ಚಟುವಟಿಕೆಗೆ ಹೃದಯವನ್ನು ಬಳಸಿ- ಡಾ|| ಲಿಂಗರಾಜು ಟಿ

Get real time updates directly on you device, subscribe now.


ಹೃದಯವು ಮಾನವ ದೇಹದ ಪ್ರಮುಖ ಅಂಗಾಗಳಲ್ಲಿ ಒಂದಾಗಿದೆ ಅದರ ಅಸಮರ್ಪಕ ಕಾರ್ಯವು ಮಾರಣಾಂತಿಕತೆಗೆ ಕಾರಣವಾಗಬಹುದು ಆದಕಾರಣ ಪ್ರತಿಯೊಬ್ಬರು ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಅವಶ್ಯಕವಾಗಿರುತ್ತದೆ ಎಂದು ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ|| ಲಿಂಗರಾಜು ಟಿ ಅವರು ಹೇಳಿದರು.
ಕೊಪ್ಪಳ ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಜಿಲ್ಲಾ ಎನ್.ಸಿ.ಡಿ. ಕೋಶ ಕೊಪ್ಪಳ, ಜಿಲ್ಲಾ ಬೋಧಕ ಆಸ್ಪತ್ರೆ ಹಾಗೂ ಜಿಲ್ಲಾ ಎನ್.ಸಿ.ಡಿ. ಕ್ಲಿನಿಕ್ ಕೊಪ್ಪಳ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಯವರಿಗೆ ಸೋಮವಾರ ದಂದು ಹಮ್ಮಿಕೊಂಡಿದ್ದ ವಿಶ್ವ ಹೃದಯ ದಿನ ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟನೆಮಾಡಿ ಮಾತನಾಡಿದರು.
ಹೃದಯ ರಕ್ತನಾಳದ ಆರೋಗ್ಯ ಮತ್ತು ಕೆಲವು ಜೀವನಶೈಲಿಯ ಅಭ್ಯಾಸಗಳ ಬಗ್ಗೆ ಅರಿವಿನ ಕೋರತೆಯಿಂದಾಗಿ ಹೃದಯ ರಕ್ತನಾಳದ ಕಾಯಿಲೆಗಳು ಮರಣಕ್ಕೆ ಪ್ರಮುಖ ಕಾರಣಗಳಾಗಿರುತ್ತವೆ. ಅರಂಭಿಕ ಚಿನ್ಹೆಗಳು ಮತ್ತು ರೋಗ ಲಕ್ಷಣಗಳನ್ನು ಅರ್ಥಮಾಡಿಕೊಳ್ಳುವುದು ಹಾಗೂ ತೊಡಕುಗಳನ್ನು ತಪ್ಪಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದು ಜಡ ಜೀವನ ಶೈಲಿಯನ್ನು ತಪ್ಪಿಸುವುದು, ಸಾಕ್ರೀಯ ಜೀವನ ಶೈಲಿಯ ತೊಡಗಿಸಿಕೊಳ್ಳುವುದು ಎಂದು ಎಲ್ಲಾ ವಿದ್ಯಾರ್ಥಿನಿಯರಿಗೆ ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳಾದ ಡಾ|| ನಂದಕುಮಾರ ಇವರು ವಿಶ್ವ ಹೃದಯ ದಿನಾಚರಣೆಯ ಹಾಗೂ ಚಟುವಟಿಕೆಗೆ ಹೃದವನ್ನು ಬಳಸಿ ಎಂಬ ಘೋಷವಾಕ್ಯಕ್ಕೆ ಪೂರಕವಾಗಿರುವ ಆಹಾರ ವಿಹಾರ ಮತ್ತು ದೈನಂದಿಕ ಜೀವನ ಶೈಲಿ ಕುರಿತು ಮಾತನಾಡಿದರು ಮತ್ತು ಡಾ|| ಪುನಿತ ರಾಜಕುಮಾರ ಹೃದಯ ಜ್ಯೋತಿ ಯೋಜನೆ ಕೊಪ್ಪಳ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿದ್ದು, ಅದರ ಸದುಪಯೋಗ ಕುರಿತು ಮಾಹಿತಿ ನೀಡಿದರು ಹೃದಯ ಕಾಯಿಲೆಯ ಗಂಡಾಂತರ ಅಂಶಗಳು, ಅಹಿತಕರ ಆಹಾರ ಸೇವನೆ, ಅಧಿಕ ತೂಕ, ದೈಹಿಕ ಮತ್ತು ಕ್ರೀಡಾಚಟುವಟಿಕೆಗಳ ನೂನತೆ ಕುರಿತು ತಿಳಿಸಿದರು ಹಾಗೂ ೩೦ ವರ್ಷ ಹಾಗೂ ಮೇಲ್ಪಟ್ಟ ಎಲ್ಲಾ ವಯಸ್ಸಿನವರು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು,
