ಪತ್ರಿಕಾಭವನ ನಿರ್ಮಾಣಕ್ಕೆ 10 ಲಕ್ಷ ಅನುದಾನ   : ರಾಜಶೇಖರ ಹಿಟ್ನಾಳ

0

Get real time updates directly on you device, subscribe now.

 

ಕೊಪ್ಪಳ : ಕರ್ನಾ \

ಟಕ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾಭವನ ನಿರ್ಮಾಣಕ್ಕೆ 10 ಲಕ್ಷ ರೂ. ಅನುದಾನ ನೀಡಲಾಗುವುದು ಎಂದು ಕೊಪ್ಪಳ ಸಂಸದ ಕೆ.ರಾಜಶೇಖರ ಹಿಟ್ನಾಳ ಭರವಸೆ ನೀಡಿದರು.
ಅವರು ಶನಿವಾರದಂದು ನಗರದ ತಾಲೂಕ ಪಂಚಾಯತಿ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಘಟಕದಿಂದ ಆಯೋಜಿಸಲಾದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು‌. ಪತ್ರಿಕಾರಂಗ ಪವಿತ್ರವಾದ ರಂಗವಾಗಿದ್ದು, ಸಮಾಜ ತಿದ್ದುವಲ್ಲಿ ಪತ್ರಕರ್ತರ ಪಾತ್ರ ಮುಖ್ಯವಾಗಿದೆ. ಇಂದಿನ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ಸಣ್ಣ ಪುಣ್ಣ ನೆಗೆಟಿವ್ ಅಂಶಗಳನ್ನು ವೈಭವೀಕರಿಸಿ ತೋರಿಸುತ್ತಿರುವುದು ಸಮಾಜದಲ್ಲಿ ಕೆಟ್ಟ ಪರಿಣಾಮ ಬೀರುತ್ತಿದೆ. ಕಾರಣ ಅಭಿವೃದ್ಧಿ ವಿಚಾರಗಳನ್ನು , ಉತ್ತಮ ಅಂಶಗಳ ವರದಿಗೆ ಹೆಚ್ಚು ಒತ್ತು ಕೊಟ್ಟರೆ ಸಮಾಜ ಅಭಿವೃದ್ಧಿ ಇನ್ನಷ್ಟು ಆಗಲು ಸಾಧ್ಯ ಎಂದು ಸಲಹೆ ನೀಡಿದರು. ಇನ್ನೂ ಈಗಾಗಲೇ ನಿವೇಶನ ಹೊಂದಿದ ನಮ್ಮ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾಭವನ ನಿರ್ಮಾಣಕ್ಕೆ ಹತ್ತು ಲಕ್ಷ ರೂ ಅನುದಾನ ಕಲ್ಪಿಸುವುದಾಗಿ ಭರವಸೆ ನೀಡಿದರು.
ಬಳಿಕ ಪತ್ರಿಕಾ ದಿನಾಚರಣೆಯ ನಿಮಿತ್ತ ಆಯೋಜಿಸಲಾಗಿದ್ದ ಪತ್ರಕರ್ತರ ಕ್ರೀಡಾಕೂಟದಲ್ಲಿ ಜಯಗಳಿಸಿದ ಪತ್ರಕರ್ತರಿಗೆ ಬಹುಮಾನ ವಿತರಿಸಿ ಮಾತನಾಡಿದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಜಿ.ಸಿ ಲೋಕೇಶ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಈಗಾಗಲೇ ಅನಾರೋಗ್ಯದಿಂದ ಸಂಕಷ್ಟಕ್ಕೀಡಾದ ಹಾಗೂ ಸಾವನ್ನಪ್ಪಿದ ಪತ್ರಕರ್ತರಿಗೆ ಪರಿಹಾರ ಹಣ ನೀಡಲಾಗಿದೆ. ಎರಡು ವರ್ಷದಲ್ಲಿ ಬರೋಬ್ಬರಿ 16 ಲಕ್ಷ ರೂ ಹಣವನ್ನು ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ನೀಡಲಾಗಿದೆ ಎಂದರು. ಇನ್ನು ಮಾಧ್ಯಮ ರಂಗವನ್ನು ಯೂಟ್ಯೂಬ್ ಚಾನೆಲ್ ಗಳು ಹಾಳು ಮಾಡುತ್ತಿದೆ. ಅನಧಿಕೃತವಾಗಿ ಇರೋ ಯೂಟ್ಯೂಬ್ ಚಾನಲ್ ಗಳು ಸುದ್ದಿ ವಾಹಿನಿಗಳ ರೀತಿಯಲ್ಲಿ ವರ್ತನೆ ಮಾಡ್ತಾ ಇರೋದು ಮಾದ್ಯಮ ರಂಗಕ್ಕೆ ಅಪಾಯಕಾರಿ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನ ವಹಿಸಿ ಮಾತನಾಡಿದ ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ, ನಾನು ಸಾಮಾನ್ಯ ಕಾರ್ಯಕರ್ತೆಯಾಗಿದ್ದ ಸಂಧರ್ಭದಿಂದ ಎ‌ಂಎಲ್ಸಿಯಾಗುವರೆಗೂ ನನ್ನ ಬೆಳವಣಿಗೆಗೆ ಪತ್ರಕರ್ತರ ಸಹಕಾರ ಅತಿಮುಖ್ಯವಾಗಿದೆ ಎಂದರು. ಇನ್ನೂ ಈಗಾಗಲೇ ಪತ್ರಿಕಾಭವನ ನಿರ್ಮಾಣಕ್ಕೆ 5 ಲಕ್ಷ ರೂ ಅನುದಾನ ನೀಡಿದ್ದೇನೆ. ಮುಂದಿನ ದಿನಮಾನಗಳಲ್ಲಿ ಹೆಚ್ಚಿನ ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು.
ನಗರಸಭೆ ಅಧ್ಯಕ್ಷ ಅಮ್ಜದ ಪಟೇಲ್ ಮಾತನಾಡಿ, ಈಗಾಗಲೇ ನಗರಸಭೆಯಿಂದ ಪತ್ರಕರ್ತರಿಗೆ ನಿವೇಶನ ನೀಡಲು ಹಕ್ಕುಪತ್ರಗಳು ಸಿದ್ಧವಾಗಿದೆ. ಶಾಸಕರು ಶೀಘ್ರದಲ್ಲೇ ವಿತರಣೆ ಮಾಡುತ್ತಾರೆ ಎಂದರು. ಇಷ್ಟೇ ಅಲ್ಲದೆ ನಿವೇಶನ ನೀಡಿದ ಬಳಿಕ ನಗರಸಭೆಯಿಂದ ಮನೆಕಟ್ಟಿಸಿ ಕೊಡುತ್ತೇವೆ ಎಂದರು. ಪತ್ರಿಕಾ ಭವನ ನಿರ್ಮಾಣಕ್ಕೂ ಸಹ ನಗರಸಭೆಯಿಂದ 5 ಲಕ್ಷ ರೂ ಅನುದಾನ ನೀಡಲಾಗುವುದು ಎಂದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಕೆ.ನಿಂಗಜ್ಜ ಮಾತಾನಾಡಿ, ಮಾಧ್ಯಮ ಅಕಾಡೆಮಿಯ ಪ್ರಶಸ್ತಿ ವಿತರಣೆಯಲ್ಲಿ ಎಲ್ಲಾ ಹಿರಿಯ ಪತ್ರಕರ್ತರ ಸಲಹೆ ಪಡೆದು, ಸೂಕ್ತವಾಗಿರುವವರಿಗೆ ನೀಡಲಾಗುವುದು ಎಂದರು.
ಕಾರ್ಯಕ್ರಮ ಅಧ್ಯಕ್ಷತೆವಹಿಸಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಗುಡ್ಲಾನೂರ ಮಾತನಾಡಿ, ಪತ್ರಿಕಾಭವನ ನಿರ್ಮಾಣಕ್ಕೆ ಅನುದಾನ ಘೋಷಣೆ ಮಾಡಿರುವ ಎಲ್ಲಾರಿಗೂ ಧನ್ಯವಾದಗಳು. ಅಲ್ಲದೆ ಗ್ರಾಮೀಣ ಪತ್ರಕರ್ತರಿಗೂ ಸಹ ಉಚಿತ ಬಸ್ ಪಾಸ್ ನೀಡಲು ರಾಜ್ಯ ಘಟಕ ಮುಖ್ಯಮಂತ್ರಿಗಳಿಗೆ ಒತ್ತಡ ಹೇರಿ ಆದೇಶ ಮಾಡಿಸಬೇಕು ಎಂದರು.
ಈ ಸಂಧರ್ಭದಲ್ಲಿ ನಗರಸಭೆಯ ಉಪಾಧ್ಯಕ್ಷೆ ಅಶ್ವಿನಿ ಗದುಗಿನಮಠ, ಜಿಲ್ಲಾವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ರಾಜ್ಯ ಸಮಿತಿ ಸದಸ್ಯ ದೇವರಾಜ್ ಇದ್ದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ರಾಜ್ಯ ಸಮಿತಿ ಸದಸ್ಯ ಎಂ.ಸಾದಿಕ ಅಲಿ ಮಾತನಾಡಿದರು. ಸ್ವಾಗತವನ್ನು ಜಿಲ್ಲಾ ಪ್ರಧಾನಕಾರ್ಯದರ್ಶಿ ನಾಗರಾಜ್. ವೈ ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಜಿಲ್ಲಾ ಖಜಾಂಚಿ ರಾಜು.ಬಿ.ಆರ್, ಪತ್ರಿಕಾಭವನ ಕಟ್ಟಡ ಸಮಿತಿ ಅಧ್ಯಕ್ಷ ಎನ್.ಎಂ ದೊಡ್ಡಮನಿ ಯಶಸ್ವಿಯಾಗಿ ನಡೆಸಿಕೊಟ್ಟರು.

 

ಇದೇ ವೇಳೆ ಪತ್ರಿಕಾದಿನಾಚರಣೆ ನಿಮಿತ್ತ ಆಯೋಜಿಸಿದ್ದ ಪತ್ರಕರ್ತರ ಕ್ರೀಡಾಕೂಟದಲ್ಲಿ ಜಯಗಳಿಸಿದ ಪತ್ರಕರ್ತರಿಗೆ ರಾಜ್ಯ ಸಮಿತಿ ಸದಸ್ಯ ಹೆಚ್. ಎಸ್ ಹರೀಶ್, ಜಿಲ್ಲಾ ಉಪಾಧ್ಯಕ್ಷರಾದ ಹನುಮಂತ ಹಳ್ಳಿಕೇರಿ, ರುದ್ರಗೌಡ ಪಾಟೀಲ್, ಜಿಲ್ಲಾ ಕಾರ್ಯದರ್ಶಿ ವೀರಣ್ಣ ಕಳ್ಳಿಮನಿ, ಚಾಂದ್ ಸಿಂಗ್, ಮಂಜುನಾಥ ಅಂಗಡಿ ವಿತರಿಸಿದರು. ಈ ಸಂಧರ್ಭದಲ್ಲಿ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನೆರವೇರಿಸಲಾಯಿತು. ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಕ್ರೀಡಾ ಸಮಿತಿ, ಪ್ರತಿಭಾ ಪುರಸ್ಕಾರ ಸಮಿತಿಗೆ ಜಿಲ್ಲಾ ಘಟಕ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು . ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲೆಯ ಎಲ್ಲಾ ತಾಲೂಕಿನ ಪದಾಧಿಕಾರಿಗಳು, ಜಿಲ್ಲಾ ಘಟಕದ ಪದಾಧಿಕಾರಿಗಳು, ಸರ್ವಸದಸ್ಯರು ಪಾಲ್ಗೊಂಡಿದ್ದರು

Get real time updates directly on you device, subscribe now.

Leave A Reply

Your email address will not be published.

error: Content is protected !!
%d bloggers like this: