ಎನ್.ಎಸ್.ಎಸ್ ಶಿಬಿರದ ಸಮಾರೋಪ ಸಮಾರಂಭ

0

Get real time updates directly on you device, subscribe now.

ಗಂಗಾವತಿ: ನಗರದ ಜೂನಿಯರ್ ಕಾಲೇಜಿನ ೨೦೨೪-೨೫ನೇ ಸಾಲಿನ ಎನ್.ಎಸ್.ಎಸ್ ವಾರ್ಷಿಕ ವಿಶೇ? ಶಿಬಿರದ ಸಮಾರೋಪ ಸಮಾರಂಭವು ಅಕ್ಟೋಬರ್-೫ ರಂದು ಗಂಗಾವತಿ ತಾಲೂಕಿನ ರಾಮದುರ್ಗ-ಗೂಗಿಬಂಡಿ ಗ್ರಾಮದಲ್ಲಿ ನೆರವೇರಿತು.
ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾ?ಣ ಮಾಡಿದ ಗಂಗಾವತಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶಾಂತಪ್ಪ ಟಿ.ಸಿ. ಯವರು ಮಾತನಾಡುತ್ತಾ, ಮನು? ತನಗೆ ಅಗತ್ಯವಿರುವ ಯಾವುದೇ ವಸ್ತುಗಳನ್ನು ಅಗತ್ಯವಿರುವ? ಬಳಸಿದರೆ, ಪ್ರಕೃತಿಯಲ್ಲಿ ಯಾವುದೇ ಅಸಮತೋಲನ ಉಂಟಾಗುವುದಿಲ್ಲ. ಪ್ರಾಣಿ ಅಥವಾ ಪಕ್ಷಿಗಳು ಯಾವೂ ಕೂಡ ತಮಗೆ ಏನು ಬೇಕು, ಎ? ಬೇಕು, ಅ?ನ್ನು ಮಾತ್ರ ಬಳಸುತ್ತಿವೆ. ಆದರೆ ಮನು? ಮಾತ್ರ ಅಗತ್ಯವಿರುವ ವಸ್ತುಗಳನ್ನು ಅಗತ್ಯಕ್ಕಿಂತ ಹೆಚ್ಚು ಸಂಗ್ರಹಿಸುವುದರ ಮೂಲಕ ಪ್ರಾಕೃತಿಕ ಅಸಮತೋಲಕ್ಕೆ ಕಾರಣನಾಗಿದ್ದಾನೆ. ಮಾನವನ ದುರಾಸೆಗಳೇ ಇಂತಹ ವ್ಯವಸ್ಥೆಗೆ ಕಾರಣವಾಗುತ್ತಿದೆ. ಎನ್.ಎಸ್.ಎಸ್ ವಿಶೇ? ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳು ಶಿಬಿರ ಮುಗಿಯುವವರೆಗೆ ವೇಳಾಪಟ್ಟಿ ಪ್ರಕಾರ ಕೆಲಸ ನಿರ್ವಹಿಸುತ್ತೇವೆ. ಯಾವುದನ್ನೂ ಅಗತ್ಯಕ್ಕಿಂತ ಹೆಚ್ಚು ಬಳಸುವುದಿಲ್ಲ. ಹಿತಮಿತವಾಗಿ ಬಳಸುವ ಹವ್ಯಾಸವನ್ನು ಹಾಕಿಕೊಂಡಿರುತ್ತೇವೆ. ಈ ಅಭ್ಯಾಸವನ್ನು ತಮ್ಮ ನಿಜ ಜೀವನದಲ್ಲಿಯೂ ಅಳವಡಿಸಿಕೊಂಡರೆ, ನೀವು ಕೂಡ ಬದಲಾಗುತ್ತಿರಿ, ಅಲ್ಲದೇ ಇದುವೇ ನೀವು ಮಾಡುವಂತ ನಿಜವಾದ ದೇಶ ಸೇವೆಯಾಗಿದೆ ಎಂದರು.
ಶಿಬಿರದ ಶಿಬಿರಾಧಿಕಾರಿಗಳಾದ ರುದ್ರೇಶ್ ತಬಾಲಿಯವರು ೭ ದಿನಗಳ ಶಿಬಿರದ ವರದಿಯನ್ನು ಓದಿದರು. ಇನ್ನೊಬ್ಬ ಶಿವರಾಧಿಕಾರಿಗಳಾದ ಡಾ. ಲಿಂಗಣ್ಣ ಜಂಗಮರಹಳ್ಳಿಯವರು ಮಾತನಾಡುತ್ತಾ ಮೊದಲ ಬಾರಿಗೆ ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿಯಾಗಿ ೧೦೦ ಜನ ಸ್ವಯಂಸೇವಕ/ಸೇವಕಿಯರನ್ನು ಸಂಘಟಿಸಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಿ ಶಿಬಿರವನ್ನು ಅತ್ಯಂತ ಅಚ್ಚುಕಟ್ಟಾಗಿ ಸಂಘಟಿಸಲಾಗಿದೆ. ಈ ಶಿಬಿರದ ಸದುಪಯೋಗವನ್ನ ತಾವು ಪಡೆದುಕೊಂಡು ಜವಾಬ್ದಾರಿ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದರು.