ಜಮೀನು ಗಲಾಟೆ: ಯುವಕನಿಗೆ ಚಾಕು ಇರಿತ
ತಳಕಲ್ : ತಾಲೂಕಿನ ತಳಕಲ್ ಗ್ರಾಮದ ಹೊರವಲಯದಲ್ಲಿ ಸಹೋದರ ಸಂಬಂಧಿಕರ ನಡುವೆ ಜಮೀನು ವಿಚಾರವಾಗಿ ನಡೆದ ಜಗಳ ನಡೆದು ವಿಕೋಪಕ್ಕೆ ತಿರುಗಿ ಯುವಕನಿಗೆ ಚಾಕು ಇರಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಗವಿಸಿದ್ದಪ್ಪ(೩೦) ಚಾಕು ಇರಿತಕ್ಕೊಳಗಾದ ಯುವಕ ಎಂದು .
ಅವರ ಸಹೋದರ ಸಂಬಂಧಿ ಮುತ್ತಣ್ಣ ಶಾಂತಪ್ಪ ಪೂಜಾರಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ಗವಿಸಿದ್ದಪ್ಪನಿಗೆ ಚಾಕು ಇರಿದು ಪರಿಣಾಮ ಗಂಭಿರವಾಗಿ ಗಾಯಗೊಂಡಿದ್ದು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.