ತುಂಗಭದ್ರಾ ಕಾಡಾ ಪ್ರಾಧಿಕಾರಕ್ಕೆ ಎಂ.ಆರ್. ವೆಂಕಟೇಶ್‌ರನ್ನು ಅಧ್ಯಕ್ಷರನ್ನು ಮಾಡಲು ಒತ್ತಾಯ
ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರಕ್ಕೆ ಸಾಹಿತಿ, ಪರಿಸರ ಪ್ರೇಮಿ, ಕೃಷಿ ಕಾರ್ಮಿಕ ಹಾಗೂ ರೈತಪರ ಹೋರಾಟಗಾರ ವೆಂಕಟೇಶ್‌ಎಂ.ಆರ್. ಇವರನ್ನುಅಧ್ಯಕ್ಷರನ್ನಾಗಿ ನೇಮಿಸಬೇಕೆಂದು ತುಂಗಭದ್ರಾ ಉಳಿಸಿ ಆಂದೋಲನಾ ಸಮಿತಿ (ರಿ), ವಿವಿಧರೈತ ಸಂಘಟನೆಗಳು ಮತ್ತು ಕೊಪ್ಪಳ ಕಾಂಗ್ರೆಸ್‌ನ ಹಲವು ಮುಖಂಡರು ಕೊಪ್ಪಳ ಕಾಂಗ್ರೆಸ್ ಜಿಲ್ಲಾಧ್ಯಕ್ಷರು, ಕೊಪ್ಪಳ ಉಸ್ತುವಾರಿ ಸಚಿವರು, ಕನ್ನಡ ಮತ್ತು ಸಾಂಸ್ಕೃತಿಕ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಶಿವರಾಜ ತಂಗಡಗಿ, ಕೊಪ್ಪಳ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ್‌ರನ್ನು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ತುಂಗಭದ್ರಾ ಜಲಾಶಯ, ಕಾಲುವೆಗಳ ಮತ್ತುಅಚ್ಚುಕಟ್ಟಿನ ಹಿತರಕ್ಷಣೆಗಾಗಿ ತುಂಗಭದ್ರಾ ಉಳಿಸಿ ಹೋರಾಟ ಸಮಿತಿಯನ್ನು ಹುಟ್ಟುಹಾಕಿದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಇವರು ತುಂಗಭದ್ರೆಯಒಡಲಿಗೆ ಹರಿದು ಬರುತ್ತಿರುವಅಪಾರ ಪ್ರಮಾಣದ ಹೂಳು ಮತ್ತುಕಲುಷಿತ ನೀರಿನ ಬಗ್ಗೆ ತುಂಗ ಮತ್ತು ಭದ್ರಾಜನ್ಮ ಸ್ಥಾನದವರೆಗೆತಂಡದೊಂದಿಗೆಅಧ್ಯಯನ ಪ್ರವಾಸಕೈಗೊಂಡಿದ್ದರು. ತುಂಗಭದ್ರಾ ನದಿ ಮತ್ತುಜಲಾಶಯ, ಕಾಲುವೆಗಳು ಮತ್ತುಅಚ್ಚುಕಟ್ಟಿನ ಸಂಕ್ಷಿಪ್ತ ಮತ್ತು ಸಮಗ್ರ ಮಾಹಿತಿಗಳಿರುವ ತುಂಗಭದ್ರೆಯ ಅಳಲು ಮತ್ತುತುಂಗಭದ್ರೆಯ ಪ್ರಲಾಪ ಎಂಬ ಎರಡು ಪುಸ್ತಕಗಳನ್ನು ರಚಿಸಿದ್ದಾರೆ.ಇವರ ಪುಸ್ತಕಗಳನ್ನು ನೀರಾವರಿಇಲಾಖೆಯ ಎಂಜಿನಿಯರ್‌ಗಳು ದಾಖಲೆಗಾಗಿ ಬಳಸತೊಡಗಿದರೆ, ಪತ್ರಕರ್ತರಿಗೆ ಇವು ಮಾಹಿತಿ ನೀಡಲು ಉಪಯುಕ್ತವೆನಿಸಿವೆ.