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗೂಗಿಬಂಡಿಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ನಾಗರಾಜ್ ಅವರು ಮಾತನಾಡುತ್ತಾ, ಎನ್.ಎಸ್.ಎಸ್ ಶಿಬಿರಗಳು ವಿದ್ಯಾರ್ಥಿಗಳ ಜೀವನದಲ್ಲಿ ಬಹಳ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ. ವಿಶೇ?ವಾಗಿ ನಾಯಕತ್ವ ಗುಣ ಮತ್ತು ಸಭಾ ಭಯ ನಿವಾರಣೆ ಮಾಡುವುದಲ್ಲದೇ ಸೌಹಾರ್ದಯುತ ಬದುಕನ್ನು ಕಲಿಸುತ್ತವೆ ಎಂದರು.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀನಿವಾಸ್ ಕೆ.ಎಸ್ ಇವರು ಮಾತನಾಡುತ್ತಾ, ನಮ್ಮ ಸಂಸ್ಥೆಯಲ್ಲಿ ಜೂನಿಯರ್ ಕಾಲೇಜಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಶಿಬಿರ ಸಂಘಟಿಸಿ ಸಂಸ್ಥೆಗೆ ಉಪಯುಕ್ತವಾದ ಶ್ರಮದಾನವನ್ನು ಮಾಡಿದ್ದಾರೆ. ವಿಶೇ?ವಾಗಿ ವೇದಿಕೆ ನಿರ್ಮಾಣ, ಇಡೀ ಶಾಲೆಯ ಕಟ್ಟಡ ಮತ್ತು ಕಂಪೌಂಡಿಗೆ ಸುಣ್ಣ ಬಣ್ಣ, ಸಂಸ್ಥೆಯ ಆವರಣ ಸ್ವಚ್ಛತೆ ಹಾಗೂ ಹಳ್ಳಿಯ ಪ್ರಮುಖ ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಮಾಡುವುದರ ಮೂಲಕ ಗ್ರಾಮೀಣ ಜನರಲ್ಲಿ ಸ್ವಚ್ಛತಾ ಅರಿವು ಮೂಡಿಸುವಲ್ಲಿ ಶಿಬಿರಾರ್ಥಿಗಳು ಯಶಸ್ವಿಯಾಗಿದ್ದಾರೆ ಎಂದರು.
ಸರಕಾರಿ ಪದವಿಪೂರ್ವ ಕಾಲೇಜಿನ ಗ್ರಂಥಪಾಲಕರಾದ ರಮೇಶ್ ಗಬ್ಬೂರುರವರು ಮಾತನಾಡುತ್ತಾ ಎನ್.ಎಸ್.ಎಸ್ ವಾರ್ಷಿಕ ವಿಶೇ? ಶಿಬಿರಗಳು ವಿದ್ಯಾರ್ಥಿ ಯುವಜನರ ವ್ಯಕ್ತಿತ್ವ ವಿಕಸನಕ್ಕೆ ಉತ್ತಮ ವೇದಿಕೆಗಳಾಗಿವೆ. ಸಂಸ್ಥೆಯಲ್ಲಿ ನಡೆಯುವಂತಹ ಯಾವುದೇ ಪಠ್ಯೇತರ ಚಟುವಟಿಕೆಗಳಲ್ಲಿ ನಾನು ನಿಮ್ಮೊಂದಿಗೆ ಇರುತ್ತೇನೆ. ಸಂಸ್ಥೆಯ ಸರ್ವತೋಮುಖ ಪ್ರಗತಿಯಲ್ಲಿ ಎನ್.ಎಸ್.ಎಸ್ ಸ್ವಯಂ ಸೇವಕರು ಶ್ರಮಿಸಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಬಸಪ್ಪ ನಾಗೋಲಿಯವರು, ಸಾಹಿತಿ ದೇವನೂರು ಮಹಾದೇವ ಇವರ ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುತ್ತದೆ ಎಂಬ ಮಾತನ್ನು ಉಲ್ಲೇಖಿಸಿ ಮಾತನಾಡುತ್ತಾ, ಶಿಬಿರದಲ್ಲಿ ಅನೇಕ ಉದಾತ್ತವಾದ ವಿಚಾರಗಳನ್ನು ಬಿತ್ತಲಾಗಿದೆ. ಅದು ನಿಮ್ಮ ಭಾವಿ ಜೀವನದಲ್ಲಿ ಬಹಳ ಪರಿಣಾಮಕಾರಿ ಪ್ರಭಾವವನ್ನು ಬೀರುತ್ತವೆ. ತಮ್ಮ ಭವಿ?