ದಸಾಪ ೧೩ ಜನ ಶಿಕ್ಷಕರಿಗೆ ಸಾವಿತ್ರಿ ಬಾಪುಲೆ ಪ್ರಶಸ್ತಿ ಪ್ರಕಟ
ಗಂಗಾವತಿ: ದಲಿತ ಸಾಹಿತ್ಯ ಪರಿ?ತ್ತು ರಾಜ್ಯ ಘಟಕ ಗದಗ ಹಾಗೂ ತಾಲೂಕು ಘಟಕ ಗಂಗಾವತಿ ವತಿಯಿಂದ ಸೆಪ್ಟೆಂಬರ್-೨೮ ರಂದು ಅಕ್ಷರದವ್ವ ಸಾವಿತ್ರಿ ಬಾಪುಲೆ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಡಾ. ಸತ್ಯಾನಂದ ಪಾತ್ರೋಟರವರ ಜಾಲಿ ಮರದಲ್ಲೊಂದು ಜಾಜಿ ಮಲ್ಲಿಗೆ ಇದು ನನ್ನ ಜೀವನ ಎಂಬ ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನು ನಗರದ ಬಾಲಕರ ಸರಕಾರಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಾಹಿತ್ಯ ಪರಿ?ತ್ತಿನ ತಾಲೂಕ ಘಟಕ ಕಾರ್ಯದರ್ಶಿಯಾದ ಮೈಲರಪ್ಪ ಬೂದಿಹಾಳ ಪ್ರಕಟಣೆಯಲ್ಲಿ ತಿಳಿಸಿದರು.
ಡಾ. ಸತ್ಯಾನಂದ ಪಾತ್ರೋಟರವರ ಗೌರವ ಉಪಸ್ಥಿತಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಉದ್ಘಾಟನೆಯನ್ನು ದಲಿತ ಸಾಹಿತ್ಯ ಪರಿ?ತ್ತಿನ ರಾಜ್ಯಾಧ್ಯಕ್ಷರಾದ ಡಾ. ಅರ್ಜುನ ಗೊಳಸಂಗಿ ಮಾಡಲಿದ್ದು, ಅಧ್ಯಕ್ಷತೆಯನ್ನು ಪರಿ?ತ್ತಿನ ತಾಲೂಕ ಅಧ್ಯಕ್ಷರಾದ ಛತ್ರಪ್ಪ ತಂಬೂರಿ ವಹಿಸಲಿದ್ದಾರೆ. ಸಾವಿತ್ರಿ ಬಾಪುಲೆರವರ ಭಾವಚಿತ್ರಕ್ಕೆ ಪು?ರ್ಪಣೆಯನ್ನು ಪತ್ರಕರ್ತರು ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾದ ಕೆ. ನಿಂಗಜ್ಜ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಕೃತಿಯನ್ನು ಶರಣ ಚಿಂತಕರಾದ ಸಿ.ಹೆಚ್. ನಾರಿನಾಳ ಲೋಕಾರ್ಪಣೆ ಮಾಡಲಿದ್ದು, ಕೃತಿಯ ಕುರಿತು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯರಾದ ರಮೇಶ ಗಬ್ಬೂರು ಮಾತನಾಡಲಿದ್ದಾರೆ.
ಈ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ೧೩ ಜನರಿಗೆ ಅಕ್ಷರದವ್ವ ಸಾವಿತ್ರಿ ಬಾಪುಲೆ ಪ್ರಶಸ್ತಿ ಪ್ರದಾನ ಮಾಡಲಿದ್ದು, ಪ್ರಶಸ್ತಿಯನ್ನು ಪರಿ?ತ್ತಿನ ಜಿಲ್ಲಾಧ್ಯಕ್ಷರಾದ ಡಾ. ಲಿಂಗಣ್ಣ ಜಂಗಮರಹಳ್ಳಿ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು, ವೈದ್ಯರು, ಸಾಹಿತಿಗಳು ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅನೇಕ ಗಣ್ಯರು, ವೈದ್ಯರು, ಸಾಹಿತಿಗಳು ಹಾಗೂ ಶಿಕ್ಷಕರು ಪಾಲ್ಗೊಳ್ಳಲಿದ್ದಾರೆ.
ಈ ಸಮಾರಂಭದಲ್ಲಿ ಡಾ. ಬಸವರಾಜ ಪೂಜಾರ, ಬಸವರಾಜ ಈಳಿಗನೂರು, ಡಾ. ರವಿ ಚವ್ಹಾಣ್, ಉಮೇಶ ಶಿವಸಂಗಪ್ಪ, ಮುತ್ತಪ್ಪ ಹನುಮಂತಪ್ಪ, ಶ್ರೀಮತಿ ಗದ್ದೆಮ್ಮ ಚಂದಪ್ಪ, ಶ್ರೀಮತ ರತ್ನಾ ಕೊಟ್ರಶೆಟ್ಟಿ, ಶ್ರೀಮತಿ ಶಬಾನಾ ಪರ್ವೀನ್, ಶ್ರೀಮತಿ ಶೀತಲ್ ಭಂಡಗಿ, ಶ್ರೀ ಪುಟ್ಟಸ್ವಾಮಿ ಹೆಚ್.ಆರ್., ಶ್ರೀಮತಿ ರಾಧಾ ಎಸ್., ಶ್ರೀಮತಿ ಆಶಾ ಟಿ. ತಿಮ್ಮಣ್ಣ ಹಾಗೂ ಶ್ರೀಮತಿ ಶರಣಪ್ಪ ಶರಣಪ್ಪ ಇವರುಗಳಿಗೆ ಅಕ್ಷರದವ್ವ ಸಾವಿತ್ರಿ ಬಾಪುಲೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.
ಅಲ್ಲದೇ ಕನ್ನಡ ಪುಸ್ತಕ ಪ್ರಾಧಿಕಾರ ಸದಸ್ಯರಾದ ಡಾ. ಶರಣಬಸಪ್ಪ ಕೋಲ್ಕಾರವರಿಗೆ, ಕುವೆಂಪು ಭಾ? ಭಾರತಿ ಸದಸ್ಯರಾದ ಡಾ. ಜಾಜಿ ದೇವೆಂದ್ರಪ್ಪರವರಿಗೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಅಜ್ಮೀರ ನಂದಾಪುರರವರಿಗೆ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯರಾದ ರಮೇಶ ಗಬ್ಬೂರ, ಕರ್ನಾಟಕ ಮಾಧ್ಯಮ ಅಕಾಡಮಿ ಸದಸ್ಯರಾದ ಕೆ. ನಿಂಗಜ್ಜರವರಿಗೆ ಹಾಗೂ ಬಾಬು ಜಗಜೀವನರಾಮ್ ನ್ಯಾ?ನಲ್ ಫೌಂಡೇ?ನ್ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ನವದೆಹಲಿ ಸದಸ್ಯರಾದ ಡಾ. ಸೋಮಕ್ಕ ಎಂ. ರವರುಗಳಿಗೆ ವಿಶೇ?ವಾಗಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
Comments are closed.