ತುಂಗಭದ್ರಾ ನದಿಯ ಮೂಲಕ ಜಲಾಶಯಕ್ಕೆ ಹರಿದು ಬರುತ್ತಿರುವ ಹೂಳು ಮತ್ತುಕಲುಷಿತ ನೀರಿನ ಬಗ್ಗೆ ಇವರ ೨೦೦೮ರ ಅಧ್ಯಾಯನ ಪ್ರವಾಸದ ಸಮಗ್ರ ವರದಿಯನ್ನು ಆಗಿನ ತುಂಗಭದ್ರ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿದ್ದ ಎಸ್. ಮಂಜಪ್ಪಗೆ ಸಲ್ಲಿಸಲಾಗಿತ್ತು.ಆಗ ಸದಸ್ಯ ಕಾರ್ಯದರ್ಶಿಗಳು ತುಂಗಭದ್ರ ನದಿ ತಟದ ಕಾರ್ಖಾನೆಗಳು ಬಿಡುವತ್ಯಾಜ್ಯ ನೀರು, ನಗರಗಳು ಬಿಡುವಕಲುಷಿತ ನೀರಿನ ಬಗ್ಗೆ ಇವರ ವರದಿಯನ್ನು ಆಧರಿಸಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು.ನದಿ ತಟದ ಕಾರ್ಖಾನೆಗಳು ಬಿಡುವತ್ಯಾಜ್ಯ ನೀರಿ, ನಗರಗಳು ಬಿಡುವಕಲುಷಿತ ನೀರಿನ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಮಾಲಿನ್ಯ ನಿಯಂತ್ರಣಾ ಮಂಡಳಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಪತ್ರ ಬರೆದ ಪರಿಣಾಮವಾಗಿ, ಎಲ್ಲಾ ಕಾರ್ಖಾನೆಗಳು ಮತ್ತು ನಗರ ಆಡಳಿತಗಳು ಸಂಸ್ಕರಣ ಘಟಕಗಳನ್ನು ಸ್ಥಾಪಿಸಿ ಶುದ್ಧ ನೀರನ್ನು ಬಿಡುವಂತೆ ಮಾಡಲಾಯಿತು.ಇದರ ವರದಿಯನ್ನು ೨೦೧೨-೧೩ ನೇ ಸಾಲಿನ ತುಂಗಭದ್ರ ನೀರಾವರಿ ಸಲಹಾ ಸಮಿತಿಯ ನಡಾವಳಿ ಪುಸ್ತಕದಲ್ಲಿ ಪ್ರಕಟಿಸಲಾಗಿದೆ.
ತುಂಗಭದ್ರಾಜಲಾಶಯ, ಕಾಲುವೆಗಳು, ಅಚ್ಚುಕಟ್ಟುರೈತ ಹಾಗೂ ಕೃಷಿ ಕಾರ್ಮಿಕರ ಹಿತಾಸಕ್ತಿ ಬಗ್ಗೆ ಸತತ ಸುಮಾರು ೩೦ ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿರುವಎಂ.ಆರ್.ವೆಂಕಟೇಶ್‌ಕಾಂಗ್ರೆಸ್ ಪಕ್ಷದ ಸಕ್ರೀಯಕಾರ್ಯಕರ್ತಕೂಡ.ಗ್ರಾ.ಪಂ. ಸದಸ್ಯರಾಗಿ, ಜಿಲ್ಲಾಕಾಂಗ್ರೆಸ್‌ಕಾರ್ಮಿಕಘಟಕದಜಿಲ್ಲಾಅಧ್ಯಕ್ಷರಾಗಿದ್ದಾರೆ.ಇವರ ಸೇವೆಯ ಪರಿಗಣಿಸಿ ತುಂಗಭದ್ರಾಕಾಡಾ ಪ್ರಾಧಿಕಾರದಅಧ್ಯಕ್ಷರನ್ನಾಗಿ ಮಾಡಲುತುಂಗಭದ್ರಾ ಉಳಿಸಿ ಆಂದೋಲನಾ ಸಮಿತಿಯಗೌರವಅಧ್ಯಕ್ಷ ಭಾರದ್ವಾಜ್, ಕಾರ್ಮಿಕ ಮುಖಂಡಎಚ್.ಎನ್. ಬಡಿಗೇರ್, ರೈತ ಹೋರಾಟಗಾರಡಿ.ಎಚ್. ಪೂಜಾರ್, ನೀರು ಬಳಕೆದಾರರ ಸಂಘ ಅಧ್ಯಕ್ಷರುಗಳಾದ ಶಿವಬಾಬು, ಚಲಸಾನಿ, ವೆಂಕಟೇಶ್‌ಕಂಪಸಾಗರ, ಸುದರ್ಶನ್ ವರ್ಮ, ದಶರಥರೆಡ್ಡಿ, ಶಂಬನ ಗೌಡ ತಿಡಿಗೋಳ್, ಶಿವನಗೌಡ, ರೆಡ್ಡಿ ಶ್ರೀನಿವಾಸ್, ರವಿಗೌಡ, ಮಾಲಿ ಪಾಟೀಲ್, ಕಾಂಗ್ರೆಸ್ ಮುಖಂಡರಾದ ಕೃಷ್ಣ ಇಟ್ಟಂಗಿ, ಕೃಷ್ಣಾ ರೆಡ್ಡಿ, ಬಾಲಚಂದ್ರನ್, ವೆಂಕೋಬಾ ದಾಸರ್, ವೀರಭದ್ರಯ್ಯ ಬೂಸನೂರ್ ಮಠ್, ಚಾಂದ್‌ಪಾಷಕಿಲ್ಲೆದಾರ್, ಶ್ರೀನಿವಾಸ ಪಂಡಿತ್, ಸಲೀಂ ಅಳವಂಡಿ, ರಾಜಶೇಖರ್ ಬಂಡಿಹಾಳ್ ಹಾಗೂ ಇನ್ನಿತರಗಣ್ಯರು ಒತ್ತಾಯಿಸಿದ್ದಾರೆ.
