ಅಂಬೇಡ್ಕರ್‌ರನ್ನು ಅವಮಾನಿಸಿದ ಅಮಿತ್ ಶಾ ರಾಜೀನಾಮೆ ನೀಡಲು ಮನವಿ

0

Get real time updates directly on you device, subscribe now.

ಕೊಪ್ಪಳ : ಅಂಬೇಡ್ಕರ್ ರನ್ನು ಅವಮಾನಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕ್ಷಮೆಯಾಚಿಸಿ ಅವರ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ ಸಂಘಟನೆ ಕೊಪ್ಪಳ ಜಿಲ್ಲೆಯ ಘಟಕದವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು

ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ನಿಂಗಪ್ಪ ಜಿ ಬೆಣಕಲ್ ಮಾತನಾಡಿ ಡಾ.ಬಾಬಾಸಾಹೇಬ್ ಅಂಬೇಡ್ಕ‌ರ್ ಅವರ ಹೆಸರನ್ನು ಪದೇ ಪದೇ ಬಳಸುವುದು ಶೋಕಿಯಾಗಿದೆ. ಅಂಬೇಡ್ಕ‌ರ್ ಅವರ ಹೆಸರು ಬದಲಿಗೆ ದೇವರ ಹೆಸರನ್ನು ಹೇಳಿದ್ದರೆ ಏಳು ಜನ್ಮದುದ್ದಕ್ಕೂ ಸ್ವರ್ಗ ಸಿಗುತಿತ್ತು ಎಂಬ ಅಮಿತ್ ಶಾ ಅವರ ಹೇಳಿಕೆ ಅಂಬೇಡ್ಕರ್ ವಿರೋಧಿ ಮನೋಭಾವದಿಂದ ಕೂಡಿದೆ ಎಂದು ಆಕ್ರೋಶ ಹೊರ ಹಾಕಿದರು.

ಅಮಿತ್ ಶಾ ಅವರ ಇಂತಹ ಅಸೂಕ್ಷ್ಮ ಮತ್ತು ಅಭದ್ರ ಹೇಳಿಕೆ ಇಡೀ ದೇಶದ ಶೋಷಿತ ಸಮುದಾಯಗಳ ಸಂಕಷ್ಟ ಮತ್ತು ಅವಮಾನವನ್ನು ಪುನಃ ಒತ್ತಿಹೇಳುತ್ತದೆ ಎಂದು ಅವರ ಹೇಳಿಕೆಯನ್ನು ಖಂಡಿಸಿದೆ. ಎಂದರು

ಈ ಸಂದರ್ಭದಲ್ಲಿ ಕೊಪ್ಪಳ ತಾಲೂಕ ಕಾರ್ಯದರ್ಶಿ ಮಹಾಂತೇಶ್ ಮ್ಯಾಗಳಮನಿ
ಜಿಲ್ಲಾ ಖಜಾಂಚಿ ಯಮನೂರಪ್ಪ ಬಣಕಾರ, ಮೈಲಾಪ್ಪ ಮಾದಿನೂರು,
ಯಲ್ಲಪ್ಪ ಸಣ್ಣಿಗನವರ. ಕರಿಯಪ್ಪ ಮಣ್ಣಿನವರ, ಶಶಿಕಲಾ ಮಠದ
ಸಲೀಮಾ ಜಾನ್ ಚಿಂತಕರು ಕೊಪ್ಪಳ
ಸಂಜಯ ದಾಸರ ಕೌಜಗೇರಿ ಅಲೆಮಾರಿ ಜಿಲ್ಲಾಧ್ಯಕ್ಷರು ಕೊಪ್ಪಳ
ರಾಮಲಿಂಗ ಶಾಸ್ತ್ರಿ ಹೋರಾಟಗಾರರು ಕೊಪ್ಪಳ

ಫೋಟೋ : ಅಂಬೇಡ್ಕರ್ ರನ್ನು ಅವಮಾನಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕ್ಷಮೆಯಾಚಿಸಿ ಅವರ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ಕೊಪ್ಪಳ ಜಿಲ್ಲಾ ಸಂಘಟನೆಯವತಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು

Get real time updates directly on you device, subscribe now.

Leave A Reply

Your email address will not be published.

error: Content is protected !!