ಜಿಲ್ಲೆಯಲ್ಲಿ ಮೊಟ್ಟ ಮೊದಲ ಸಲ ಕೋಟ್ಯಾಧಿಪತಿ ರಸಪ್ರಶ್ನೆ ಸ್ಪರ್ಧೆ
ಶ್ರೀ ಗಜಾನನ ಗೆಳೆಯರ ಬಳಗದಿಂದ ಜ್ಞಾನ ವೃದ್ಧಿಯ ವಿಭಿನ್ನ ಕಾರ್ಯಕ್ರಮ ಆಯೋಜನೆ
* ವಿಜೇತರಿಗೆ ಪುಸ್ತಕ ಮತ್ತು ಆಕರ್ಷಕ ಬಹುಮಾನ
ಕೊಪ್ಪಳ: ಸೆಪ್ಟೆಂಬರ್ 7ರಿಂದ ರಾಜ್ಯಾದ್ಯಂತ ಗಣೇಶ ಪ್ರತಿಷ್ಠಾಪನೆಯ ಸಡಗರ. ರಕ್ತದಾನ ಶಿಬಿರ ಹಾಗೂ ಉಚಿತ ಮಹಾಪ್ರಸಾದ ಸೇವೆ, ಬಹುತೇಕ ಗಣೇಶ ಮಂಡಳಿಗಳ ಸಾಮಾಜಿಕ ಕಾರ್ಯ. ಆದರೆ ಕೊಪ್ಪಳದ ಡಾ.ಸಿಂಪಿ ಲಿಂಗಣ್ಣ ರಸ್ತೆಯ ಶ್ರೀ ಗಜಾನನ ಗೆಳೆಯರ ಬಳಗ ಇವುಗಳ ಜೊತೆಗೆ ಈ ಸಲ ವಿಭಿನ್ನ ಕಾರ್ಯಕ್ರಮಕ್ಕೆ ರೂಪುರೇಷೆ ಸಿದ್ಧಪಡಿಸಿದೆ ಎಂದು ಬಳಗದ ಅಧ್ಯಕ್ಷ ಬಸವರಾಜ ಕರುಗಲ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕನ್ನಡದ ಮನರಂಜನಾ ವಾಹಿನಿಗಳ ಸುಪ್ರಸಿದ್ಧ ರಸಪ್ರಶ್ನೆ ಸ್ಪರ್ಧೆಗಳೆಂದರೆ ಕನ್ನಡದ ಕೋಟ್ಯಾಧಿಪತಿ ಹಾಗೂ ಥಟ್ ಅಂತ ಹೇಳಿ ಕಾರ್ಯಕ್ರಮ. ಇವುಗಳ ಮಾದರಿಯಲ್ಲಿ ಶ್ರೀ ಗಜಾನನ ಗೆಳೆಯರ ಬಳಗ ಗಣೇಶ ಪ್ರತಿಷ್ಠಾಪನೆಯ ಮೂರನೇ ದಿನ ಅಂದರೆ ಸೆಪ್ಟೆಂಬರ್ 9ರ ಸೋಮವಾರ ಕೊಪ್ಪಳದ ಕೋಟ್ಯಾಧಿಪತಿ ಕಾರ್ಯಕ್ರಮ ಆಯೋಜಿಸಿದೆ ಎಂದು ತಿಳಿಸಿದ್ದಾರೆ.
ರಸಪ್ರಶ್ನೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸೆಪ್ಟೆಂಬರ್ 8ರೊಳಗೆ ಹೆಸರು ನೋಂದಾಯಿಸಬೇಕು. ಪ್ರಾಥಮಿಕ ಸುತ್ತಿನ ಪ್ರಶ್ನೆಗೆ ವೇಗದ ಸಮಯದಲ್ಲಿ ಸರಿಯುತ್ತರ ನೀಡಿದ ಸ್ಪರ್ಧಿ ಹಾಟ್‌ಸೀಟ್‌ಗೆ ಪ್ರವೇಶ ಪಡೆಯುತ್ತಾರೆ. ಅಲ್ಲಿ ಹತ್ತು ಪ್ರಶ್ನೆಗಳಿಗೆ ಉತ್ತರಿಸಲು ಎರಡು ಲೈಫ್‌ಲೈನ್ ನೀಡಲಾಗುವುದು. ಹತ್ತು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ ಸ್ಪರ್ಧಿಯನ್ನು ಒಂದು ಕೋಟಿ ಅಂಕಗಳನ್ನು ನೀಡುವ ಮೂಲಕ ಕೊಪ್ಪಳದ ಕೋಟ್ಯಾಧಿಪತಿ ಎಂದು ಘೋಷಿಸಲಾಗುವುದು. ಜೊತೆಗೆ ಹಾಟ್‌ಸೀಟ್ ಪ್ರವೇಶಿಸಿದ ಪ್ರತಿ ಸ್ಪರ್ಧಿ ಸರಿಯುತ್ತರ ನೀಡಿದ ಅಂಶಗಳನ್ನು ಆಧರಿಸಿ ಗರಿಷ್ಠ 10 ಪುಸ್ತಕಗಳನ್ನು ಬಹುಮಾನದ ರೂಪದಲ್ಲಿ ನೀಡಲಾಗುವುದು ಎಂದು ಅವರು ವಿವರಿಸಿದ್ದಾರೆ.
ಇವುಗಳ ಜೊತೆಗೆ ಮಕ್ಕಳಿಗಾಗಿ ಸ್ಲೋ ಸೈಕ್ಲಿಂಗ್ ರೇಸ್, ಸೂಪರ್ ಮಿನಿಟ್, ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಎಲ್ಲ ವಯೋಮಾನದವರಿಗೆ ಚೆಸ್, ಕೇರಂ ಸ್ಪರ್ಧೆ, ವಿವಾಹಿತರಿಗೆ ಆದರ್ಶ ದಂಪತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕೊಪ್ಪಳದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಕನಿಷ್ಠ 12 ವರ್ಷ ವಯಸ್ಸಾಗಿರಬೇಕು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬರ್ -9380605892, 9448036636, 8088013777, 7411850242, 8660369072 ಇವರನ್ನು ಸಂಪರ್ಕಿಸಲು ಪ್ರಕಟಣೆ ಕೋರಿದೆ
Comments are closed.