ಸಹಕಾರದ ವಿಷಯವನ್ನು ಪಠ್ಯಪುಸ್ತಕದಲ್ಲಿ ಅಳವಡಿಸಲು ಸರಕಾರಕ್ಕೆ ಮನವಿ- ಶೇಖರಗೌಡ ಮಾಲಿಪಾಟೀಲ

Get real time updates directly on you device, subscribe now.

ಕೊಪ್ಪಳ-೦೮ ಃ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ, ಕೊಪ್ಪಳ, ಸಹಕಾರ ಇಲಾಖೆ ಕೊಪ್ಪಳ ಹಾಗೂ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು, ಪ್ರೌಢ ಶಾಲಾ ವಿಭಾಗ, ಕೊಪ್ಪಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಸಹಕಾರ ವಿಷಯ ಕುರಿತು ಪ್ರಬಂಧ ಹಾಗೂ ಚರ್ಚಾ ಸ್ಪರ್ಧೆಯನ್ನು   ಶುಕ್ರವಾರ  ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗ, ಕೊಪ್ಪಳ  ಇವರ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಸದರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಶೇಖರಗೌಡ ಮಾಲಿಪಾಟೀಲ ವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಸಹಕಾರದ ವಿಷಯವನ್ನು ಪಠ್ಯಪುಸ್ತಕದಲ್ಲಿ ಅಳವಡಿಸಲು ಸರಕಾರಕ್ಕೆ ಮನವಿ ಮಾಡಲಾಗುವುದು ಇದರಿಂದ ವಿದ್ಯಾರ್ಥಿಗಳಿಗೆ ಸಹಕಾರ ಸಂಘಗಳ ಮಹತ್ವ ಹಾಗೂ ಸಹಕಾರದ ಪರಿಕಲ್ಪನೆಯ ಬಗ್ಗೆ ತಳಹಂತದಿಂದ ಸಹಕಾರದ ಮಹತ್ವವನ್ನು ಅರಿಯಲು ಸಾಧ್ಯವಾಗುತ್ತದೆಂದರು.
ಸದರಿ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷರಾದ ಹಾಲಯ್ಯ ಹುಡೇಜಾಲಿ,  ನಿರ್ದೇಶಕರುಗಳಾದ ಭೀಮರಡ್ಡಿ ಶ್ಯಾಡ್ಲಗೇರಿ, ತೋಟಪ್ಪ ಹೆಚ್. ಕಾಮನೂರು, ಮಾಜಿ ನಿರ್ದೇಶಕರಾದ ಗವಿಸಿದ್ದೇಶ ಹುಡೇಜಾಲಿಮಠ, ಸಹಕಾರ ಅಭಿವೃದ್ದಿ ಅಧಿಕಾರಿಯಾದ ಬಸಪ್ಪ ಗಾಳಿ,  ವೀರಯ್ಯ.ಜಿ ಸೂಡಿಮಠ, ಉಪಪಾಂಶುಪಾಲರು, ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು, ಪ್ರೌಢ ಶಾಲಾ ವಿಭಾಗ, ಕೊಪ್ಪಳ, ಕಲಬುರಗಿ ಕೆ.ಐ.ಸಿ.ಎಂ ಉಪನ್ಯಾಶಕರಾದ ರಾಜೇಶ ಯಾವಗಲ್ಲ ಮತ್ತು ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಅಕ್ಷಯ್‌ಕುಮಾರ ರವರುಗಳು ಉಪಸ್ಥಿತರಿದ್ದರು.
