ಶಾಸಕರ ದಕ್ಷತೆಗೆ ದಂಗಾಗಿ ಅವರ ವಿರುದ್ಧ ಮಾತನಾಡುತ್ತಿದ್ದಾರೆ : ಜ್ಯೋತಿ ತಿರುಗೇಟು
ಕೊಪ್ಪಳ : ರಾಜ್ಯದಲ್ಲಿ ಗ್ಯಾರಂಟಿ ಕಾಂಗ್ರೆಸ್ ಸರಕಾರ ಬಂದು ನುಡಿದಂತೆ ನಡೆಯುತ್ತಿದೆ, ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿರುವದನ್ನು ಕಂಡು ವಿರೋಧ ಪಕ್ಷಗಳು ಫೇಕ್ ಪ್ರತಿಭಟನೆ ಮೂಲಕ ದಾರಿತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಗ್ಯಾರಂಟಿ ಸಮಿತಿ ಸದಸ್ಯರು, ಕಾಂಗ್ರೆಸ್ ಮುಖಂಡರಾದ ಜ್ಯೋತಿ ಎಂ. ಗೊಂಡಬಾಳ ಅವರು ತಿರುಗೇಟು ನೀಡಿದ್ದಾರೆ.
ಅವರು ಬಿಜೆಪಿ ಜೆಡಿಎಸ್ ಮುಖಂಡರು ನೀಡಿದ ಹೇಳಿಕೆ ಮತ್ತು ಕವಲೂರ ಅಳವಂಡಿ ಭಾಗದಲ್ಲಿ ಹಮ್ಮಿಕೊಂಡ ಪ್ರತಿಭಟನೆ ಕೇವಲ ರಾಜಕೀಯ ನಾಟಕ, ವಾಸ್ತವದಲ್ಲಿ ಬಹುತೇಕ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಯೋಜನೆ ಸಿದ್ಧವಾಗಿದೆ, ಶೀಘ್ರ ಕಾರ್ಯಾರಂಭ ಮಾಡಲಿದ್ದು, ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಅವಿರತವಾಗಿ ಶ್ರಮಿಸುತ್ತಿದ್ದಾರೆ.
ಕೆಕೆಆರ್ ಡಿಬಿ ಅನುದಾನದ ಹಂಚಿಕೆಯಾಗಿದೆ, ಈಗ ಮಳೆ ಇರುವದರಿಂದ ರಸ್ತೆ ಕೆಡುವದು ಸಾಮಾನ್ಯ, ಜೊತೆಗೆ ರಾಜ್ಯ ಸರಕಾರ ಜನಸಾಮಾನ್ಯರ ಬದುಕಿನ ಹಕ್ಕಿನ ಜೊತೆಗೆ ನಿಂತಿದ್ದು, ಅಭಿವೃದ್ಧಿ ಸಹ ಜೊತೆ ಜೊತೆಗೆ ಮಾಡುತ್ತಿದೆ. ಆರೋಗ್ಯ ಸುಧಾರಣೆ ತರಲು ಕೆಲಸ ಮಾಡುತ್ತಿದ್ದಾರೆ. ಆದರೆ ಬಿಜೆಪಿ ಜೆಡಿಎಸ್ ಮುಖಂಡರು ರಾಜ್ಯಕ್ಕೆ ಅನ್ಯಾಯ ಮಾಡುತ್ತಿರುವ ಕೇಂದ್ರದ ಬಳಿ ಮಾತನಾಡುವ ವಿರೋಧಿಸುವ ಧೈರ್ಯ ಇಲ್ಲದ ಕಾರಣ ಕಾಂಗ್ರೆಸ್ ವಿರುದ್ಧ ಮಾತನಾಡುತ್ತಿದ್ದಾರೆ. ದೇಶದಲ್ಲಿ ಬಿಜೆಪಿ ನಡೆಸುತ್ತಿರುವದೇ ಹಿಟ್ಲರ್ ಮಾದರಿ ಆಡಳಿತ.
ಇನ್ನು ತಹಶಿಲ್ದಾರ ವಿಠ್ಠಲ್ ಚೌಗಲೆ ಅವರು ತಮ್ಮ ಕೆಲಸವನ್ನು ಮಾಡುತಿದ್ದಾರೆ, ಸಂಬಂಧ ಇಲ್ಲದ ಜನರು ಕುಡಿದು ಬಂದು ಜೀವ ಬೆದರಿಕೆ ಹಾಕಿ, ಸ್ಥಳದಿಂದ ಹೋಗದಂತೆ ಅಧಿಕಾರಿಗಳಿಗೆ ಧಮ್ಕಿ ಹಾಕಿದ ಕಾರಣ ಅಂತವರ ಮೇಲೆ ಜೀವರಕ್ಷಣೆಗೆ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ ಹೊರತು ಯಾವ ರಾಜಕೀಯ ಮಾಡಿಲ್ಲ ಎಂದು ಜ್ಯೋತಿ ಎಂ. ಗೊಂಡಬಾಳ ಪ್ರಕಟಣೆ ನೀಡಿದ್ದಾರೆ.
Comments are closed.