ಕಾಲೇಜಿನ ಪಾಂಶುಪಾಲರಾದ ಡಾ|| ಗಣಪತಿ ಲಮಾಣಿ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಇತ್ತೀಚಿಗೆ ಸಣ್ಣ ಸಣ್ಣ ವಯಸ್ಸಿನಲ್ಲಿ ಹೃದಯ ಸಂಬಂದಿ ಖಾಯಲೆಗಳು ಹೆಚ್ಚಾಗುತ್ತಿವೆ ನಮ್ಮಲ್ಲಿ ಒತ್ತಡದ ಜೀವನ ಹೆಚ್ಚಾಗಿದೆ ನಾವು ಸೇವಿಸುವ ಅಹಾರ ಶೈಲಿಯು ಬದಲಾಗಿದೆ, ನಮ್ಮ ಜೀವನ ಪದ್ದತಿಯನ್ನು ಬದಲಾಯಿಸಿಕೊಳ್ಳಬೇಕು, ವ್ಯಾಯಾಮ ಯೋಗಾ ಮಾಡಬೇಕು ಇವರಿಂದ ರೂಗಗಳು ಬರದಂತೆ ತಡೆಗಟ್ಟಬಹುದು ಎಂದರು.
ಡಾ ಪ್ರದೀಪ್ ಕುಮಾರ್ ಯು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಯುವ ರೆಡ್ ಕ್ರಾಸ್ ಘಟಕದ ಸಂಚಾಲಕರು ಇವರು ಮಾತನಾಡುತ್ತಾ ನಮ್ಮ ದೇಹದಲ್ಲಿ ನಿರಂತರವಾಗಿ ಕೆಲಸಮಾಡುವ ಏಕೈಕ ಅಂಗವೆಂದರೆ ಅದು ಹೃದಯ. ನಮ್ಮ ಹೃದಯವು ನಮಗೆ ಏನನ್ನು ಕೇಳುವುದಿಲ್ಲಾ ಅದು ಕೇಳುವುದು ಕೇವಲ ಚಟುವಟಿಕೆಯಿಂದ ಕೂಡಿದ ದಿನಚರಿ, ಹಾಗಾಗಿ ನಾವು ನಿರಂತರ ಚಟುವಟಿಕೆಯಿಂದ ಇರಬೇಕು. ಸಾದ್ಯವಾದರೆ ಒಂದು ಕ್ರೀಡೆಯನ್ನು ದಿನನಿತ್ಯ ಆಡುವುದನ್ನು ರೂಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಪೌಷ್ಟಿಕ ಮಾಸಾಚರಣೆ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಹಾಗೂ ಪೂಸ್ಟರ್ ಮೇಕಿಂಗ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು ಸದರಿ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಕುಷ್ಠ ನಿರ್ಮೂಲನ ಅಧಿಕಾರಿಗಳು ಡಾ|| ಪ್ರಕಾಶ, ಡಾ|| ಪ್ರದೀಪ ಕುಮಾರ ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ರೆಡ್ ಕ್ರಾಸ್ ಘಟಕ ಕೊಪ್ಪಳ, ಡಾ|| ಅಶೋಕ ಕುಮಾರ್ IಕಿSಅ ಸಂಚಾಲಕರು, ಡಾ. ಹುಲಿಗೆಮ್ಮ ಬಿ ಕನ್ನಡ ಸಹ ಪ್ರಾಧ್ಯಾಪಕರು, ಡಾ|| ನರಸಿಂಹ ಸಹಾಯಕ ಪ್ರಾದ್ಯಾಪಕರು,   ಲಕ್ಷ್ಮಣ ಸಜ್ಜನರ್ ಮೇಲ್ವಿಚಾರಕರು, ಎನ್.ಸಿ.ಡಿ. ಕ್ಲಿನಿಕ್ ಸಿಬ್ಬಂದಿಗಳು, ಜಿಲ್ಲಾ ಎನ್.ಟಿ.ಸಿ.ಪಿ ಕಾರ್ಯಕ್ರಮದ ಸಿಬ್ಬಂದಿಗಳು ಮತ್ತು ಜಿಲ್ಲಾ ಸರ್ವೇಕ್ಷಣಾ ಘಟಕದ ಎಲ್ಲಾ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಬಾಗವಹಿಸಿ ಯಶಸ್ವಿಗೊಳಿಸಿದರು.
ಶಿವಾನಂದ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು, ನಿರೂಪಣೆ ಮಾಡಿದರು ಡಾ|| ಜಯಶ್ರೀ ಎಮ್.ಹೆಚ್. ಜಿಲ್ಲಾ ಕಾರ್ಯಕ್ರಮ ಸಂಯೋಜಕರು ಸ್ವಾಗತ ಭಾಷಣಮಾಡಿ ಕೊನೆಯಲ್ಲಿ ಕಾರ್ಯಕ್ರಮಕ್ಕೆ ಬಾಗವಹಿಸಿದ ಎಲ್ಲಾ ಗಣ್ಯ ವ್ಯಕ್ತಿಗಳಿಗೂ, ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೂ ಹಾಗೂ ವಿದ್ಯಾರ್ಥಿನಿಯರಿಗೆ ವಂದನೆ ಸಲ್ಲಿಸುತ್ತಾ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.

 

Get real time updates directly on you device, subscribe now.

Comments are closed.

error: Content is protected !!