ಪ್ರಬಂಧ ಸ್ಪರ್ಧೆಯ ವಿಷಯ ಃ ಶಾಲಾ ಕಾಲೇಜುಗಳ ಪಠ್ಯವಿಷಯಗಳಲ್ಲಿ ಸಹಕಾರ ವಿಷಯ ಅಳವಡಿಕೆ Iಟಿಣಡಿoಜuಛಿಣioಟಿ oಜಿ subರಿeಛಿಣ oಟಿ ಅooಠಿeಡಿಚಿಣioಟಿ iಟಿ ಣhe sಥಿಟಟಚಿbus oಜಿ sಛಿhooಟ ಚಿಟಿಜ ಛಿoಟಟeges  ಚರ್ಚಾ ಸ್ಪರ್ಧೆಯ ವಿಷಯ ಃ ಯುವನಾಯಕತ್ವದಿಂದ ಮಾತ್ರವೇ ಸಹಕಾರಿ ವ್ಯವಸ್ಥೆ ಬಲಾಢ್ಯಗೊಳ್ಳಬಲ್ಲದು ಙouಟಿg ಟeಚಿಜeಡಿshiಠಿ ಛಿಚಿಟಿ oಟಿಟಥಿ sಣಡಿeಟಿgಣheಟಿ ಣhe ಅooಠಿeಡಿಚಿಣive movemeಟಿಣ  ಈ ವಿಷಯದ ಮೇಲೆ ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ಚರ್ಚಾ ಮತ್ತು ಪ್ರಬಂಧಸ್ಪರ್ದೆಯಲ್ಲಿ ಈ ಕೆಳಗಿನ ವಿದ್ಯಾರ್ಥಿಗಳು ಆಯ್ಕೆಯಾಗಿ ಪಾರಿತೋಷಕವನ್ನು ಪಡೆದು ಕೀರ್ತಿ ತಂದಿದ್ದಾರೆ. ಚರ್ಚಾ ಸ್ಪರ್ದೆಯಲ್ಲಿ ಪರವಾಗಿ ಮಾತನಾಡಿದ ಕುಮಾರಿ ಅಕ್ಷತಾ ಸೋಮಶೇಖರ ಗೊಲ್ಲರ್ ತಳಕಲ್ಲ ಪ್ರಥಮ ಸ್ಥಾನ, ವಿರೋಧವಾಗಿ ಮಾತನಾಡಿದ ಕುಮಾರ ಶ್ರೀಕಾಂತ ಸಿದ್ದಪ್ಪ ಅಡವಿಭಾವಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಇನ್ನೂ ಪ್ರಬಂಧಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಕುಮಾರ ಸುನೀಲಕುಮಾರ, ಲಯನ್ಸ್ ಪ್ರೌಢ ಶಾಲೆ ಗಂಗಾವತಿ, ದ್ವೀತಿಯ ಸ್ಥಾನ ಕುಮಾರಿ ಸ್ಪೂರ್ತಿ ಹನುಮರಡ್ಡಿ ಪ್ಯಾಟಿ, ಸರಕಾರಿ ಪ್ರೌಢ ಶಾಲೆ ಹ್ಯಾಟಿ, ತೃತಿಯ ಸ್ಥಾನ ಕುಮಾರ ಕಿರಣ ನಾಯ್ಕ, ಸರಕಾರಿ ಪ್ರೌಢ ಶಾಲೆ ಬೂದುಗುಂಪಾ ವಿದ್ಯಾರ್ಥಿಗಳು ಆಯ್ಕೆಯಾಗಿ ಪಾರಿತೋಷಕ ಮತ್ತು ಪ್ರಮಾಣಪತ್ರ ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಕಲಬುರಗಿ ಕೆ.ಐ.ಸಿ.ಎಂ ಉಪನ್ಯಾಶಕರಾದ ರಾಜೇಶ ಯಾವಗಲ್ಲ ಮಾತನಾಡಿದರು ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಅಕ್ಷಯ್‌ಕುಮಾರ ಗಣ್ಯರನ್ನು ಸಾಗತಿಸಿದರು ಗವಿಸಿದ್ದೇಶ ಹುಡೇಜಾಲಿಮಠರವರು ನಿರೂಪಿಸಿ ವಂದಿಸಿದರು.

Get real time updates directly on you device, subscribe now.

Comments are closed.

error: Content is protected !!