ಓದಿನ ಜೊತೆಗೆ ಪಠ್ಯೇತರ ಚಟುವಟಿಕೆ ಇದ್ದರೇನೆ ಸಾಧನೆಗೆ ಕಿರೀಟ : ರಾಹುಲ್ ರತ್ನಂ ಪಾಡೇಯ
ಕೊಪ್ಪಳ: ಮಕ್ಕಳು ಕೇವಲ ಓದಿನ ದಾಸರಾಗದೇ ಪಠ್ಯೇತರ ಚಟುವಟಿಕೆ ಅಳವಡಿಸಿಕೊಂಡರೆ ಸಾಧನೆಗೆ ಕಿರೀಟದಂತೆ ಇರುತ್ತದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾಯ೯ನಿವಾ೯ಹಕ ಅಧಿಕಾರಿ ರಾಹುಲ್ ರತ್ನಂ ಪಾಡೇಯ ಅಭಿಪ್ರಾಯಪಟ್ಟರು.
ಅವರು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನಾ೯ಟಕ ರಾಜ್ಯ ಯುವ ಸಂಘಗಳ ಒಕ್ಕೂಟ, ನೆಹರು ಯುವ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಯುವಜನೋತ್ಸವ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಇನ್ನಷ್ಟು ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಈ ವಷ೯ದ ಅನುದಾನದಲ್ಲಿ ಹೆಚ್ಚಳ ಮಾಡಿಕೊಡಲಾಗುವದು ಅದಕ್ಕಾಗಿ ವಿಶೇಷವಾದ ಕಾಯ೯ಕ್ರಮಗಳನ್ನು ಕ್ರಿಯಾ ಯೋಜನೆಗಳಲ್ಲಿ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಕ್ರೀಡಾಂಗಣದಲ್ಲಿ ಇನ್ನಷ್ಟು ಹೊಸ ಹೊಸ ಅವಕಾಸಗಳನ್ನು ನೀಡುವ ನಿಟ್ಟಿನಲ್ಲಿ ಕೆಕೆಆರ್‌ಡಿಬಿಯಲ್ಲಿ ಸೇರಿಸಲಾಗಿದೆ. ಅದರಂತೆ ಮುಂದಿನ ಎಲ್ಲಾ ಕಾಯ೯ಕ್ರಮಗಳಿಗೆ ಪ್ರೋತ್ಸಾಹ ನೀಡುವ ಭರವಸೆ ನೀಡಿದರು. ಮೊದಲು ವೈದ್ಯ ಮತ್ತು ಇಂಜಿನಿಯರ್ ಬಿಟ್ಟರೆ ಬೇರೆ ಏನು ಎನ್ನುವ ಪ್ರಶ್ನೆ ಇತ್ತು ಆದರೆ ಈಗ ಸಾಕಷ್ಟು ಅವಕಾಶಗಳಿವೆ, ಹಾಸ್ಯ ಕಲಾವಿದರೂ ಸಹ ದೊಡ್ಡಮಟ್ಟದ ಹೆಸರು ಹಣ ಮಾಡಲು ಅವಕಾಶಗಳಿವೆ, ನಮ್ಮ ಕೆಲಸವನ್ನು ನೂರರಷ್ಟು ಇಷ್ಟಪಟ್ಟು ಮಾಡಬೇಕು ಅಷ್ಟೇ ಎಂದರು.
ಕನಾ೯ಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ. ಎಸ್. ಬಾಲಾಜಿ ಮಾತನಾಡಿ, ಯುವಶಕ್ತಿ ಒಂದು ಹುಚ್ಚು ಪ್ರವಾಹವಿದ್ದಂತೆ ಅದನ್ನು ಸರಿಯಾದ ದಿಕ್ಕಿನಲ್ಲಿ ಹರಿಸಿದರೆ ನಿಶ್ಚಿತವಾಗಿ ಸಾಧನೆ ಮತ್ತು ದೇಶದ ಪ್ರಗತಿಗೆ ಪೂರಕ ಶಕ್ತಿಯಾಗಬಲ್ಲದು, ಮೊದಲು ಇದ್ದ ಯುವಜನೋತ್ಸವದ ಉತ್ಸಾಹ ಈಗಿಲ್ಲ, ಆವಾಗ ಇದ್ದ ಸ್ಪಧೆ೯ಗಳು ಸಹ ಈಗಿಲ್ಲ ಆದ್ದರಿಂದ ನಾವೇ ವಿಶೇಷ ಕಾಯ೯ಕ್ರಮ ರೂಪಿಸಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಪ್ರೋ. ಅಲ್ಲಮಪ್ರಬು ಬೆಟ್ಟದೂರ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ತಮ್ಮ ಕಅಲೇಜಿನ ದಿನಗಳನ್ನು ನೆನಪಿಸಿಕೊಂಡರು, ತಾವು ಅಂದು ಕಾಲೇಜಿನ ಈಜು ಸ್ಪಧೆ೯ಯ ಐಕಾನ್ ಆಗಿದ್ದರು ಎಂದರು. ಸಾಹಿತ್ಯ ಮತ್ತು ಕಲೆಯ ಅಭಿರುಚಿಗಳನ್ನು ಬೆಳೆಸಿಕೊಳ್ಳಬೇಕು ಅದರ ಮೂಲಕ ಪ್ರಶ್ನಿಸುವ ಮನೋಭಾವ ಮತ್ತು ತಮಗೆ ಬೇಕಾದ ಸೌಕಯ೯ ಪಡೆಯಲು ಮತ್ತು ಅನ್ಯಾಯ ಪ್ರತಿಭಟಿಸಲು ಹೋರಾಟ ಮಾಡುವ ಮನೋಭಾವ ಇರಬೇಕು ಎಂದರು.