ತುಂಗಭದ್ರಾಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದಲ್ಲಿ ೧೧ ಜನ ಕೃಷಿ ಅಧಿಕಾರಿಗಳನ್ನು ಅಕ್ರಮವಾಗಿಅಮಾನತು ಮಾಡಿ, ಅವರಲ್ಲಿದುಡ್ಡಿನ ಬೇಡಿಕೆಇಟ್ಟ ಆಡಳಿತಾಧಿಕಾರಿ ವಿ.ಆರ್. ಮುರಳೀಧರ ಇವರನ್ನುತಕ್ಷಣ ವರ್ಗಾವಣೆ ಮಾಡಿ, ಇಲಾಖಾ ತನಿಖೆ ನಡೆಸುವಂತೆ ೨೦೧೭ರಲ್ಲಿ ವೆಂಕಟೇಶ್‌ಎಂ.ಆರ್.ಧರಣಿ ಸತ್ಯಾಗ್ರಹ ಮಾಡಿದುದರ ಫಲವಾಗಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರನ್ನು ವರ್ಗಮಾಡಿ, ೧೧ ಕೃಷಿ ಅಧಿಕಾರಿಗಳ ಅಮಾನತನ್ನು ರದ್ದುಗೊಳಿಸಲಾಯಿತು. ನಂತರ ಆಡಳಿತಾಧಿಕಾರಿಯಾಗಿದ್ದ ವಿ.ಆರ್.ಮುರಳಿದರ ಮೇಲೆ ಇಲಾಖಾ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಲಾಯಿತು.
ಎಡದಂಡೆ ಮುಖ್ಯಕಾಲುವೆಯ ಅಚ್ಚುಕಟ್ಟಿನ ಎರಡನೇ ಬೆಳೆಗೆ ಕಳೆದ ನಾಲ್ಕೈದು ವರ್ಷಗಳಿಂದ ನೀರು ವ್ಯತ್ಯಯ ಆಗಲಿಕ್ಕೆ ತುಂಗಭದ್ರ ಮಂಡಳಿಯ ಪಕ್ಷಪಾತ ಧೋರಣೆಯೇ ಕಾರಣವೆಂದು ೨೦೧೮ರಲ್ಲಿ ರಾಯಚೂರು, ಮಾನ್ವಿ, ಸಿಂಧನೂರು, ಕಾರಟಗಿ ಮತ್ತು ಗಂಗಾವತಿ ಭಾಗದ ರೈತರನ್ನು ಮತ್ತು ಪಕ್ಷಾತೀತವಾಗಿರಾಜಕೀಯ ಮುಖಂಡರನ್ನು ಸಂಘಟಿಸಿದ ಆಗಿನ ತುಂಗಭದ್ರಾ ಉಳಿಸಿ ಆಂಧೋಲನಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ವೆಂಕಟೇಶ್‌ಎಂ.