ಮಹಿಷಿ ವರದಿ ಯಥಾವತ್ತಾಗಿ ಜಾರಿಯಾಗಲಿ| ಕನ್ನಡಿಗರಿಗೆ ರಾಜ್ಯೋತ್ಸವದ ಕೊಡುಗೆ ನೀಡಲಿ| ಬಿ.ಗಿರೀಶಾನಂದ

Get real time updates directly on you device, subscribe now.

 

ಕೊಪ್ಪಳ,ಅ೨೦: ಡಾ|| ಸರೋಜಿನಿ ಮಹಿಷಿ ವರದಿ ಯಥಾವತ್ತಾಗಿ ಜಾರಿಯಾಗಿ ಕನ್ನಡಿಗರಿಗೆ ರಾಜ್ಯೋತ್ಸವದ ಕೊಡುಗೆ ನೀಡಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ಬಿ.ಗಿರೀಶಾನಂದ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಮಾತನಾಡಿದರು.
ರವಿವಾರದಂದು ಕರ್ನಾಟಕ ರಕ್ಷಣಾ ವೇದಿಕೆಯ ನೂತನ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಕರ್ನಾಟಕದ ಎಲ್ಲ ಬಗೆಯ ಉದ್ಯೋಗದಲ್ಲಿ ಕನ್ನಡಿಗರಿಗೆ ಸಿಂಹಪಾಲು ಇರಬೇಕೆಂಬ ಒತ್ತಾಸೆಯಂತೆ ಕರವೇಯಿಂದ ಸೆ.೦೧ ರಂದು ರಾಜ್ಯಾದ್ಯಂತ ಹೋರಾಟ ನಡೆಸಲಾಯಿತು. ರಾಜ್ಯ ಸಚಿವ ಸಂಪುಟದಲ್ಲಿ ವರದಿ ಜಾರಿಗೊಳಿಸಲು ಸರ್ಕಾರ ತಿರ್ಮಾನಿಸಲಾಗಿತ್ತು. ದುರಾದೃಷ್ಟವೆಂದರೆ ಬೇರೆ ರಾಜ್ಯಗಳ ಕಂಪನಿಗಳ ಒತ್ತಡಕ್ಕೆ ಮಣಿದು ಸದನದಲ್ಲಿ ಮಸೂದೆಯನ್ನು ಮಂಡಿಸಲು ಹಿಂದೇಟು ಹಾಕಿದೆ ಎಂದು ಆರೋಪಿಸಿದರು. ಕರುನಾಡಿನಲ್ಲಿ ಕನ್ನಡಿಗರು ಉದ್ಯೋಗವಿಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ನೆಲದ ಮಕ್ಕಳಿಗೆ ಉದ್ಯೋಗ ದೊರಕಲು ಅವರ ಭವಿಷ್ಯ ಉಜ್ವಲವಾಗಲು ಮಹಿಷಿ ವರದಿಯನ್ನು ಯತ್ತಾವತ್ತಾಗಿ ಜಾರಿಮಾಡಿ ಕನ್ನಡಿಗರಿಗೆ ರಾಜ್ಯೋತ್ಸವದ ಕೊಡುಗೆ ನೀಡಬೇಕು ಎಂದರು.
ಕರವೇ ಹೋರಾಟ ಹಾಗೂ ತತ್ವ-ಸಿದ್ದಾಂತಗಳನ್ನು ಮೆಚ್ಚಿ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ೩೦ಕ್ಕೂ ಹೆಚ್ಚು ಕಾರ್ಯಕರ್ತರು ಸಂಘಟನೆಯನ್ನು ಸೇರ್ಪಡೆಗೊಂಡರು. ಕಾರ್ಯಕ್ರಮದಲ್ಲಿ ಕೊಪ್ಪಳ ನಗರ ಘಟಕದ ನೂತನ ಅಧ್ಯಕ್ಷರನ್ನಾಗಿ ಪ್ರಫುಲ್‌ಕುಮಾರ ಪಾಟೀಲ ಅವರು ನೇಮಕವಾದರು.

ಈ ಸಂದರ್ಭದಲ್ಲಿ ಜಿಲ್ಲಾ ಯುವ ಘಟಕ ಅಧ್ಯಕ್ಷ ಹನುಮಂತ ಬೆಸ್ತರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಮೂಗಿನ್, ಪ್ರಶಾಂತಗೌಡ ಪಾಟೀಲ, ಕಿರಣ ಕುಂಬಾರ, ಪ್ರಕಾಶ ಗೊಡಕೇರ, ಶಿವು ಹಿರೇಮಠ, ಕಲ್ಮೇಶ ಹೊಸೂರು, ಆನಂದ ಪಾಟೀಲ, ನಾಗರಾಜ ಆಡೂರು, ವೆಂಕರೆಡ್ಡಿ ಪೋ.ಪಾಟೀಲ, ರಾಜಾ ಹಡಪದ, ಪ್ರಕಾಶ ಬಸರಿಗಿಡದ, ವಿಶ್ವ ಹಿರೇಮಠ, ವಿರೇಶ ಪಾಟೀಲ, ಸಂಗಮೇಶ ಕೊಪ್ಪಳ, ಹುಲ್ಲೇಶ ಕಟ್ಟಿಮನಿ ಹಾಗೂ ಅನೇಕರು ಉಪಸ್ಥಿತರಿದ್ದರು.

Read this also : Subscibe to Kannadanet Youtube channel

 

https://www.youtube.com/kannadanet

Get real time updates directly on you device, subscribe now.

Comments are closed.

error: Content is protected !!