ವಿಶ್ವ ಶ್ರವಣ ನ್ಯೂನ್ಯತೆಯುಳ್ಳ ವ್ಯಕ್ತಿಗಳ ದಿನಾಚರಣೆ

Get real time updates directly on you device, subscribe now.

ಪ್ರಾರಂಭ ಸಂಸ್ಥೆ ಕೊಪ್ಪಳ, ಸಾಮರ್ಥ್ಯ,ಡೆಫ್ ಚೈಲ್ಡ್ ವರ್ಲ್ಡ್‌ವೈಡ್ಥ್ (ಯು.ಕೆ) ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಶ್ರವಣ ನ್ಯೂನ್ಯತೆಯುಳ್ಳ ವ್ಯಕ್ತಿಗಳ ದಿನಾಚರಣೆಯನ್ನು ಪ್ರಾರಂಭ ಸಾಮರ್ಥ್ಯ ಸಂಸ್ಥೆಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಸಂಸ್ಥೆ ನಿರ್ದೇಶಕರಾದ ಬಿ.ಹಂಪಣ್ಣ ಅವರು ಮಾತನಾಡಿ ಶ್ರವಣ ನ್ಯೂನ್ಯತೆಯುಳ್ಳ ಮಕ್ಕಳನ್ನು ಆದಷ್ಟು ಬೇಗ ಗುರುತಿಸಿ ಕರ್ಯಕ್ರಮ ರೂಪಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಕೊಪ್ಪಳ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ // ರವೀಂದ್ರನಾಥ್ ಕೊಪ್ಪಳ ಅವರು ಮಾತನಾಡುತ್ತಾ ರಾಷ್ಟೀಯ ಕಿವುಡುತನ ತಡೆಗಟ್ಟುವ ಕಾರ್ಯಕ್ರಮದಡಿಯಲ್ಲಿ ಐದು ವ?ದ ಒಳಗಿನ ಕಿವುಡ ಮಕ್ಕಳಿಗೆ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತ ಶಸ್ತ್ರ ಚಿಕಿತ್ಸೆ ಮಾಡಲಾಗವುದು. ಹಾಗೂ ಪಾಲಕರು ಇದರ ಸದುಪಯೋವನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮತ್ತೊರ್ವ ಅತಿಥಿ ಡಾ. ಮಲ್ಲಿಕಾರ್ಜುನ್ ಮಾತನಾಡಿ ಈ ಕಿವುಡತನವನ್ನು ತಡೆಗಟ್ಟುವ ಕಾರಣಗಳು, ವಿಧಗಳ ಬಗ್ಗೆ ವಿವರವಾಗಿ ತಿಳಿಸಿದರು.
ಅದೆ ರೀತಿ ಕೊಪ್ಪಳ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಂಕ್ರಯ್ಯನವರು ಮಾತನಾಡಿ ಶ್ರವಣನ್ಯೂನತೆ ಮಕ್ಕಳಿಗೆ ಶಿಕ್ಷಣ ಬಹಳ ಮುಖ್ಯ ಅವರನ್ನು ಆದ? ಬೇಗ ಗುರುತಿಸಿ ಶಾಲೆಗೆ ಸೇರಿಸಿ ಸಮನ್ವಯ ಶಿಕ್ಷಣ ನೀಡಿ ಎಂಬುದಾಗಿ ತಿಳಿಸಿದರು.
ಖ್ಯಾತ ವೈದ್ಯರಾದ ಡಾ. ಕೆ.ಜಿ. ಕುಲಕರ್ಣಿಯವರು ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಡುತ್ತಾ ಶ್ರವಣ ನ್ಯೂನ್ಯತೆ ಮಕ್ಕಳಿಗೆ ಶೀಘ್ರವಾಗಿ ಶ್ರವಣ ಯಂತ್ರಗಳನ್ನು ಕೊಡಿಸಿ ಶಿಕ್ಷಣ ನೀಡಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಇನ್ನರ್‌ವ್ಹೀಲ್ ಕ್ಲಬ್ಬಿನ ಅಧ್ಯಕ್ಷರಾದ ಉಮಾ ತಂಬ್ರಳ್ಳಿ, ಕಾರ್ಯದರ್ಶಿಗಳಾದ ವೀಣಾ ಬಣ್ಣದ ಭಾವಿ. ಮಧು ನಿಲೋಗಲ್. ಶ್ರೀಮತಿ ಸುಮಂಗಲ ಹಂಚಿನಾಳ, ಶೀಮತಿ ತ್ರಿಶಲಾ ಪಾಟೀಲ್, ಡಾ. ರಾಧಾ ಕುಲಕರ್ಣಿ ಮುಂತಾದವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಪಾಲಕರಾದ. ಗಾಳೆಪ್ಪಾ, ಶ್ರೀಮತಿ ಅಮೀನಾ, ತಮ್ಮ ಮಕ್ಕಳ ಬಗ್ಗೆ ಮಾತನಾಡಿದರು. ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದ ಶ್ರವಣ ನ್ಯೂನತೆ ಮಕ್ಕಳಿಗೆ ಬಹುಮಾನ ವಿತರಣೆ ಮಾಡಿದ ನಂತರ ಎಲ್ಲರಿಗೂ ವಂದಿಸಿ ಕಾರ್ಯಕ್ರಮ ಮುಕ್ತಾಯಗೊಳಿಸಿದರು.

Get real time updates directly on you device, subscribe now.

Comments are closed.

error: Content is protected !!