ಇಂದಿರಾ ಕ್ಯಾಂಟೀನ್ ಅಧಿಕೃತ ಸ್ಥಳದಲ್ಲಿ ನಿರ್ಮಿಸಿ-ನವೀನ ಗುಳಗಣ್ಣವರ್

ಇಂದಿರಾ ಕ್ಯಾಂಟೀನ್ ಅಧಿಕೃತ ಸ್ಥಳದಲ್ಲಿ ನಿರ್ಮಿಸಿ-ನವೀನ ಗುಳಗಣ್ಣವರ್

0

Get real time updates directly on you device, subscribe now.

ಕೊಪ್ಪಳ. : . ಕಾರಟಗಿ ಪಟ್ಟಣದಲ್ಲಿ 18ನೇ ವಾರ್ಡಿನ ಹೈಟೆಕ್ ಬಸ್ ನಿಲ್ದಾಣ ಮುಂಭಾಗದ ಹಳೆ ತಹಶೀಲ್ದಾರ ಕಚೇರಿ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಇಂದಿರಾ ಕ್ಯಾಂಟೀನ್ ಸ್ಥಳ ತಾತ್ಕಾಲಿಕವಾಗಿ ನಮೂದಿಸಿದ್ದು ಅದರ ಬದಲಾಗಿ ಅಧಿಕೃತ ಸ್ಥಳದಲ್ಲಿ ಕ್ಯಾಂಟೀನ್ ಕಟ್ಟಡ ಮಾಡುವದರಿಂದ ಸಾರ್ವಜನಿಕರಿಗೆ ಒಳ್ಳೇದು ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ,ನವೀನ ಗುಳ್ಗಣ್ಣವರ ಹೇಳಿದರು. ಅವರು ಬುಧವಾರ ನಗರದ ಪತ್ರಿಕಾ ಭವದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ತಾತ್ಕಾಲಿಕವಾಗಿ ಕಟ್ಟಡ ಮಾಡುವುದರಿಂದ 87 ಲಕ್ಷ ಸರಕಾರಿ ದುಡ್ಡು ಪೋಲ್ ಆಗುವುದು ಅರ್ಥವಿಲ್ಲ, ನಮ್ಮ ಉದ್ದೇಶ ಕ್ಯಾಂಟೀನ್ ಕಟ್ಟಲಿಕ್ಕೆ ನಮಗೆ ಅಭ್ಯಂತರ ವಿಲ್ಲಾ ಸಾರ್ವಜನಿಕ ಆಸ್ಥಿ ಸಾರ್ವಜನಿಕರಿಗೆ ಮೀಸಲಾಗಬೇಕು ಹೊರತು ಸರಕಾರಿ ದುಡ್ಡು ಪೋಲ್ ಆಗಬಾರದು, ಅದಕ್ಕೆ ಈ ಸ್ಥಳ ಕೊಪ್ಪಳ ಎಸಿ ಯವರ ಬಳಿ ಇರುವದರಿಂದ ಪುರಸಭೆ ಮುಖ್ಯಾಧಿಕಾರಿ, ಇದನ್ನು ಪರಿಗಣಿಸದೇ ಕಟ್ಟಡ ನಿರ್ಮಿಸಲು ಅನುಮತಿ ನೀಡಿದ್ದಾರೆ, ತಾತ್ಕಾಲಿಕ ಸ್ಥಳದಲ್ಲಿ ಕಟ್ಟಡ ಕಟ್ಟವದು ಸೂಕ್ತವಲ್ಲ, ಇದರಿಂದ ಸರಕಾರಿ ದುಡ್ಡು ವ್ಯರ್ಥವಾಗುತ್ತದೆ, ಮೊದಲಿಗೆ ಈ ಸ್ಥಳ ಬಸ್ ನಿಲ್ದಾಣಕ್ಕೆ ಗುರುತಿಸಿದೆ.2024 ಆಗಿನ ದಂಢಾಧಿಕಾರಿಗಳಾದ  ಕವಿತಾ ರವರು ಸ.ನಂ 295/1 ಸ್ಥಳ ಸರಕಾರಿ ಅಧಿನಕ್ಕೆ ಒಳಪಟ್ಟಿರುವದಿಲ್ಲ ತಾಂತ್ರಿಕ ದೋಷದಿಂದ ತಡೆಯಾಜ್ಞ ಇರುತ್ತದೆ ‘ಎಂದು ಅಂದಿನ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿಯವರ ಗಮನಕ್ಕೆ ತಂದಿದ್ದರು,
ಸ್ಥಳ ಕ್ಯಾಂಟೀನ್ ಕಟ್ಟಡಕ್ಕೆ ಸೂಕ್ತವಲ್ಲ. ಆದಕಾರಣ ಸಂಬಂಧಪಟ್ಟ ಮೇಲಾಧಿಕಾರಿಗಳು ಈ ಸ್ಥಳವನ್ನ ಮರುಪರಿಶೀಲಿಸಿ, ಅಧಿಕೃತ ಸ್ಥಳದಲ್ಲಿ ಕ್ಯಾಂಟಿನ್‌
ನಿರ್ಮಿಸಿ ಎಂದು ಹೇಳಿದರು. ಸುದ್ದಿಗೊಷ್ಟಿಯಲ್ಲಿ ಬಿಜೆಪಿ ಎಂ ಎಲ್ ಸಿ ಹೇಮಲತಾ ನಾಯಕ, ಯುವ ಮೋರ್ಚಾ ಜಿಲ್ಲಾಧ್ಯಕ್ಷ, ಮೌನೇಶ್,ಕಾರಟಗಿ ಪುರಸಭೆ ಸದಸ್ಯರಾದ ಆನಂದ, ಫಕೀರಪ್ಪ, ಧನಂಜಯ,ಸೇರಿದಂತೆ ಇತರರು ಉಪಸ್ಥಿತರಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!