ಸುವರ್ಣ ಭಾರತಿ ಕಲ್ಯಾಣವೃಷ್ಠಿ ಮಹಾ ಅಭಿಯಾನ ಸಂಪನ್ನ
ಗಂಗಾವತಿ: ನಗರದ ಕೋಟೆ ಪ್ರದೇಶದಲ್ಲಿನ ಶ್ರೀ ಶಾರದಾ ಶಂಕರ ಭಕ್ತ ಮಂಡಳಿ ಆಯೋಜಿಸಿದ ಕೊಪ್ಪಳ ಜಿಲ್ಲಾ ಮಟ್ಟದ ಸುವರ್ಣ ಭಾರತಿ ಕಲ್ಯಾಣವೃಷ್ಠಿ ಶುಕ್ರವಾರದಂದು ಸಂಪನ್ನಗೊಂಡಿತು.
ಸಮಾರಂಭದ ಉದ್ಘಾಟನೆಯನ್ನು ಶಂಕರಾಚಾರ್ಯರ ಭಾವಚಿತ್ರಕ್ಕೆ ಜ್ಯೋತಿ ಬೆಳಗಿಸುವುದರ ಮೂಲಕ ಶೃಂಗೇರಿ ಶಾರದಾ ಪೀಠದ ರಾಜ್ಯ ಸಂಚಾಲಕ ಉಮೇಶ್ ಹರಿಹರ ನೆರವೇರಿಸಿ ಮಾತನಾಡಿ ಸನಾತನ ಧರ್ಮದ ಪ್ರವರ್ತಕರಾದ ಶ್ರೀ ಶಂಕರಾಚಾರ್ಯರು ಧರ್ಮರಕ್ಷಣೆಗಾಗಿ ದೇಶದ ನಾಲ್ಕು ದಿಕ್ಕುಗಳಲ್ಲಿ ಶ್ರೀ ಮಠಗಳನ್ನು ಸ್ಥಾಪಿಸುವುದರ ಮೂಲಕ ಕರ್ನಾಟಕದಲ್ಲಿ ಶೃಂಗೇರಿ ಶಾರದಾ ಪೀಠದ ಗುರು ಪರಂಪರೆಯನ್ನು ಹೊಂದಿದೆ. ಪ್ರಸ್ತುತ ಪೀಠಾಧಿಕಾರಿಗಳಾದ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರ ೫೦ನೇ ವ?ದ ಸುವರ್ಣ ಮಹೋತ್ಸವದ ಅಂಗವಾಗಿ ಕಿರಿಯ ಪೀಠಾಧಿಕಾರಿಗಳಾದ ಶ್ರೀ ವಿದುಶೇಖರ ಮಹಾಸ್ವಾಮಿಗಳವರ ಎಡತೊರೆ ಶ್ರೀ ಯೋಗಾನಂದೇಶ್ವರ ಶಂಕರ ಭಾರತಿ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಶ್ರೀ ಶಂಕರಾಚಾರ್ಯರು ರಚಿಸಿದ ಕಲ್ಯಾಣವೃಷ್ಠಿ ಶಿವ ಪಂಚಾಕ್ಷರ ನಕ್ಷತ್ರ ಮಾಲಾ ಸ್ತೋತ್ರ ಹಾಗೂ ಲಕ್ಷ್ಮಿ ನರಸಿಂಹ ಸ್ತೋತ್ರಗಳ ಮಹಾ ಅಭಿಯಾನವನ್ನು ಆಯೋಜಿಸಲಾಗಿದ್ದು, ಆಯಾ ಜಿಲ್ಲೆಗಳ ಅಭಿಯಾನವನ್ನು ಸಂಪನ್ನಗೊಳಿಸಲಾಗುತ್ತಿದ್ದು, ರಾಜ್ಯಮಟ್ಟದ ಅಭಿಯಾನವನ್ನು ಶ್ರೀ ವಿದುಶೇಖರ ಭಾರತೀ ಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಅಕ್ಟೋಬರ್-೨೬ ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಂಪನ್ನಗೊಳಲಿದೆ ಎಂದು ಸಮಗ್ರ ಮಾಹಿತಿ ನೀಡಿದರು.
ಗಂಗಾವತಿಯ ಶಂಕರ ಮಠದ ಧರ್ಮದರ್ಶಿ ನಾರಾಯಣ್ ರಾವ್ ವೈದ್ಯ ಮಾತನಾಡಿ ಕಲ್ಯಾಣ ವೃಷ್ಠಿ ಪಾರಾಯಣದಿಂದ ಸಂಸಾರ ದುಃಖವನ್ನು ದಾಟಿಸುತ್ತದೆ. ಹಾಗೆ ಜನ್ಮ ಸಾರ್ಥಕತೆಗೆ ಮೇಲಿನ ಮೂರು ಸ್ತೋತ್ರಗಳನ್ನು ೧೦೮ ಬಾರಿ ಪಟಿಸುವುದರಿಂದ ಜನ್ಮ ಸಾರ್ಥಕವಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾರಂಭದ ಸಂಯೋಜಕಿ ಮಾಲಿನಿ ಗಂಗೂ ಶಾಸ್ತ್ರಿ, ಬ್ರಾಹ್ಮಣ ಸಮಾಜದ ಅಧ್ಯಕ್ಷ ಡಾ. ಕೆ.ಜಿ ಕುಲಕರ್ಣಿ, ರಾಘವೇಂದ್ರ ಅಳವಂಡಿಕರ್ ಉಪಸ್ಥಿತರಿದ್ದರು.
ಕೊಪ್ಪಳ ಬಳ್ಳಾರಿ ರಾಯಚೂರು ಜಿಲ್ಲೆಗಳ ಸುಮಾರು ೮೦೦ಕ್ಕೂ ಅಧಿಕ ಮಾತೆಯರು ಭಾಗವಹಿಸಿದ್ದರು.
Comments are closed.