ಕೊಪ್ಪಳ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಕನ್ನಡ ಉಪನ್ಯಾಸಕರ ವೇದಿಕೆಯ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್ ಆಯ್ಕೆ
ಕೊಪ್ಪಳ;-ಕೊಪ್ಪಳ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಕನ್ನಡ ಉಪನ್ಯಾಸಕರ ಸಂಘದ ವೇದಿಕೆಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ಡಾ.ಸುಭಾಶ ಎಸ್.ಪೋರೆ ಮತ್ತು ಡಾ.ನಾಗಪುಷ್ಪಾಲತಾ ಇವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್ ಮತ್ತು ಉಪಾಧ್ಯಕ್ಷರಾಗಿ ಡಾ.ಸುಮತಿ ಹಿರೇಮಠ ಇವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಶೇಖಬಾಬು ಶಿವಾಪುರ ಮತ್ತು ಖಜಾಂಚಿಯಾಗಿ ಸುಬಾಸಗೌಡ ಇವರನ್ನು ಆಯ್ಕೆ ಮಾಡಲಾಯಿತು. ಸಂಚಾಲಕರಾಗಿ ದ್ಯಾಮಣ್ಣ ಗುರಿಕಾರ(ಕೊಪ್ಪಳ), ಮಂಜುನಾಥ ಮ್ಯಾಗಳಮನಿ(ಗಂಗಾವತಿ), ಹನುಮಂತಪ್ಪ ತಿದಿ(ಕನಕಗಿರಿ), ಡಾ.ಹನುಮಂತಪ್ಪ ಚಂದಲಾಪುರ(ಕಾರಟಗಿ), ಲಕ್ಷ್ಮಣ ವಗರನಾಳ(ಕುಷ್ಟಗಿ), ಶ್ರೀಮತಿ ಶಿವಲೀಲಾ ಹಿರೇಮಠ(ಕುಕನೂರು) ಹಾಗೂ ಈರಣ್ಣ ಗಾಳಿ(ಯಲಬುರ್ಗಾ) ಇವರನ್ನು ಆಯ್ಕೆ ಮಾಡಲಾಯಿತೆಂದು ಕೊಪ್ಪಳ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷರಾದ ಅನಿಲಕುಮಾರ ಜಿ. ಮತ್ತು ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಸೋಮಶೇಖರಗೌಡ ಇವರು ಪ್ರಕಟಣೆಯಲ್ಲಿ ತಿಸಿದ್ದಾರೆ.