ಸಂಜೀವಿನಿ ಯೋಜನೆಯ ವಾರ್ಷಿಕ ಸಾಮಾನ್ಯ ಸಭೆ
ಇಂದು ದಿ: 06-10-2024 ರಂದು ಕೊಪ್ಪಳ ತಾಲೂಕಿನ ಕೋಳೂರು ಶ್ರೀ ಪ್ರಗತಿ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಮಹಿಳಾ ಒಕ್ಕೂಟ (ರಿ) ದ ವಾರ್ಷಿಕ ಸಾಮಾನ್ಯ ಸಭೆಯನ್ನು ಸದರಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಶಕುಂತಲಾ ಪುಣ್ಯಮೂರ್ತಿ ರವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿದರು.
ಸದರಿ ಸಭೆಯನ್ನು ಉದ್ದೇಶಿಸಿ, ಸಂಜೀವಿನಿ ಯೋಜನೆಯ ವಲಯ ಮೇಲ್ವಿಚಾರಕರಾದ ವೆಂಕಟೇಶ ರವರು ಮಾತನಾಡುತ್ತಾ, ಸದರಿ ಗ್ರಾಮ ಪಂಚಾಯತಿ ಮಟ್ಟದ ಮಹಿಳಾ ಒಕ್ಕೂಟದಡಿಯ ಸಂಘಗಳ ಮಹಿಳಾ ಸದಸ್ಯರುಗಳಿಗೆ ಕೌಶಲ್ಯ & ಸ್ವಯಂ ಉದ್ಯೋಗದ ತರಬೇತಿಗಳನ್ನು ನೀಡುತ್ತಿದೆ. ಹಾಗೂ ವಿವಿಧ ಇಲಾಖೆಗಳ ಯೋಜನೆಗಳನ್ನು ನಿಗಧಿತವಾಗಿ ಎಲ್ಲಾ ಸೌಲಭ್ಯಗಳನ್ನು ಈ ಸಂಜೀವಿನಿ ಯೋಜನೆಯ ಮೂಲಕ ನೀಡುತ್ತಿದ್ದು, ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದಿ ಆದಾಯೋತ್ಪನ್ನ ಚಟುವಟಿಕೆಗಳನ್ನು ಕೈಗೊಂಡು ಮಹಿಳಾ ಉದ್ಯಮಿಗಳಾಗುತ್ತಿದ್ದಾರೆ.
ಪ್ರಸ್ತುತ ವರ್ಷದಲ್ಲಿ ಈ ಒಕ್ಕೂಟದಡಿಯ ಮಹಿಳೆಯರು ಒಕ್ಕೂಟದಿಂದ CIF & CEF ಸಾಲ ಪಡೆದು ಮೂರು-ನಾಲ್ಕು ಆದಾಯೋತ್ಪನ್ನ ಚಟುವಟಿಕೆ ಮಾಡಿಕೊಂಡು ಲಕ್ಷ ರೂಪಾಯಿ ಮೇಲ್ಪಟ್ಟು ಆದಾಯ ಗಳಿಸುತ್ತಾ ಲಖಪತಿಗಳಾಗಿದ್ದು, ಅವರನ್ನು ಗುರುತಿಸಿ ಸದರಿ “ಲಖಪತಿ ದೀದಿ” ಗೆ ದೆಹಲಿಯಲ್ಲಿ ಸನ್ಮಾಸಲಾಯಿತು.
ಹೀಗೆ ಒಕ್ಕೂಟದಡಿ ಹಲವಾರು ತರಬೇತಿಗಳನ್ನು ನೀಡುತ್ತಾ, ಸೌಲಭ್ಯಗಳನ್ನು ಕೊಡಿಸುತ್ತಾ, ಸಂಜೀವಿನಿ ಯೋಜನೆ ಮಹಿಳೆಯರನ್ನು ಪ್ರೋತ್ಸಾಹಿಸುತ್ತಿದೆ ಎಂದು ಹೇಳಿದರು.
ಸದರಿ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ಗೌರಮ್ಮ ಆದಿ, ಕಾರ್ಯದರ್ಶಿಯವರಾದ ದೇವಮ್ಮ ಕಾಟ್ರಳ್ಳಿ, ಉಪಕಾರ್ಯದರ್ಶಿ ಲಕ್ಷ್ಮವ್ವ ಹುಳಿಮುದ್ದಿ ಹಾಗೂ ಸರ್ವ ಪದಾಧಿಕಾರಿಗಳು ಮತ್ತು ಒಕ್ಕೂಟದ ಸಿಬ್ಬಂದಿಗಳಾದ MBK ಯಾದ ಶಶಕಲಾ ಶೆಲ್ಯೂಡಿ, LCRP ರವರಾದ ಪಾರ್ವತಿ, ಗಂಗಮ್ಮ, ಶೈಲಾ, ಪಶು ಶಖಿ ಜ್ಯೋತಿ, SVEP CRP ಶಶಕಲಾ ಹಡಪದ, ವಿದ್ಯಾ ಹಾಗೂ ಎಲ್ಲಾ ಸ್ವಸಹಾಯ ಗುಂಪುಗಳ ಮಹಿಳಾ ಸದಸ್ಯರು ಹಾಜರಿದ್ದರು.
Comments are closed.