ಪ್ರತಿಭಟನೆ ಹಾಗೂ ಹೋರಾಟ ಪ್ರತಿಯೊಬ್ಬರ ಹಕ್ಕು- ನವೀನಕುಮಾರ ಈ ಗುಳಗಣ್ಣವರ
ಇತ್ತೀಚಿಗೆ ಕೊಪ್ಪಳ ತಾಲೂಕಿನ ಕವಲೂರ ಗ್ರಾಮದ ಮಹಿಳೆಯರು ತಮ್ಮ ಗ್ರಾಮದ ರಸ್ತೆ ಅಭಿವೃದ್ಧಿಗಾಗಿ ಧರಣಿ ಆರಂಭಿಸಿದ್ದರು. ಸ ರ್ಕಾರಿ ಅಧಿಕಾರಿಗಳು 14 ಜನರ ಮೇಲೆ ಕೇಸ್ ಮಾಡಿದ್ದರು, ಇಂದು ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ನವೀನಕುಮಾರ ಈ ಗುಳಗಣ್ಣವರ ತಂಡ ಗ್ರಾಮಕ್ಕೆ ಭೇಟಿ ನೀಡಿ ಧರಣಿ ಮಾಡುತ್ತಿರುವ ಎಲ್ಲಾ ಮಹಿಳೆಯರಿಗೂ ಧನ್ಯವಾದಗಳನ್ನೂ ತಿಳಿಸಿ ಅವರ ಹೋರಾಟಕ್ಕೆ ಬೆಂಬಲಿಸಿದರು.
ಹಾಗೂ ಕೇಸ್ ಆಗಿರುವ ಎಲ್ಲರ ಮನೆಗೆ ಭೇಟಿ ನೀಡಿ ತಮ್ಮೊಂದಿಗೆ ನಾವೆಲ್ಲರೂ ಇರಲಿದ್ದೇವೆ ಯಾರು ಕೂಡ ಧೈರ್ಯ ಕಳೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
ಕವಲೂರ್ ಗ್ರಾಮದಲ್ಲಿ ಶುರುವಾಗಿರುವ ಈ ಪ್ರತಿಭಟನೆ ತಾಲೂಕ, ಜಿಲ್ಲಾ ಹಾಗೂ ರಾಜ್ಯದ ಪ್ರತಿ ಹಳ್ಳಿಗಳಲ್ಲಿಯೂ ಪ್ರಾರಂಭವಾಗಲಿ ನಮ್ಮ ನಮ್ಮ ಗ್ರಾಮದ ಅಭಿವೃದ್ಧಿಗಳಿಗಾಗಿ ಇತರಹದ ಹೋರಾಟಗಳು ಹೆಚ್ಚಾಗಲಿ ಎಂದು ಹೇಳಿದರು.
ಈ ಸಂಧರ್ಭದಲ್ಲಿ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಡಾ ಕೆ ಬಸವರಾಜ, ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಹೇಮಲತಾ ನಾಯಕ್, ಜೆಡಿಎಸ್ ಮುಖಂಡರಾದ ಸಿ ವಿ ಚಂದ್ರಶೇಖರ, ಪ್ರಮುಖರಾದ ಪ್ರದೀಪ್ ಹಿಟ್ನಾಳ್, ಸೋಮಶೇಖರಗೌಡ, ಗಣೇಶ್ ವರ್ತಟನಾಳ, ವೀರೇಶ್ ಸಜ್ಜನ್, ಪ್ರದೀಪಗೌಡ್ರ, ಪಾನಗಂಟಿ ವಕೀಲರು, ಅಪ್ಪಣ್ಣ ಪದಕಿ, ಮಹೇಶ್ ಅಂಗಡಿ, ಸೇರಿದಂತೆ ಗ್ರಾಮದ ಮಹಿಳೆಯರು, ಹಿರಿಯರು, ಯುವಕರು ಉಪಸ್ಥಿತರಿದ್ದರು.
Comments are closed.