ಮೂರು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿದ ಪ್ರಕಾಶ ಕಂದಕೂರರ ಚಿತ್ರಗಳು
ಮೂರು ಖಂಡಗಳ, ಮೂರು ದೇಶಗಳಲ್ಲಿ ನಡೆದ ಛಾಯಾಗ್ರಹಣ ಸ್ಪರ್ಧೆ
ಸ್ಪರ್ಧೆಯ ಜರ್ನಲಿಸಂ ವಿಭಾಗದಲ್ಲಿ ಅವರ ʻರೋಪ್ ವಾಕ್ʼ ಶೀರ್ಷಿಕೆಯ ಚಿತ್ರ ಫೆಡರೇಷನ್ ಆಫ್ ಇಂಟರ್ನ್ಯಾಷನಲ್ ಫೊಟೋಗ್ರಫಿಕ್ ಆರ್ಟ್‌ನ ನೀಲಿ ರಿಬ್ಬನ್ ಗೌರವಕ್ಕೆ ಪಾತ್ರವಾದರೆ, ಕಪ್ಪು ಬಿಳುಪು ವಿಭಾಗದಲ್ಲಿ ಅವರ ʻಫ್ರೆಂಡ್‌ಶಿಪ್ʼ ಚಿತ್ರ ಅಟ್ಲಾಂಟಿಕ್ ಇನ್ಸ್ಟಿಟ್ಯೂಟ್ ಆಫ್ ಫೊಟೋಗ್ರಫಿಯ ಹಾನರ್ ಮೆನ್ಷನ್ ಗೌರವಕ್ಕೆ ಪಾತ್ರವಾಗಿದೆ. ಅಲ್ಲದೆ ಜರ್ನಲಿಸಂ ವಿಭಾಗದಲ್ಲಿ ಅವರ ʻದಿ ಫೀಯರ್ʼ ಶೀರ್ಷಿಕೆಯ ಚಿತ್ರ ಅಟ್ಲಾಂಟಿಕ್ ಇನ್ಸ್ಟಿಟ್ಯೂಟ್ ಆಫ್ ಫೊಟೋಗ್ರಫಿಯ ಬೆಳ್ಳಿ ಪದಕವನ್ನೂ ಸಹ ಪಡೆದುಕೊಂಡಿದೆ.
ಮೂರು ಖಂಡಗಳ(ಏಷ್ಯಾ, ಅಮೇರಿಕಾ ಮತ್ತು ಯುರೋಪ್), ಮೂರು ದೇಶ (ಸಿಂಗಪೂರ್, ಅಮೇರಿಕಾ ಮತ್ತು ಗ್ರೀಸ್) ಗಳಲ್ಲಿ ನಡೆದ ಈ ಪ್ರತಿಷ್ಠಿತ ಛಾಯಾಗ್ರಹಣ ಸ್ಪರ್ಧೆಗೆ ಜಗತ್ತಿನ ೪೬ ದೇಶಗಳ, ೩೪೯ ಜನ ಛಾಯಾಗ್ರಾಹಕರ ನಾಲ್ಕು ಸಾವಿರಕ್ಕೂ ಅಧಿಕ ಛಾಯಾಚಿತ್ರಗಳು ಆಗಮಿಸಿದ್ದವು. ಖ್ಯಾತ ಛಾಯಾಗ್ರಾಹಕರಾದ ಗ್ರೀಸ್‌ನ ಪ್ಯಾಪಡಾಕಿಸ್ ಜಾರ್ಜ್, ಮಾರ್ಕೆಟಾಕಿ ರೈಸಾ, ಎಲೆಫ್ತೇರಿಯಾ ಕೊನ್ಸೋಲಾಕಿ, ಸಿಂಗಪೂರಿನ ಝೀ ಕೆಕ್ ಹೆಂಗ್, ಮಯನ್ಮಾರ್‌ನ ಥಿನ್ ಥಿನ್ ಥನ್, ಹೇಯ್ನ್ ಎಚ್‌ಟೆಟ್, ಅಮೇರಿಕಾದ ಮುಹಮ್ಮದ್ ಅಲಿ ಸಲೀಮ್, ಕ್ಸಿನ್ ಕ್ಸಿನ್ ಲಿಯಾಂಗ್, ಝಿಯಾಹೊಂಗ್ ಝೆಂಗ್ ಸ್ಪರ್ಧೆಯ ತೀರ್ಪುಗಾರರಾಗಿ ಭಾಗವಹಿಸಿದ್ದರು.
ಅಕ್ಟೋಬರ್ ೩೦ ರ ಬಳಿಕ ಸ್ಪರ್ಧೆಯ ಆನ್‌ಲೈನ್ ಗ್ಯಾಲರಿಯಲ್ಲಿ ಪ್ರಶಸ್ತಿ ವಿಜೇತ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ ಎಂದು ಸಂಘಟಕ ಮನೋಲಿಸ್ ಮೆಟ್ಝಕಿಸ್ ತಿಳಿಸಿದ್ದಾರೆ.
Comments are closed.