ಆರ್. ಬಲದಂಡೆಯಆಂದ್ರಕ್ಕೆ ಹೋಗುವ ತುಂಗಭದ್ರ ಕಾಲುವೆಗಳಲ್ಲಿ ಸಿಸ್ಟಂ ಲಾಸಸ್ ಹಾಗೂ ಟ್ರಾನ್ಸ್‌ಮಿಷನ್ ಲಾಸಸ್ ಹೆಸರಿನಲ್ಲಿ ಪ್ರತಿನಿತ್ಯ ಪ್ರತಿಕಾಲುವೆಯಲ್ಲಿ ೩೫೦ ಕ್ಯೂಸೆಕ್ಸ್‌ನಂತೆಎರಡೂ ಕಾಲುವೆಗಳಿಂದ ವಾರ್ಷಿಕವಾಗಿ ಸುಮಾರು ೧೫ ಟಿಎಂಸಿ ನೀರುಆಂದ್ರರಾಜ್ಯ ಹೆಚ್ಚುವರಿಯಾಗಿ ಪಡೆಯುತ್ತದೆ.ಇದರಿಂದಎಡದಂಡೆ ಮುಖ್ಯ ಕಾಲುವೆಗೆ ನೀರಿನಕೊರತೆಯಾಗುತ್ತಿದೆಎಂಬುದನ್ನುಆಧಾರ ಸಮೇತವಾಗಿ ಸಿಂಧನೂರು ರೈತ ಸಮಾವೇಶದಲ್ಲಿ ನೀರಾವರಿ ಮುಖ್ಯಅಭಿಯಂತರರಾಗಿದ್ದ ಮಂಜಪ್ಪಇವರ ಸಮ್ಮುಖದಲ್ಲಿ ಸಾಬೀತು ಪಡಿಸಲಾಯಿತು.ಇದನ್ನುಒಪ್ಪಿಕೊಂಡ ಮುಖ್ಯಅಭಿಯಂತರರುತುಂಗಭದ್ರ ಮಂಡಳಿಗೆ ಪತ್ರ ಬರೆದು ಈ ವ್ಯವಸ್ಥೆಯಎಡದಂಡೆ ಕಾಲುವೆಗೂ ೨೦೨೩ ರಿಂದಒದಗಿಸಲುತುಂಗಭದ್ರ ಮಂಡಳಿ ನಿಣರ್ಯಕೈಗೊಂಡಿದೆ.
೨೦೦೮ರ ಇವರ ಹೂಳು ಅಧ್ಯಯನ ಪ್ರವಾಸದಲ್ಲಿಜಲಾಶಯದ ಸಮೀಪವಿರುವ ವಿಜಯನಗರಜಿಲ್ಲೆಯ ಹೊಸಪೇಟೆ ವ್ಯಾಸನಕೆರೆರೈಲ್ವೆ ನಿಲ್ದಾಣದಲ್ಲಿಅಪಾರವಾಗಿದಾಸ್ತಾನಾಗುವಕಬ್ಬಿನಅದಿರಿನ ಪುಡಿ ಮಳೆ ಬಂದಾಗ ಹೆಚ್ಚಿನ ಪ್ರಮಾಣದಲ್ಲಿ ಹೂಳಾಗಿ ಜಲಾಶಯ ಸೇರುತ್ತದೆ.ಅದಲ್ಲದೇ ವ್ಯಾಸನಕೆರೆಯಿಂದ ಸಂಡೂರುವರೆಗೂ ಸಹ್ಯಾದ್ರಿ ಬೆಟ್ಟಗಳ ಸಾಲಿನಲ್ಲಿಅಪಾರಗಣಿಗಾರಿಕೆ ನಡೆಯುತ್ತಿರುವುದರಿಂದಇಲ್ಲಿಂದ ಬರುವ ಕೆಂಪು ಹಳ್ಳ ಹಾಗೂ ಇನ್ನೀತರ ಸಣ್ಣಪುಟ್ಟ ಹಳ್ಳಗಳಿಂದ ಅಪಾರ ಪ್ರಮಾಣದ ಹೂಳು ಜಲಾಶಯ ಸೇರುತ್ತಿದೆ.ಒಟ್ಟಾರೆ ಪ್ರತಿವರ್ಷಜಲಾಶಯಕ್ಕೆ ೦.೫ ಟಿಎಂಸಿಗೂ ಅಧಿಕ ಹೂಳು ಜಲಾಶಯ ಸೇರುತ್ತದೆ.