ಕನಾ೯ಟಕ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಂಜುನಾಥ ಜಿ. ಗೊಂಡಬಾಳ ಒಕ್ಕೂಟದ ಪರವಾಗಿ ಮನವಿ ಸಲ್ಲಿಸಿ, ರಾಜ್ಯ ಯುವ ಸಂಘಗಳ ಒಕ್ಕೂಟಕ್ಕೆ ಇಲಾಖೆಯಲ್ಲಿ ಕಛೇರಿ ತೆರೆಯಲು ಕೊಠಡಿ ಸೌಲಭ್ಯ, ಜನಪದ ತರಬೇತಿ ಶಿಬಿರಗಳನ್ನು ನಡೆಸಲು ಹಾಗೂ ಯುವ ಸಂಘಗಳನ್ನು ಪ್ರೋತ್ಸಾಹಿಸಲು ಸೌಲಭ್ಯಗಳನ್ನು ಒದಗಿಸುವಂತೆ ಮತ್ತು ಇಲಾಕೆಯ ಅನುದಾನವನ್ನು ಹೆಚ್ಚಳ ಮಾಡುವಂತೆ ಹಾಗೂ ನೆಟ್ ಬಾಲ್ ಮತ್ತು ಬಾಸ್ಕೆಟ್ ಬಾಲ್ ಗೆ ಒಳಾಂಗಣ ಕ್ರೀಡಾಂಗಣ ನಿಮಿ೯ಸಲು ಜಾಗ ಕೊಡುವಂತೆ ಮನವಿ ಮಾಡಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿದೇ೯ಶಕ ವಿಠ್ಠಲ್ ಜಾಬಗೌಡರ್ ಪ್ರಾಸ್ತಾವಿಕವಾಗಿ ಮಾತನಾಡಿ, ಇಲಾಖೆಯಲ್ಲಿ ಇರುವ ಅವಕಾಶಗಳನ್ನು ಹಿರಿಯ ಅಧಿಕಾರಿಗಳ ಬೆಂಬಲ ಮಾಗ೯ದಶ೯ನದೊಂದಿಗೆ ಅಚ್ಚುಕಟ್ಟಾಗಿ ಮಾಡುತ್ತಿದ್ದು, ಯುವಜನೋತ್ಸವ ಯುವಜನರ ಕ್ರಿಯಾಶೀಲತೆಯನ್ನು ಬೆಳೆಸಲು ಹಮ್ಮಿಕೊಳ್ಳುವ ವಾಷಿ೯ಕ ಕಾಯ೯ಕ್ರಮವಾಗಿದೆ, ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್, ಒಳಾಂಗಣ ಕ್ರಿಕೆಟ್ ಕ್ರೀಡಾಂಗಣ, ಕ್ರಿಕೆಟ್ ಬಾಕ್ಸ್ ತರಬೇತಿ ಅಂಕಣ, ಬಾಲ್ ಬ್ಯಾಡ್ಮಿಂಟನ್, ಟೆನಿಸ್ ಹೀಗೆ ವಿವಿಧ ಕ್ರೀಡೆಗಳಿಗೆ ಅವಕಾಶ ನೀಡಲು ಯೋಜನೆ ರೂಪಿಸಿದ್ದು, ಶೀಘ್ರ ಕಟ್ಟಡ ಕಾಯ೯ ಪ್ರಾರಂಭಿಸಲಾಗುವದು ಎಂದರು.
ಜಾನಪದ ಅಕಾಡಮಿ ಸದಸ್ಯ ಜೀವನಸಾಬ್ ಬಿನ್ನಾಳ ಮಾತನಾಡಿ, ಮೊದಲು ತಾವು ನೋಡುತ್ತಿದ್ದ ಯುವಜನ ಮೇಳಗಳಿಲ್ಲ, ಯುವಜನೋತ್ಸವಗಳು ಈಗಿಲ್ಲ, ಆ ಉತ್ಸಾಹ ಈಗಿನ ಯುವಜನರಲ್ಲಿ ಇರದಿರುವದು ಬೇಸರದ ಸಂಗತಿಯಾಗಿದ್ದು ಸರಕಾರಗಳು ಇಂತಹ ಕಾಯ೯ಕ್ರಮಗಳಿಗೆ ಹೆಚ್ಚಿ ಪ್ರೋತ್ಸಾಹ ನೀಡಬೇಕು ಎಂದರು.