ವನ್ನು ಬದಲಾಯಿಸುವಂತಹ ವಿ?ಯಗಳಾದ ವ್ಯಕ್ತಿತ್ವ ವಿಕಸನ, ಜಾನಪದ ಮೌಲ್ಯಗಳು, ೩೭೧ ಜೇ ಮೀಸಲಾತಿ, ಸಾವಯವ ಕೃಷಿ ಮತ್ತು ಬಹುತ್ವ ಭಾರತ ಇಂತಹ ಪ್ರಮುಖ ವಿ?ಯಗಳು ಈ ಶಿಬಿರದಲ್ಲಿ ಚರ್ಚೆಯಾಗಿವೆ. ಹೀಗಾಗಿ ತಮ್ಮ ಜೀವನದ ಸುಮಧುರ ಘಟನೆಗಳಲ್ಲಿ ಈ ಶಿಬಿರ ಕೂಡ ಒಂದು ಆಗುತ್ತದೆ, ಇದರಲ್ಲಿ ಎರಡು ಮಾತು ಇಲ್ಲ ಎಂದರು.
ವೇದಿಕೆ ಮೇಲೆ ಗ್ರಾಮದ ಪ್ರಮುಖರಾದ ಪ್ರಮುಖರು ಹಾಗೂ ಗ್ರಾ.ಪಂ ಸದಸ್ಯರಾದ ಶ್ರೀಮತಿ ಲಕ್ಷ್ಮಮ್ಮ ಗುಂಟೂರು, ಶಾಲೆಯ ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಶ್ರೀಮತಿ ನಿರ್ಮಲ, ಎಸ್.ಸೂರ್ಯನಾರಾಯಣ, ಕುಮಾರಸ್ವಾಮಿ, ಮಹೇಶ್ ಸ್ವಾಮಿ, ಹನುಮಂತಪ್ಪ, ಸಿಎಚ್‌ಪಿ ಶ್ರೀನಿವಾಸ್, ಎಸ್. ಭಾಸ್ಕರ್‌ರಾವ್, ಎಸ್.ವಿ ರಾಮರಾವ್, ಬಸಯ್ಯಸ್ವಾಮಿ, ಕೆ. ವೆಂಕಟೇಶ್ವರ, ಕೆ. ನಾಗೇಶ್ವರ್‌ರಾವ್, ಶ್ರೀಮತಿ ಮೆಹಬೂಬಿ, ಜೆ. ಸಾಯಿಬಾಬಾ, ಜಿ. ವೆಂಕಟೇಶ್, ಜೆ. ಸತ್ಯನಾರಾಯಣ, ಎಸ್. ಶೇಷಾರಾವ್, ಜಿ.ಸುಬ್ಬರಾವ್, ಜೆ. ಸತ್ಯನಾರಾಯಣ, ಬಸವನದುರ್ಗ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಚತ್ರಪ್ಪ ತಂಬೂರಿಯವರು ಹಾಗೂ ಇತರೆ ಪ್ರಮುಖರು ಭಾಗವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಸ್ವಾಗತವನ್ನು ಹಾಗೂ ವಂದನಾರ್ಪಣೆಯನ್ನು ಶಿಬಿರಾರ್ಥಿಗಳು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಶಿಬಿರದ ಯಶಸ್ಸಿಗೆ ಸಹಕರಿಸಿದ ಊರಿನ ಗಣ್ಯರನ್ನು ಹಾಗೂ ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಶಿಬಿರಾರ್ಥಿಗಳಲ್ಲಿ ಕೆಲವರನ್ನು ಉತ್ತಮ ಶಿಬಿರಾರ್ಥಿಗಳನ್ನಾಗಿ ಆಯ್ಕೆ ಮಾಡಿ ಸಮಾರೋಪ ಸಮಾರಂಭದಲ್ಲಿ ಗೌರವಿಸಲಾಯಿತು.

Get real time updates directly on you device, subscribe now.

Leave A Reply

Your email address will not be published.

error: Content is protected !!