ಕೊಪ್ಪಳ ವಿವಿ ಅಧೀನದ ಕಾಲೇಜುಗಳಿಂದ ಸಂಯೋಜನಾ ಅರ್ಜಿ ಆಹ್ವಾನ

0

Get real time updates directly on you device, subscribe now.

—-
ಕೊಪ್ಪಳ ಅಕ್ಟೋಬರ್ 17 (ಕರ್ನಾಟಕ ವಾರ್ತೆ): 2025-26ನೇ ಶೈಕ್ಷಣಿಕ ಸಾಲಿಗೆ ಯುಯುಸಿಎಂಎಸ್  (https://uucms.kamataka.gov.in/) ತಂತ್ರಾAಶದ ಮುಖಾಂತರ ಕೊಪ್ಪಳ ವಿಶ್ವವಿದ್ಯಾಲಯದ ಅಧೀನದ ಕಾಲೇಜುಗಳಿಂದ ಸಂಯೋಜನಾ ಅರ್ಜಿ ಆಹ್ವಾನಿಸಿದೆ.
ಸರ್ಕಾರವು ಇತ್ತೀಚೆಗೆ ಹೊರಡಿಸಿರುವ ಆದೇಶದನ್ವಯ 2025-26ನೇ ಶೈಕ್ಷಣಿಕ ಸಾಲಿನಿಂದ ಅನ್ವಯವಾಗುವಂತೆ ಕಲಾ, ವಿಜ್ಞಾನ, ವಾಣಿಜ್ಯ ಹಾಗೂ ಇನ್ನಿತರ ಸಾಂಪ್ರದಾಯಿಕ ವಿಷಯಗಳಲ್ಲಿ ಹೊಸ ಪದವಿ ಮಹಾವಿದ್ಯಾಲಯಗಳನ್ನು ಪ್ರಾರಂಭಿಸಲು ಇಚ್ಚಿಸುವ ಸರ್ಕಾರದ ನಿಯಮಾವಳಿಯಂತೆ ನೋಂದಾಯಿಸಲ್ಪಟ್ಟ ಸಂಘ ಸಂಸ್ಥೆಗಳು, ಸಾರ್ವಜನಿಕ ಟ್ರಸ್ಟ್ಗಳಿಂದ ಹೊಸ ಸಂಯೋಜನಾ ಅರ್ಜಿಗಳು ಹಾಗೂ ಪ್ರಸ್ತುತ ವಿಶ್ವವಿದ್ಯಾಲಯದಿಂದ ಸಂಯೋಜನೆ ಹೊಂದಿರುವ ಮಹಾವಿದ್ಯಾಲಯಗಳಿಂದ ಸ್ನಾತಕ, ಸ್ನಾತಕೋತ್ತರ ಕೋರ್ಸ್ಗಳಿಗೆ ಮುಂದುವರಿಕೆ, ವಿಸ್ತರಣೆ, ಹೊಸ ಕೋಸ್, /ಹೊಸ ವಿಷಯ, ಪ್ರವೇಶ ಮಿತಿ ಹೆಚ್ಚಳ, ಶಾಶ್ವತ ಸಂಯೋಜನೆ, ಶಾಶ್ವತ ಸಂಯೋಜನೆ ನವೀಕರಣ, ಮಹಾವಿದ್ಯಾಲಯಗಳ ಹೆಸರು ಬದಲಾವಣೆ, ಮಹಾವಿದ್ಯಾಲಯ ಸ್ಥಳಾಂತರ, ಆಡಳಿತ ಮಂಡಳಿ ಬದಲಾವಣೆ ಹಾಗೂ ಇತ್ಯಾದಿಗಳಿಗಾಗಿ ಸಂಬAಧಿಸಿದ ದಾಖಲೆಗಳೊಂದಿಗೆ ನಿಗದಿತ ಸಂಯೋಜನಾ ಶುಲ್ಕವನ್ನು ಪಾವತಿಸಿ ಸರ್ಕಾರದ ಸಂಯೋಜನೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಅಕ್ಟೋಬರ್ 25ರಂದು ಆರಂಭಗೊAಡು ನವೆಂಬರ್ 10 ರವರೆಗೆ ದಂಡರಹಿತವಾಗಿ ಹಾಗೂ ನವೆಂಬರ್ 11 ರಿಂದ ನ.15ರ ವರೆಗೆ ದಂಡಸಹಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಸಂಯೋಜನಾ ಶುಲ್ಕಗಳ ವಿವರ ಹಾಗೂ ಸಂಯೋಜನೆಗೆ ಅರ್ಜಿಗಳನ್ನು ಹಾಗೂ ಸಂಬAಧಿಸಿದ ಇನ್ನಿತರ ಮಾಹಿತಿಯನ್ನು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ತಿಳಿದುಕೊಳ್ಳಬಹುದು ಅಥವಾ ವಿಶ್ವವಿದ್ಯಾಲಯದ ಜಾಲತಾಣ  www.koppaluniversity.ac.in ನಲ್ಲಿ ಮಾಹಿತಿ ಪಡೆದುಕೊಳ್ಳಬಹುದು. ಕರ್ನಾಟಕ ಸರ್ಕಾರ ಅಭಿವೃದ್ಧಿಪಡಿಸಿದ ಯುಯುಸಿಎಂಎಸ್ ತಂತ್ರಾAಶದ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕಾಲೇಜು ಅಭಿವೃದ್ಧಿ ಮಂಡಳಿಯ ದೂರವಾಣಿ ಸಂಖ್ಯೆ 9448687862 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Leave A Reply

Your email address will not be published.

error: Content is protected !!