ಇದರ ಬಗ್ಗೆ ಎಂ.ಆರ್.ವೆಂಕಟೇಶ್‌ತುಂಗಭದ್ರಾ ಉಳಿಸಿ ಆಂದೋಲನ ಸಮಿತಿ ಮೂಲಕ ನೀರಾವರಿ ಅಧಿಕಾರಿಗಳಿಗೆ ಮತ್ತು ಮಾಧ್ಯಮಗಳ ಮೂಲಕ ಜನರಿಗೆಜಾಗೃತಿ ಮೂಡಿಸಿದ್ದರು.ಇದರ ಫಲವಾಗಿ ಆಗ ಸಿದ್ದರಾಮಯ್ಯನವರ ಸರ್ಕಾರ ೨೦೧೩ರ ತನ್ನ ಬಜೆಟ್‌ನಲ್ಲಿ ಹೂಳಿನ ಬಗ್ಗೆ ಪ್ರಸ್ತಾಪಿಸಿತ್ತು. ಹೂಳು ತೆಗೆಯುವುದುಜನಸಾಗರಕ್ಕೆಅಸಾದ್ಯವಲ್ಲಎಂದುತುಂಗಭದ್ರಾ ಉಳಿಸಿ ಆಂದೋಲನ ಸಮಿತಿಯ ಮೂಲಕ ಹೇಳಿದುದರ ಫಲವಾಗಿ ರೈತ ಸಮುದಾಯ ಹೂಳು ತೆಗೆಯಲು ಮುಂದಾಯಿತು.
೨೦೧೫-೧೬ ರಿಂದ ೨೦೧೬-೧೭ ಜಲವರ್ಷಗಳಲ್ಲಿ ಎಡದಂಡೆ ವಿಜಯನಗರ ಕಾಲುವೆಗಳಿಗೆ ಹಿಂಗಾರು ಬೆಳೆಗೆ ಜಲಾಶಯದಿಂದ ನೀರುಕೊಡದಾಗ, ಎಂ.ಆರ್.ವೆಂಕಟೇಶ್ ಸತತ ಮೂರು ದಿನ ರೈತರು ಮತ್ತುತುಂಗಭದ್ರಾ ಉಳಿಸಿ ಆಂದೋಲನಾ ಸಮಿತಿಯ ಸದಸ್ಯರೊಂದಿಗೆಧರಣಿ ಉಪವಾಸ ಸತ್ಯಾಗ್ರಹ ಮಾಡಿದರು.ನೀರಾವರಿ ನಿಗಮವು ಇದಕ್ಕೂ ಸ್ಪಂದಿಸದಿದ್ದಾಗ, ಎರಡು ದಿನ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದರು.ಈ ಸಂದರ್ಭದಲ್ಲಿ ಆಗ ಶಾಸಕರಾಗಿದ್ದರಾಘವೇಂದ್ರ ಹಿಟ್ನಾಳ್ ಕೂಡ ಭಾಗವಹಿಸಿದ್ದರು. ಬಚಾವತ್‌ತೀರ್ಪಿನ ಪ್ರಕಾರತುಂಗಭದ್ರಾಜಲಾಶಯದಲ್ಲಿಎಡದಂಡೆ ವಿಜಯನಗರ ಕಾಲುವೆಗಳಿಗೆ ಹಿಂಗಾರು ಬೆಳೆಗೆ ೨ ಟಿಎಂಸಿ ನೀರು ಮೀಸಲಿಡಬೇಕುಎಂಬುದು ಪ್ರಮುಖ ಹೋರಾಟದ ಬೇಡಿಕೆಯಾಗಿತ್ತು. ವೆಂಕಟೇಶ್‌ಎಂ.ಆರ್.ನೀರಾವರಿ ನಿಗಮದ ಅಧಿಕಾರಿಗಳಿಗೆ ಇದನ್ನು ಮನವರಿಕೆ ಮಾಡಿದ ಮೇಲೆ ಒಪ್ಪಿ ೨೦೧೭-೧೮ರ ಐಸಿಸಿ ಸಭೆಯದಾಖಲಾತಿ ಪುಸ್ತಕದಲ್ಲಿ ಸೇರಿಸಿ ಹಿಂಗಾರು ಬೆಳೆಗೆ ನೀರು ಬಿಡಲಾಯಿತು.ಇದಕ್ಕೆ ಆಗಿನ ಕೊಪ್ಪಳದ ಶಾಸಕ ರಾಘವೇಂದ್ರ ಹಿಟ್ನಾಳ್ ಖುದ್ದು ಹಾಜರಿದ್ದು ಸಹಕರಿಸಿದ್ದರು.
Comments are closed.