ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ
ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಕೊಪ್ಪಳದಲ್ಲಿ ದಿನಾಂಕ ೦೩-೧೦-೨೦೨೪ ಗುರುವಾರದಂದು ಕಾಯಚಿಕಿತ್ಸಾ ವಿಭಾಗದ ತಜ್ಞ ವೈದ್ಯರಿಂದ ವಿಶೇಷ ಮಧುಮೇಹ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಉಚಿತವಾಗಿ ಆಯ್ದ ರಕ್ತ ಮತ್ತು ಮೂತ್ರ ಪರೀಕ್ಷೆ, ತಪಾಸಣೆ ಹಾಗೂ ಮೊದಲು ಬಂದ ೫೦ ರೋಗಿಗಳಿಗೆ ಉಚಿತ ಔಷಧಿಯನ್ನು ಮೈಲಾ ಬಯೋಲಾಜಿಕಲ್ ಫಾರ್ಮಸಿಟಿಕಲ್ ಕಂಪನಿಯು ವಿತರಿಸುತ್ತದೆ ಎಂದು ಕಾಯಚಿಕಿತ್ಸಾ ವಿಭಾಗದ ಸಹಪ್ರಾಧ್ಯಾಪಕಿಯಾದ ಡಾ. ಮಂಜುಳಾ ಕರ್ಲವಾಡ, ಆಸ್ಪತ್ರೆಯ ಮೇಲ್ವಿಚಾರಕರಾದ ಡಾ. ಗವಿ. ಪಾಟೀಲ ಮತ್ತು ಪ್ರಾಂಶುಪಾಲರಾದ ಡಾ. ಮಹಾಂತೇಶ ಸಾಲಿಮಠ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ೮೨೧೭೩೯೫೨೪೨ ಗೆ ಸಂಪರ್ಕಿಸಬಹುದು.