ವಾಗತಿಸಿದರು ಕೊನಗೆ ಕ ರಾ.ಪ್ರಾ ಶಾ ಶಿಕ್ಷಕರ ಸಂಘದ ನಿರ್ದೇಶಕರಾದ ವಿರೇಶ ವಾಲ್ಮೀಕಿ ಕೊನಗೆ ವಂದಿಸಿದರು.
ವರದಿ: ವಿಶ್ವನಾಥ ಯ ಕಮ್ಮಾರ ೯೧೬೪೫೧೦೦೧೭

 

Get real time updates directly on you device, subscribe now.

Comments are closed.

error: Content is protected !!