ರಾಜ್ಯಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥ್‌ಮೆಟಿಕ್ ಸ್ಪರ್ಧೆಯ ಫಲಿತಾಂಶ
ಗಂಗಾವತಿ: ಇತ್ತೀಚೆಗೆ ಕೊಪ್ಪಳ ನಗರದ ಶ್ರೀ ಮಹಾವೀರ ಸಮುದಾಯ ಭವನದಲ್ಲಿ ೬ನೇ ರಾಜ್ಯಮಟ್ಟದ ಅಬಾಕಸ್ & ಮೆಂಟಲ್ ಅರ್ಥಮೆಟಿಕ್ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು ೭೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅದರಲ್ಲಿ ಗಂಗಾವತಿ ನಗರದ ಜೀನಿಯಸ್ ಅಬಾಕಸ್ ಸೆಂಟರ್‌ನ ೧೦೨ ವಿದ್ಯಾರ್ಥಿಗಳು ಭಾಗವಹಿಸಿದ್ದು, ೧೬ ವಿದ್ಯಾರ್ಥಿಗಳು ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಅಭಿನವ್, ಅಥರ್ವ ಬೆನ್ನೂರು, ಹಂಸಿಕಾ ಹಕ್ಕಂದಿ, ಅರ್ಫ್‌ನಾಜ್, ಫಾತಿಮಾ ತೂ ಜೋರಾ, ಹಾರ್ದಿಕ್ ಪಾಟೀಲ್, ಪ್ರಥಮ್, ಪ್ರಿಯಶ್ರೀ ಕಟ್ಟಿಮನಿ, ವೀರ ರೇಣುಕಾಸ್ವಾಮಿ ಹಿರೇಮಠ, ಪವನ್ ರೆಡ್ಡಿ, ಅಮತ್ ಉರ್ ರೆಹಮಾನ್, ಸಾತ್ವಿಕಾ ಆರ್., ಸನಾತನಿ ಹಿರೇಮಠ, ಸೋನುಶ್ರೀ ಎ.ಟಿ., ನಿಶಾಂತ್ ಸಾಯಿ ಮಣಿಕಂಠ, ಪ್ರೀತಮ್ ಕುಮಾರ ಇವರುಗಳು ಪಡೆದುಕೊಂಡಿರುತ್ತಾರೆ.
ಉಳಿದ ವಿದ್ಯಾರ್ಥಿಗಳಲ್ಲಿ ೬೦ ವಿದ್ಯಾರ್ಥಿಗಳು ರನ್ನರ್ ಅಪ್ ಪ್ರಶಸ್ತಿ ಹಾಗೂ ೨೬ ವಿದ್ಯಾರ್ಥಿಗಳು ಸಮಾಧಾನಕರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. ಪ್ರಶಸ್ತಿ ಪಡೆದುಕೊಂಡ ಎಲ್ಲಾ ವಿದ್ಯಾರ್ಥಿಗಳಿಗೂ ಹಾಗೂ ಸಹಕರಿಸಿದ ಪಾಲಕರಿಗೂ ಜೀನಿಯಸ್ ಅಬಾಕಸ್ ಸೆಂಟರ್‌ನ ಮುಖ್ಯಸ್ಥರಾದ ಶ್ರೀಮತಿ ಶೈಲಜಾ ಮತ್ತು ಆಡಳಿತಾಧಿಕಾರಿಯಾದ ಬಿ.ಎಸ್ ಪ್ರಕಾಶರವರು ಅಭಿನಂದನೆಗಳನ್ನು ತಿಳಿಸಿದ್ದಾರೆ.
Comments are closed.