ಕನಾ೯ಟಕ ಸಂಭ್ರಮ ೫೦ರ ರಾಜ್ಯ ಪ್ರಶಸ್ತಿ ಪಡೆದ ರುಕ್ಮಿಣಿಬಾಯಿ ಚಿತ್ರಗಾರ ಅವರನ್ನು ಸನ್ಮಾನಿಸಲಾಯಿತು. ನೆಹರು ಯುವ ಕೇಂದ್ರದ ಜಿಲ್ಲಾಧಿಕಾರಿ ಮೋಂಟು ಪತ್ತಾರ, ಯುವ ಪ್ರಶಸ್ತಿ ಪುರಸ್ಕೃತರಾದ ಅಕ್ಬರ್ ಸಿ. ಕಾಲಿಮಿಚಿ೯, ಜ್ಯೋತಿ ಎಂ. ಗೊಂಡಬಾಳ, ಶ್ರೀನಿವಾಸ ಕಂಟ್ಲಿ, ಹಿರಿಯ ಪತ್ರಕತ೯ ಜಿ. ಎಸ್. ಗೋನಾಳ, ಜಾನಪದ ಅಕಾಡಮಿ ಸದಸ್ಯ ಮೆಹಬೂಬ ಕಿಲ್ಲೇದಾರ್, ತಾಲೂಕ ಕ್ರೀಡಾಧಿಕಾರಿ ಶರಣಬಸವ ಬಂಡಿಹಾಳ, ಕ್ರೀಡಾ ತರಬೇತುದಾರರಾದ ಯತಿರಾಜ್, ಸುರೇಶ ಯಾದವ, ದೀಪಾ ನಾಗ್ಲಿಕರ್, ವಿಶ್ವನಾಥ ಕಲಿ೯ ಇತರರು ಇದ್ದರು. ಮೆಹಬೂಬ ಕಿಲ್ಲೇದಾರ್ ಪ್ರಾಥಿ೯ಸಿದರು, ಮಂಜುನಾಥ ಜಿ. ಗೊಂಡಬಾಳ ಮತ್ತು ಶ್ವೇತಾ ರಂಜಪಲ್ಲಿ ಕಾಯ೯ಕ್ರಮ ನಿವ೯ಹಿಸಿದರು, ಇಲಾಖೆ ಅಧೀಕ್ಷಕರಾದ ನಾಗರಾಜ್ ಹೆಚ್. ವಂದಿಸಿದರು.
ಜನಪದ ಗೀತೆ, ಜನಪದ ನೃತ್ಯ ವಯಕ್ತಿಕ ಮತ್ತು ಸಮೂಹ, ಕವಿತೆ ರಚನೆ, ಕಥಾ ರಚನೆ, ಘೋಷಣೆ, ಪೇಂಟಿಂಗ್ ಮತ್ತು ವಿಜ್ಞಾನ ಕ್ರಿಯಾತ್ಮಕ ಉಪಕರಣಗಳ ಸ್ಪಧೆ೯ಗಳು ಜರುಗಿದವು. ನಿಣಾ೯ಯಕರಾಗಿ ಡಾ. ಎಸ್. ಬಾಲಾಜಿ, ಅಕ್ಬರ್ ಕಾಲಿಮಿಚಿ೯, ಮಂಜುನಾಥ ಜಿ. ಗೊಂಡಬಾಳ, ಪ್ರಮೋದ ಕುಲಕಣಿ೯, ಜೀವನ್ ಸಾಬ್ ಬಿನ್ನಾಳ, ಮೆಹಬೂಬ ಕಿಲ್ಲೆದಾರ್, ಮಹಾಂತಯ್ಯ ಹಿರೇಮಠ, ಯಮನೂರಪ್ಪ ಬೂದಗುಂಪಾ, ಅಪಣ೯ ಹೆಗಡೆ, ವಿಜಯಲಕ್ಷ್ಮೀ ಮಠದ, ಸಿರಾಜ್ ಬಿಸರಳ್ಳಿ, ಡಾ. ಗವಿಸಿದ್ದಪ್ಪ ಮುತ್ತಾಳ, ಅನ್ನಪೂಣ೯ ಪದ್ಮಸಾಲಿ, ವೀರಯ್ಯ ಒಂಟಿಗೋಡಿಮಠ, ಬದರಿನಾತ ಪುರೋಹಿತ, ಮಹ್ಮದ್ ರಫೀಕ್ ಕಾಯ೯ನಿವ೯ಹಿಸಿದರು.
Comments are closed.