ಕೊಪ್ಪಳ  ಜಿಲ್ಲೆಯಲ್ಲಿ ಹೆಚ್ಚಾದ ದಲಿತರ ಮೇಲಿನ ದೌರ್ಜನ್ಯ-ಜಿಲ್ಲಾಡಳಿತ ವಿಫಲ: ಬಸವರಾಜ್ ಸೂಳಿಬಾವಿ

Get real time updates directly on you device, subscribe now.

ಕೊಪ್ಪಳ ,ಅ 20, ಜಿಲ್ಲೆಯಲ್ಲಿ ಇತ್ತೀಚಿಗಷ್ಟೇ ದಲಿತ ಸಮುದಾಯದ   ಮೇಲೆ  ದೌರ್ಜನ್ಯ ಹೆಚ್ಚಾಗುತ್ತಿದೆ ಇದು ತೀವ್ರ ಕಳವಳಕಾರಿ ಸಂಗಾತಿಯಾಗಿದೆ ಇದಕ್ಕೆ ಕೊಪ್ಪಳ ಜಿಲ್ಲಾ ಆಡಳಿತ ನೇರ ಹೊಣೆಯಾಗಿದೆ ಎಂದು ಪ್ರಗತಿಪರ ಹೋರಾಟಗಾರ ಬಸವರಾಜ್ ಸೂಳಿಬಾವಿ ಆರೋಪಿಸಿದರು.

ಅವರು ರವಿವಾರ ಬೆಳಿಗ್ಗೆ ಇಲ್ಲಿನ ಪತ್ರಿಕಾ ಭವನ್ ದಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ ದಲಿತ ರ ಮೇಲಿನ ದೌರ್ಜನ್ಯಗಳು ಸುಮಾರು 51 ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿದೆ ಅದರಲ್ಲೂ ಪರಿಶಿಷ್ಟ ಜಾತಿ ಮೀಸಲು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆಚ್ಚೆಚ್ಚು ಪ್ರಕರಣಗಳು ಜರುಗುತ್ತಲೇ ಇವೆ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಇಂದ ದಲಿತರ ರಕ್ಷಣೆ ಆಗುತ್ತಿಲ್ಲ ಕೂಡಲೇ ಸರ್ಕಾರ ಅವರನ್ನು ಬದಲಾವಣೆ ಮಾಡಬೇಕು, ದೌರ್ಜನ್ಯ ತಡೆಗಟ್ಟುವಲ್ಲಿ ನಿರ್ಲಕ್ಷ ವಹಿಸಿದ ಜಿಲ್ಲಾ ಆಡಳಿತದ ಪ್ರಮುಖ ಅಧಿಕಾರಿಗಳಾದ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳನ್ನು ಕೂಡಲೇ ಇಲ್ಲಿಂದ ವರ್ಗಾವಣೆ ಮಾಡಬೇಕೆಂದು ಬಸವರಾಜ್ ಸುಳೆಭಾವಿ ಒತ್ತಾಯಿಸಿದರು.
ಇನ್ನೋರ್ವ ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ ಜಮಾಪುರ್ ನಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದಿರುವುದು ಖಂಡನೆಯ ವಿಷಯವಾಗಿದೆ ಜಿಲ್ಲೆಯಲ್ಲಿ ಇಂತಹ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದೆ ಕೂಡಲೇ ಗ್ರಹಮಂತ್ರಿ ಡಾ. ಜಿ ಪರಮೇಶ್ವರ್ ರವರು ಜಿಲ್ಲೆಗೆ ಭೇಟಿ ನೀಡಬೇಕು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು
ಹೋರಾಟಗಾರ ಟಿ ರತ್ನಾಕರ್ ಮಾತನಾಡಿ ಗ್ರಾಮ ಸಭೆಯಲ್ಲಿ ದಲಿತ ಯುವಕನ ಮೇಲೆ ದೌರ್ಜನ್ಯ ದಾಂದಲೆ ನಡೆದಿರುವುದು ಇದಕ್ಕೆ ಜಿಲ್ಲಾಡಳಿತ ನೇರ ಹೊಣೆಯಾಗಿದೆ ಎಂದವರು ಗೃಹ ಮಂತ್ರಿ ಜಿಲ್ಲೆಗೆ ಭೇಟಿ ನೀಡುವವರಿಗೆ ತಮ್ಮ ನಿರಂತರ ಹೋರಾಟ ಮುಂದುವರಿಸಲಾಗುವುದು ಎಂದರು
ಹೋರಾಟಗಾರ ಸುಕರಾಜ್ ತಾಳಿಕೇರಿ ಮಾತನಾಡಿ ಕೂಡಲೆ ಸರ್ಕಾರ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಮುಂದಾಗಬೇಕು ದಲಿತ ಸಮುದಾಯಕ್ಕೆ ರಕ್ಷಣೆ ನೀಡಬೇಕು ಜಿಲ್ಲಾ ಉಸ್ತುವಾರಿ ಸಚಿವರನ್ನ ಬದಲಿಸಬೇಕು ಡಿಸಿ ಮತ್ತು ಎಸ್ ಪಿ ಗಳನ್ನು ಎಲ್ಲಿಂದ ಬೇರೆಡೆಗೆ ವರ್ಗಾಯಿಸಬೇಕೆಂದು ಒತ್ತಾಯಿಸಿದರು ಮಹಾಂತೇಶ ಕೊತಬಾಳ, ಡಿ.ಬಿ.ಬಡಿಗೇರ, ಅಲ್ಲಮಪ್ರಭು ಬೆಟ್ಟದೂರು, ಶರಣು ಶೆಟ್ಟರ್  ಸೇರಿದಂತೆ ಅನೇಕರು ಪತ್ರಿಕಾಗೋಷ್ಠಿಯಲ್ಲಿ ಉಪಸಿದ್ಧರಿದ್ದರು

Get real time updates directly on you device, subscribe now.

Comments are closed.

error: Content is protected !!