ದೌರ್ಬಲ್ಯ ತೊರೆದು ಆದಿಕವಿಯಾದ ವಾಲ್ಮೀಕಿ: ಪ್ರೊ.ಬಿ.ಕೆ ರವಿ
: ಮಹಾಕಾವ್ಯ ರಾಮಾಯಣ ರಚಿಸಿದ ವಾಲ್ಮೀಕಿ ತನ್ನ ದೌರ್ಬಲ್ಯ ತೊರೆದು ಭಾರತದ ಆದಿಕವಿಯಾಗಿ ಪ್ರಖ್ಯಾತಿ ಹೊಂದಿದ ಜೀವನ ದಾರಿ ರೋಚಕವಾದದ್ದು ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ ರವಿ ಹೇಳಿದರು.
ಪ್ರತಿಯೊಬ್ಬರ ಜೀವನ ಕುತೂಹಲಕರ ಹಾದಿಯನ್ನು ಹೊಂದಿದ್ದು, ಸಮಾಜದಲ್ಲಿ ಮಿಶ್ರಗುಣವುಳ್ಳವರು ಇದ್ದಾರೆ ಆದ್ದರಿಂದ ನಮ್ಮ ವ್ಯಕ್ತಿತ್ವ ಸುಧಾರಿಸಿಕೊಳ್ಳಲು ವಾಲ್ಮೀಕಿಯಂತೆ ಒಳ್ಳೆಯ ವಾತವರಣ ಸೃಷ್ಟಿಸಿಕೊಂಡು ಉತ್ತಮರಾಗಬೇಕು ಅಂದಾಗ ಜೀವನ ಪರಿಪೂರ್ಣತೆಯನ್ನು ಪಡೆದುಕೊಳ್ಳುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕ ಚಾಂದ್ ಭಾಷ್, ಕುಮಾರನಾಯ್ಕ್, ರೊಹಿತ್ ಕುಮಾರ್, ಪ್ರವೀಣ್ ಪಾಟೀಲ್, ರಂಗನಾಥ ಕೋಳೂರು, ದೇವರಾಜ್ ಬಡಿಗೇರ್ , ಅಯ್ಯಪ್ಪ, ಮಾರುತಿ ಹಾಗೂ ಸಂತೋಷಕುಮಾರ ಸೇರಿದಂತೆ ಇತರರು ಇದ್ದರು.
Comments are closed.