ಸರಳತೆ, ಶ್ರದ್ಧೆಯೇ ಸಾಧನೆಗೆ ಕಾರಣ — ಸಂಸದ ರಾಜಶೇಖರ ಹಿಟ್ನಾಳ್
ಡಾ.ಶ್ರೀನಿವಾಸ ಹ್ಯಾಟಿ ಅಭಿನಂದನಾ ಸಮಾರಂಭಕೊಪ್ಪಳ: ಸರಳತೆ ಮತ್ತು ಶ್ರದ್ಧೆ ಮೈಗೂಢಿಸಿಕೊಂಡರೇ ಸಾಧನೆಯ ಮೆಟ್ಟಿಲುಗಳನ್ನು ಏರಬಹುದು ಎಂಬುದಕ್ಕೆ ಡಾ.ಶ್ರೀನಿವಾಸ ಹ್ಯಾಟಿ ಅವರು ಸಾಕ್ಷಿಯಾಗಿದ್ದಾರೆ ಎಂದು ಸಂಸದ ರಾಜಶೇಖರ ಹಿಟ್ನಾಳ್ ಹೇಳಿದರು.
25 ವರ್ಷಗಳಿಂದ ವೈದ್ಯಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಗೈಯುತ್ತಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಶಾಖೆಯ ಉಪ ಸಭಾಪತಿಗಳಾಗಿ ಆಯ್ಕೆಯಾಗಿರುವ ಡಾ.ಶ್ರೀನಿವಾಸ ಹ್ಯಾಟಿ ಅವರಿಗೆ ನಗರದ ಬಾಲಾಜಿ ಪಂಕ್ಷನ್ ಹಾಲ್ ನಲ್ಲಿ ಸ್ನೇಹ ಬಳಗದಿಂದ ಭಾನುವಾರ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜೀವನದಲ್ಲಿ ಸರಳತೆಯೊಂದಿಗೆ ಶ್ರದ್ಧೆ ಮೈಗೂಢಿಸಿಕೊಂಡರೇ ಸಾಧನೆ ಒಲಿಯಲಿದೆ ಎಂಬುದನ್ನು ಭಗತ್ ಸಿಂಗ್ ಅವರ ಹೇಳುತ್ತಾರೆ
ಅದರಂತೆ ಡಾ.ಶ್ರೀನಿವಾಸ ಹ್ಯಾಟಿ ಅವರು ಬದುಕು ಸಾಗಿಸುತ್ತಿದ್ದಾರೆ. ಹೀಗಾಗಿಯೇ ರೆಡ್ ಕ್ರಾಸ್ ಶಾಖೆಯ ಉಪ ಸಭಾಪತಿಗಳಾಗಿ ಅವರು ಆಯ್ಕೆಯಾಗಿ ಸಮಾಜಮುಖಿ ಕೆಲಸ ಮಾಡಲು ಸಾಧ್ಯವಾಗಿದೆ.
ಹ್ಯಾಟಿ ಅವರು ಸಮಾಜಕ್ಕಾಗಿ ಯಾವುದೇ ಪ್ರಚಾರವಿಲ್ಲದೇ ಕೆಲಸ ಮಾಡುತ್ತಿದ್ದಾರೆ.
ಶೈಕ್ಷಣಿಕ, ವೈದ್ಯಕೀಯ ರಂಗದಲ್ಲಿ ಎಲ್ಲರನ್ನು ಒಗ್ಗೂಡಿಸಿಕೊಂಡು ಮುನ್ನಡೆಯುತ್ತಿದ್ದಾರೆ.
ಅದರಲ್ಲಿಯೂ ಕೊಪ್ಪಳ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯನ್ನು ಮೂರು ಬಾರಿ ರಾಜ್ಯ ಮಟ್ಟದ ಪ್ರಶಸ್ತಿ ತೆಗೆದುಕೊಳ್ಳುವಂತೆ ಮಾಡುವುದರ ಹಿಂದೆ ಅವರ ಶ್ರಮ ಅಪಾರವಾಗಿದೆ.
ಈ ಮೂಲಕ ಮೈನಳ್ಳಿ ಗ್ರಾಮದಿಂದ ಕೊಪ್ಪಳಕ್ಕೆ ಬಂದು ರಾಜ್ಯ ಮಟ್ಟದವರೆಗೆ ಬೆಳೆದಿರುವುದು ಸಂತಸ ತಂದಿದೆ ಎಂದರು.
ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಡಾ.ಶ್ರೀನಿವಾಸ ಅವರು ಕಳೆದ 25 ವರ್ಷಗಳಿಂದ ವೈದ್ಯಕೀಯ, ಶಿಕ್ಷಣ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಮೂಲಕ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ.
ಹ್ಯಾಟಿ ಅವರು ಬಹಳ ಸೌಮ್ಯ ಸ್ವಭಾವದ ವ್ಯಕ್ತಿ.
ನಾವೆಲ್ಲ ಸಮಾಜದಿಂದ ನಮಗೇನು ಸಿಕ್ಕಿದೆ ಎಂದುಕೊಳ್ಳುತ್ತೇವೆ. ಆದರೆ, ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂಬುದನ್ನು ಮನನ ಮಾಡಿಕೊಳ್ಳಬೇಕು.
ಹ್ಯಾಟಿ ಅವರ ಕುಟುಂಬ ಬಹಳ ಸಂಸ್ಕಾರಯುತವಾಗಿದೆ. ಹೀಗಾಗಿ ಜೀವನದಲ್ಲಿ ಅವರ ಕುಟುಂಬ ಮುಂದೆ ಬರುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಹ್ಯಾಟಿ ಅವರಲ್ಲಿ ಸೇವಾ ಮನೋಭಾವವಿದೆ. ಹೀಗಾಗಿ ಕಳೆದ 25 ವರ್ಷಗಳಿಂದ ವೈದ್ಯಕೀಯ ರಂಗದಲ್ಲಿ ತಮ್ಮದೇ ಆದ ಛಾಪೂ ಮೂಡಿಸಿದ್ದಾರೆ.
ಅಲ್ಲದೆ, ಶ್ರೀನಿವಾಸ ಹ್ಯಾಟಿ ಅವರು ಭಾಗವಹಿಸದ ಕ್ಷೇತ್ರಗಳಿಲ್ಲ. ಎಲ್ಲ ರಂಗದಲ್ಲಿಯೂ ತಮ್ಮನ್ಮು ತಾವು ತೊಡಗಿಸಿಕೊಂಡಿದ್ದಾರೆ. ಹ್ಯಾಟಿ ಅವರ ಸಾಧನೆ ನೋಡಿ ಸಂತಸ ತಂದಿದೆ ಎಂದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಕ್ಯಾವಟರ್ ಮಾತನಾಡಿ, ಹ್ಯಾಟಿ ಅವರನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಅವರಲ್ಲಿರುವ ಸಾಮಾಜಿಕ ಕಳಕಳಿ ಅಪಾರ.
ಕಳೆದ 25 ವರ್ಷದಿಂದ ವೈದ್ಯಕೀಯ ರಂಗದಲ್ಲಿ ಸೇವೆ ಸಲ್ಲಿಸಿರುವುದು ಮೆಚ್ಚುವಂತಹ ಸಂಗತಿ.
ಹ್ಯಾಟಿ ಅವರು ಜನಪರ ಸೇವೆಯಲ್ಲಿ ಮಂಚೂಣಿಯಲ್ಲಿದ್ದಾರೆ. ಸಮಯ ಪ್ರಜ್ಞೆ ಅರಿತು ಕೆಲಸ ಮಾಡುತ್ತಿದ್ದಾರೆ.
ಈ ಹಿಂದೆ ಸಣ್ಣ- ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಬೇರೆ ಜಿಲ್ಲೆಗೆ ಹೋಗಬೇಕಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಎಲ್ಲ ರೀತಿಯ ಅತ್ಯುತ್ತಮ ಚಿಕಿತ್ಸೆಗಳು ಸ್ಥಳೀಯವಾಗಿ ದೊರೆಯುತ್ತಿವೆ. ಇದಕ್ಕೆ ಮೂಲ ಕಾರಣ ರೆಡ್ ಕ್ರಾಸ್ ಸಂಸ್ಥೆ. ಈ ಸಂಸ್ಥೆ ಹುಟ್ಟು ಹಾಕುವಲ್ಲಿ ಡಾ.ಶ್ರೀನಿವಾಸ ಹ್ಯಾಟಿ ಅವರು ಕೂಡ ಒಬ್ಬರು ಎಂಬುದು ಗಮನಾರ್ಹ.
ಅವರ ಮುಂದಿನ ಜೀವನ ಉತ್ತುಂಗಕ್ಕೆ ಇನ್ನಷ್ಡು ಹೇರಲಿ ಎಂದು ಆಶಿಸಿದರು.
ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿವಿ.ಚಂದ್ರಶೇಖರ, ಸರಕಾರಿ ಅಭಿಯೋಜಕರಾದ ಬಿ.ಎಸ್.ಪಾಟೀಲ್ ತಾವರಗೇರಾ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಮಾಜಿ ಉಪಾಧ್ಯಕ್ಷ ಶಂಭುಲಿಂಗನಗೌಡ ಹಲಗೇರಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ ಜುಮ್ಮಣ್ಣನವರ, ರೆಡ್ ಕ್ರಾಸ್ ಸಂಸ್ಥೆಯ ಮಾಜಿ ಉಪ ಸಭಾಪತಿ ಅಪ್ಪಾರಾವ ಅಕ್ಕೋಣಿ ಹಾಗೂ
ಸ್ನೇಹ ಬಳಗದ ಶರಣಪ್ಪ ಬಾಚಲಾಪೂರ, ರಾಜೇಶ ಯಾವಗಲ್, ಡಾ.ಶಿವನಗೌಡ ಪಾಟೀಲ್ ಮಾತನಾಡಿದರು.
ರೆಡ್ ಕ್ರಾಸ್ ನ ಜಿಲ್ಲಾ ಶಾಖೆಯ ಸಭಾಪತಿಗಳಾದ ಸೋಮರಡ್ಡಿ ಅಳವಂಡಿ ಪ್ರಾಸ್ಥವಿಕವಾಗಿ ಮಾತನಾಡಿದರು.
ಡಾ.ಎಸ್.ಕರಮುಡಿ ನಿರೂಪಿಸಿದರು. ಶಿವಕುಮಾರ ಕೂಕನೂರು ಸ್ವಾಗತಿಸಿದರು.
ಕಾಶ್ಮೀರದ ಫಹಲ್ಗಾಂನಲ್ಲಿ ಹುತಾತ್ಮರಾದವರಿಗೆ
ಕಾರ್ಯಕ್ರಮಕ್ಕೂ ಮುನ್ನ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಹಿರಿಯ ಸಾಹಿತಿ
ಎಚ್.ಎಸ್.ಪಾಟೀಲ್, ಜಿಪಂ ಮಾಜಿ ಅಧ್ಯಕ್ಷ ಎಚ್.ಎಲ್.ಹಿರೇಗೌಡ್ರು, ಪ್ರಥಮ ದರ್ಜೆ ಗುತ್ತಿಗೆದಾರ ಬಸವರಾಜ ಪುರದ, ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ, ಪ್ರಭು ಹೆಬ್ಬಾಳ
ಪ್ರಭಂಜನ ಮೆಹತಾ, ಭಾರೆಕ್ರಾ ಸಂಸ್ಥೆಯ ಅನ್ನಪೂರ್ಣ ಸದಾಶಿವ, ಮಂಜುನಾಥ ಡೊಳ್ಳಿನ ಸೇರಿ ಇನ್ನಿತರರು ಇದ್ದರು.
ನಾನು ಇನ್ನೂ ಸಮಾಜಮುಖಿಯಾಗಿ ಕೆಲಸ ಮಾಡುವುದು ಬಹಳಷ್ಟಿದೆ. ಸ್ನೇಹಿತರ ಬಳಗ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ನನ್ನಲ್ಲಿ ಮತ್ತಷ್ಡು ಜವಾಬ್ದಾರಿ ಹೆಚ್ಚಳವಾಗುವಂತೆ ಮಾಡಿದೆ. ಮುಂದಿನ ದಿನಗಳಲ್ಲಿ ರೆಡ್ ಕ್ರಾಸ್ ಮೂಲಕಕೊಪ್ಪಳಕ್ಕೆ ಥಲಾಸ್ಸೇಮಿಯಾ ಹಾಗೂ ಎಸ್ ಡಿಪಿ ಸೆಂಟರ್ ತರುವ ಉದ್ದೇಶವಿದೆ. ಇಂತಹ ಎಲ್ಲ ಸಮಾಜಮುಖಿ ಕೆಲಸಗಳಿಗೆ ತಮ್ಮ ಸಹಕಾರವಿರಲಿ.ಡಾ.ಶ್ರೀನಿವಾಸ ಹ್ಯಾಟಿ, ಉಪ ಸಭಾಪತಿಗಳು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ,ರಾಜ್ಯ ಶಾಖೆ, ಬೆಂಗಳೂರು.
Comments are closed.