ಪೌರಾಯುಕ್ತರ ಬೆದರಿಕೆ: ಭಾರಧ್ವಾಜ್ ಬೆಂಬಲಿಸಲು ದುಡಿಯುವ ವರ್ಗಗಳಲ್ಲಿ ಭಾರಧ್ವಾಜ್ ಮನವಿ
ಗಂಗಾವತಿ: ಗಂಗಾವತಿ ನಗರಸಭೆಯ ಪೌರಾಯುಕ್ತ ಆರ್. ವಿರುಪಾಕ್ಷಮೂರ್ತಿ ಇವರು ನನಗೆ ಬೆದರಿಸುವ ಮೂಲಕ ಕಾನೂನು ಕೈಗೆತ್ತಿಕೊಂಡಿದ್ದಾನೆ. ಕೊಪ್ಪಳ ಜಿಲ್ಲೆಯ ದುಡಿಯುವ ವರ್ಗಗಳಲ್ಲಿ ನನ್ನನ್ನು ಬೆಂಬಲಿಸಲು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾನು ೧೯೭೦ ರಿಂದ ಟ್ರ್ಯಕ್ಟರ್ ಮೆಕ್ಯಾನಿಕ್ ಆಗಿ ರಾಜಾ ಟ್ರ್ಯಾಕ್ಟರ್ ಇಂಜಿನೀಯರಿಂಗ್ ವರ್ಕ್ಸ್ ಮೂಲಕ ಸೇವೆ ಸಲ್ಲಿಸಿರುವುದು ಅನೇಕ ಹಿರಿಯ ನಾಗರಿಕರಿಗೆ ತಿಳಿದ ವಿಷಯವಾಗಿದೆ. ಗಂಗಾವತಿಯ ಪೌರಾಯುಕ್ತರು ನನ್ನನ್ನು ಆಟೋನಗರದಿಂದ ಹೊರಹಾಕಲು ಪ್ರಯತ್ನ ನಡೆಸಿದ್ದಾನೆ. ನನಗೆ ಆಟೋನಗರದಲ್ಲಿ ಪ್ಲಾಟ್ ನಂ: ೧೧೧ ನಿವೇಶನ ಮಂಜೂರು ಆಗಿದ್ದು, ನಿವೇಶನದ ವಿಸ್ತೀರ್ಣ ೬೦*೩೦ ಇರುತ್ತದೆ. ನಾನು ಮಂಜೂರಿ ಮೇಲೆ ನ್ಯಾಯಾಲಯದಿಂದ ಶಾಶ್ವತ ತಡೆಯಾಜ್ಞೆಯನ್ನು ಪಡೆದುಕೊಂಡಿರುತ್ತೇನೆ. ಆದರೆ ಪೌರಾಯುಕ್ತ ನ್ಯಾಯಾಲಯ ನಿಂದನೆ ಮಾಡಿ ನನ್ನನ್ನು ಹೊರಹಾಕಲು ಪ್ರಯತ್ನಿಸುತ್ತಿದ್ದಾನೆ.
ರೈತರು, ಕೃಷಿಕಾರ್ಮಿಕರು, ಮೆಕ್ಯಾನಿಕ್‌ಗಳು, ಅಕ್ಕಿಗಿರಣಿ ಕಾರ್ಮಿಕರು, ಪೌರಕಾರ್ಮಿಕರು, ಬೀದಿವ್ಯಾಪಾರಿಗಳು ಇನ್ನಿತರ ದುಡಿಯುವ ವರ್ಗಗಳಿಗೆ ನನ್ನ ಹೋರಾಟಗಳ ಬಗ್ಗೆ ಗೊತ್ತಿದೆ. ನನಗೆ ಕಿರುಕುಳ ಕೊಡುತ್ತಿರುವ ಪೌರಾಯುಕ್ತರ ವಿರುದ್ಧ ಹೋರಾಟದಲ್ಲಿ ನನಗೆ ಬೆಂಬಲ ನೀಡಲು ಕೊಪ್ಪಳ ಜಿಲ್ಲೆಯ ಪ್ರಗತಿಪರ ಸ್ನೇಹಿತರಲ್ಲಿ ಕೇಳಿಕೊಳ್ಳುತ್ತಿದ್ದೇನೆ ಎಂದು ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.