ಜಿ.ಪಂ ಸಿಇಓ ರಾಹುಲ್ ರತ್ನಂ ಪಾಂಡೆ ತಾಲೂಕಿನ ವಿವಿಧ ಹಳ್ಳಿಗಳಿಗೆ ಭೇಟಿ ಪರಿಶೀಲನೆ
ಕುಷ್ಟಗಿ 01; ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆ ಭೇಟಿ ನೀಡಿ ಪರಿಶೀಲಿಸಿದರು.
ಹನುಮಸಾಗರ ಗ್ರಾಮದ ತಂಗ್ಯಮ್ಮನ ಕಲ್ಯಾಣಿ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳನ್ನು ಪರಿಶೀಲನೆ ಮಾಡಿದರು.
ಆರೋಗ್ಯ ಕೇಂದ್ರದಲ್ಲಿ ನರೇಗಾ ಯೋಜನೆ ಅಡಿ ಇಕೋ ಪಾರ್ಕ್ ಕಾಮಗಾರಿಯನ್ನು ವೀಕ್ಷಣೆ ಮಾಡಿದರು.
ನಂತರ ಯರಗೇರಾ ಗ್ರಾಮದ ಸೋಮಲಿಂಗೇಶ್ವರ ಕಲ್ಯಾಣಿ ವೀಕ್ಷಣೆ ಮಾಡಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದರು.
ನಂತರ ಕುಷ್ಟಗಿ ಪಟ್ಟಣದ MSPC ಗೋದಾಮ, ಅಕ್ಷರ ದಾಸೋಹ ಗೋದಾಮ ವೀಕ್ಷಣೆ ಮಾಡಿ ಆಹಾರ ಗುಣಮಟ್ಟ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿವಪ್ಪ ಸುಬೇದಾರ್,ಸಹಾಯಕ ನಿರ್ದೇಶಕರಾದ ನಿಂಗನಗೌಡ ವಿ ಹೆಚ್, ಸಿಡಿಪಿಓ ಹಾಗೂ ವಿವಿಧ ತಾಲೂಕ ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು, ತಾಲೂಕ ನರೇಗಾ ಸಿಬ್ಬಂದಿಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.
Comments are closed.