ಕಾವ್ಯ ಪರಿಣಾಮ ಬೀರುತ್ತದೆ : ಮೆಣಸಗಿ

0

Get real time updates directly on you device, subscribe now.


ವೆಂಕಟಗಿರಿಯಲ್ಲಿ ಕವಿಗೋಷ್ಠಿ

ಗಂಗಾವತಿ : ಕಾವ್ಯ ರಚನೆಯು ನಯ ವಿನಯ, ಕಲಿಸುತ್ತದೆ. ಭಾವ ಉದ್ವೇಘವೇ ಕಾವ್ಯ, ಕಾವ್ಯ ಪರಿಣಾಮ ಬೀರುತ್ತದೆ ಎಂದು ಹಿರಿಯ ಸಾಹಿತಿ, ನಿವೃತ್ತ ಶಿಕ್ಷಕ ನಿಜಲಿಂಗಪ್ಪ ಮೆಣಸಗಿ ಹೇಳಿದರು.
ತಾಲೂಕಿನ ವೆಂಕಟಗಿರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಗಂಗಾವತಿಯ ಕಾವ್ಯಲೊಕ ಸಂಘಟನೆಯು ಕಸಾಪ ತಾಲೂಕು ಮಾಜಿ ಅಧ್ಯಕ್ಷ ಎಸ್.ಬಿ.ಗೊಂಡಬಾಳ ಸ್ಮರಣಾರ್ಥ ಆಯೋಜಿಸಿದ್ದ ೧೦೫ನೇ ಕವಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾವ್ಯ ಹುಟ್ಟಿ ಪಸರಿಸುತ್ತದೆ, ಕಾವ್ಯ ಪರಿಣಾಮ ಬೀರುತ್ತದೆ, ಸಾಹಿತ್ಯದಿಂದ ಎಲ್ಲರೂ ಸುಸಂಸ್ಕೃತರಾಗುತ್ತಾರೆ. ಸಾಹಿತ್ಯ ಕುರಿತು ಮಕ್ಕಳಿಗೆ ಆಸಕ್ತಿ ಮೂಡಿಸಬೇಕು. ಕಾವ್ಯ ರಚನಾ ಬಗ್ಗೆ ಸ್ಪ?ನೆ ಮಾಡಿಸಬೇಕು ಎಂದರು.
ಹಿರಿಯ ಪತ್ರಕರ್ತ ರಾಮಮೂರ್ತಿ ನವಲಿ ಮಾತನಾಡಿ, ರಾಜ್ಯ ಹಾಗೂ ತಾಲೂಕಿನಲ್ಲಿ ಕಸಾಪ ಚಟುವಟಿಕೆ ಸ್ಥಗಿತಗೊಂಡಿದೆ. ಕಾವ್ಯಲೋಕ ಸಂಘಟನೆ ಗ್ರಾಮೀಣ ಭಾಗದಲ್ಲಿ ಕವಿಗೋಷ್ಠಿ ನಡೆಸುತ್ತಿರುವುದು ಸಂತಸ ತಂದಿದೆ. ಗೋಷ್ಠಿಗಳು ಗ್ರಾಮೀಣ ಪ್ರತಿಭೆಗಳು ಬೆಳೆಯಲು ಸಹಾಯಕವಾಗುತ್ತವೆಂದು ಹೇಳಿದರು.
ಗಂಗಾವತಿ ಕರುಣಾ ರೂರಲ್ ಡೆವಲಪ್ಮೆಂಟ್ ಸೊಸೈಟಿ ಅಧ್ಯಕ್ಷೆ ಡಾ.ಸಿ.ಮಹಾಲಕ್ಷ್ಮಿ, ನಾಟಕಕಾರ ಕೆ.ಪಂಪಣ್ಣ, ತಾಲೂಕು ಕಸಾಪ ಕಾರ್ಯದರ್ಶಿ ಶಿವಾನಂದ ತಿಮ್ಮಾಪುರ, ಕೊಪ್ಪಳ ಕಸಾಪ ತಾಲೂಕು ಅಧ್ಯಕ್ಷ ರಾಮಚಂದ್ರ ಗೊಂಡಬಾಳ ಮಾತನಾಡಿದರು.
ವೆಂಕಟಗಿರಿ ಬ್ರಹ್ಮನಮಠದ ವೀರಯ್ಯಶಾಸ್ತ್ರಿ ಸಾನಿಧ್ಯ ವಹಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ಪಂಪಣ್ಣ ಕರಡಿ, ಸಂಘಟಕ ವೆಂಕಟೇಶ, ನಿವೃತ್ತ ಶಿಕ್ಷಕ ಮಹಮದ್ ಮೀಯಾ ಮತ್ತಿತರರು ಪಾಲ್ಗೊಂಡಿದ್ದರು.
ಶಾಮೀದ್ ಲಾಠಿ, ಅಜ್ಜಯ್ಯಸ್ವಾಮಿ ಹಿರೇಮಠ, ಜಡೆಯಪ್ಪ ಮೆಟ್ರಿ, ತಾರಾ ಸಂತೋ?, ಚಿದಂಬರ ಬಡಿಗೇರ, ಬಸವರಾಜ ಹೇರೂರು, ವಿರುಪಣ್ಣ ಢಣಾಪುರ್, ಕನಕಪ್ಪ ದಂಡಿನ್, ಶಿವನಗೌಡ ತೆಗ್ಗಿ, ಸೋಮಶೇಖರ್ ಕಂಚಿ, ಶರಣಪ್ಪ ವಿದ್ಯಾನಗರ, ಬಸವರಾಜ ಯತ್ನಟ್ಟಿ, ರೇಣುಕಾ ಮರಕುಂಬಿ ಸೇರಿ ಅನೇಕರು ಕಾವ್ಯ ವಾಚಿಸಿದರು.
ಉತ್ತಮವಾಗಿ ಕಾವ್ಯ ವಾಚಿಸಿದ ಶಕುಂತಲಾ ನಾಯಕ ಹೊಸ್ಕೆರಾ(ಪ್ರಥಮ), ಭೀಮನಗೌಡ ಕೆಸರಟ್ಟಿ(ದ್ವಿತೀಂii), ಶಾರದ(ತೃತೀಂii) ಅವರುಗಳಿಗೆ ಬಹುಮಾನ ವಿತರಿಸಲಾಯಿತು. ಕಾವ್ಯಲೋಕ ಅಧ್ಯಕ್ಷ ಎಂ.ಪರಶುರಾಮ ಉಪಸ್ಥಿತರಿದ್ದರು. ಕಾರ್ಯದರ್ಶಿ ಮೈಲಾರಪ್ಪ ಬೂದಿಹಾಳ ಸ್ವಾಗತಿಸಿ ನಿರ್ವಹಿಸಿದರು.
 

Get real time updates directly on you device, subscribe now.

Leave A Reply

Your email address will not be published.

error: Content is protected !!
%d bloggers like this: