ಮೈಸೂರು ದಸರಾ ಕವಿಗೋಷ್ಠಿಗೆ ಪ್ರವೀಣ ಪೊಲೀಸ ಪಾಟೀಲ ಆಯ್ಕೆ 

0

Get real time updates directly on you device, subscribe now.

ಯಲಬುರ್ಗಾ : ತಾಲ್ಲೂಕಿನ ತರಲಕಟ್ಟಿ ಗ್ರಾಮದ ಪ್ರವೀಣ ಪೊಲೀಸ ಪಾಟೀಲ ಅವರನ್ನು ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಕವಿಗೋಷ್ಠಿಗೆ ಆಯ್ಕೆ ಮಾಡಲಾಗಿದೆ.
ಅಕ್ಟೋಬರ್ 9 ರಂದು ಮೈಸೂರಿನ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ನಡೆಯುವ, ಸುವರ್ಣ ಕರ್ನಾಟಕದ 31 ರಾಜ್ಯಗಳ ತನುಜಾತರ ಕವಿ ಪ್ರತಿಭೆ-ಪ್ರಬುದ್ಧತೆಯ ಬಹುತ್ವದ ಅನಾವರಣ ಈ ಕವಿಗೋಷ್ಠಿ. ಅಖಂಡ ಕರ್ನಾಟಕದ ಪ್ರಕಾಂಡ ಪಂಡಿತ ಮಂಡಳಿಯಿಂದ ಕನ್ನಡ ಸಂಸ್ಕೃತಿಯ ಕಾವ್ಯ ಚಿತ್ರಣ, ಮೈಸೂರು ಮಲ್ಲಿಗೆಯ ಊರಿನಲ್ಲಿ ಕಂಪು-ಪೆಂಪು ಬೀರುವ, ಸಮೃದ್ಧ ಕವಿಗೋಷ್ಠಿಯು ಕನ್ನಡ ಕಾವ್ಯ- ವಿಡಂಬನ ಪ್ರತಿಪಾದನ ಸಮೃದ್ಧತೆಯ ಕವಿಗೋಷ್ಠಿಗೆ ಕವಿತೆ ವಾಚಿಸಲು ಅವಕಾಶ ನೀಡಲಾಗಿದೆ ಎಂದು ಮೈಸೂರು ದಸರಾ ಕವಿಗೋಷ್ಠಿ ಉಪಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರವೀಣ ಪೊಲೀಸ ಪಾಟೀಲ ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಉಪನ್ಯಾಸಕರಾಗಿದ್ದು.ಈಗಾಗಲೇ ‘ಒಡಲ ಚಿಗುರು’ ಎನ್ನುವ ಇವರ ಕೃತಿಯು 2021 ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಧನ ಸಹಾಯದೊಂದಿಗೆ ಪ್ರಕಟಣೆಗೊಂಡಿತ್ತು. ‘ನಿರ್ದೇಶಕಿಯಾದ ನನ್ನವ್ವ’ ಕಥೆಯು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪದವಿ ವಿಭಾಗಕ್ಕೆ ಪಠ್ಯವಾಗಿದೆ. ಕನ್ನಡ ಕಾವ್ಯ ಹಾಗೂ ಕಥಾ ಸಾಹಿತ್ಯ ಪ್ರಕಾರಗಳ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.

Get real time updates directly on you device, subscribe now.

Leave A Reply

Your email address will not be published.

error: Content is protected !!