ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರ ಮೆರವಣಿಗೆಗೆ ಉಪ ಕಾರ್ಯದರ್ಶಿ ಚಾಲನೆ
ಕೊಪ್ಪಳ: ಸೆ.೫ ರ ಶಿಕ್ಷಕರ ದಿನಾಚರಣೆಯ ಅಂಗವಾಗಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿರವರು ಕಾವ್ಯಾನಂದ ಉದ್ಯಾನವನದಿಂದ ಚಾಲನೆ ನೀಡಿದರು.
ಈ ಸಮಯದಲ್ಲಿ ಮಾತನಾಡಿದ ಅವರು ಶಿಕ್ಷಕರು ಸಮಾಜವನ್ನು ತಿದ್ದುವ ಶಿಲ್ಪಿಗಳಾಗಿದ್ದಾರೆ.ಶಿಕ್ಷಕರ ದಿನಾಚರಣೆಯನ್ನು ಶಿಕ್ಷಕರೇ ಸೇರಿಕೊಂಡು ಆಚರಣೆ ಮಾಡುವ ಬದಲಾಗಿ ಸಮಾಜವೇ ಈ ಒಂದು ದಿನಾಚರಣೆಯನ್ನು ಮಾಡುವಂತಾಗಬೇಕಿದೆ.ಸಮಾಜದಲ್ಲಿ ಶಿಕ್ಷಕರಿಗೆ ಶ್ರೇಷ್ಠ ಸ್ಥಾನ-ಮಾನಗಳಿದ್ದು,ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಈ ಸಮಯದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆಯ ಇಲಾಖೆಯ ಉಪ ನಿರ್ದೇಶಕರಾದ ಎಸ್.ಎಸ್.ಬಿರಾದರ,ತಹಸಿಲ್ದಾರರಾದ ವಿಠ್ಠಲ್ ಚೌಗಲೇ,ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ,ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಂಕರಯ್ಯಾ,ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಶರಣಬಸವನಗೌಡ,ಕಾರ್ಯದರ್ಶಿ ಮಂಜುನಾಥ,ತಾಲೂಕ ಅಧ್ಯಕ್ಷರಾದ ಹೊಳಿಬಸಯ್ಯಾ,ಕಾರ್ಯದರ್ಶಿ ಬಾಳಪ್ಪ ಕಾಳೆ,ಶಿವಪ್ಪ ಜೋಗಿ,ಪ್ರಾಣೇಶ ಪೂಜಾರ,ಬಸವರಾಜ ಕಮಲಾಪುರ,ಮಾರುತಿ ಮ್ಯಾಗಳಮನಿ,ಹನುಮಂತಪ್ಪ ಕುರಿ,ಶರಣಪ್ಪ ರಡೇರ,ಬಾಲನಾಗಮ್ಮ,ಸುರೇಶ ಕಂಬಳಿ,ಕನಕಪ್ಪ,ಮಂಜುನಾಥ ಮುಂತಾದವರು ಹಾಜರಿದ್ದರು.
Comments are closed.