ಮೂಲಭೂತ ಸೌಕರ್ಯಕ್ಕಾಗಿ ಒದಗಿಸಲು ಆಗ್ರಹಿಸಿ ಪ್ರತಿಭಟನೆ
ಕೊಪ್ಪಳ ನಗರದ ಒಂದನೇ ವಾರ್ಡ್ ಮೆಹಬೂಬ್ ನಗರದ ರಸ್ತೆ, ಚರಂಡಿ, ಸ್ವಚ್ಛತೆ, ಸೊಳ್ಳೆ ಹಾವಳಿ, ಇನ್ನಿತರ ಮೂಲಭೂತ ಸೌಕರ್ಯಕ್ಕಾಗಿ ಒದಗಿಸಲು ಆಗ್ರಹಿಸಿ ಪ್ರತಿಭಟನೆ
ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ ಪಕ್ಷವತಿಯಿಂದ ಕೊಪ್ಪಳ ನಗರಸಭೆ ಮುಂದೆ ಪ್ರತಿಭಟನೆ ಮಾಡಲಾಯಿತು. ಈ ಪ್ರತಿಭಟನೆ ಉದ್ದೇಶಿಸಿ ಪಕ್ಷದ ಜಿಲ್ಲಾ ಮುಖಂಡ ಶರಣು ಘಡ್ಡಿ ಮಾತನಾಡಿ ಕೊಪ್ಪಳದ ಮೆಹಬೂಬು ನಗರದಲ್ಲಿ ಕಳೆದ 15 ವರ್ಷಗಳಿಂದ ಆಶ್ರಯ ನಿವೇಶನಗಳಲ್ಲಿ ಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.
ಈ ನಗರಕ್ಕೆ ಕನಿಷ್ಠ ಮೂಲಭೂತ ಸೌಕರ್ಯಗಳು ಇಲ್ಲದಿರುವುದು ಅತ್ಯಂತ ನೋವಿನ ಸಂಗತಿ. ಮಳೆ ಬಂದರೆ ಸಾಕು ಚರಂಡಿ ನೀರು, ರಸ್ತೆ ಮೇಲೆ ಬಂದು ಓಡಾಡೋದಕ್ಕೂ ಆಗುವುದಿಲ್ಲ. ಮಕ್ಕಳು, ವೃದ್ಧರು, ಈ ರಸ್ತೆಯಲ್ಲಿ ಜಾರಿ ಬಿದ್ದು ಕೈಕಾಲು ಮುರಿದುಕೊಂಡು ಆಸ್ಪತ್ರೆ ಸೇರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ನೀರು ಹರಿಯಲು ಯಾವುದೇ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮನೆ ಒಳಗಡೆ ಬಂದು ನಿವಾಸಿಗಳಿಗೆ ಅನಾರೋಗ್ಯ ತೊಂದರೆಗಳು ಹೆಚ್ಚುತ್ತಿವೆ.. ಸೊಳ್ಳೆ ಹಾವಳಿಯಿಂದ ಡೆಂಗಿ ಜ್ವರ ಮುಂತಾದ ಸಂಕ್ರಾಮಿಕ ರೋಗಗಳು ಬಡ ಜನರನ್ನು ನೆಮ್ಮದಿ ಹಾಳು ಮಾಡುತ್ತಿದೆ.
ಈ ಸಮಸ್ಯೆ ಕುರಿತು ಹಲವಾರು ಬಾರಿ ನಮ್ಮ ನಗರಸಭೆಗೆ ಮನವಿ ಸಲ್ಲಿಸಿದರು ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಕೂಡಲೆ ರಸ್ತೆಗೆ ಡಾಂಬರಿಕರಣ ಮಾಡಬೇಕು , ಚರಂಡಿ ನಿರ್ಮಾಣ ಮಾಡಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು. ಬೀದಿ ದೀಪಗಳ ಇಲ್ಲದೆ ಓಣಿಯಲ್ಲಿ ಕತ್ತಲು ಆವರಿಸಿದೆ. ಇಂಥ ಜಾಗದಲ್ಲಿ ದಿನನಿತ್ಯ ಹಾವು,ಚೇಳು, ಕಡಿಸಿಕೊಂಡು ಅನಾಹುತ ಘಟನೆಗಳು ನಡೆದಿದ್ದು ನಿವಾಸಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಈ ಎಲ್ಲ ಸಮಸ್ಯೆಗಳನ್ನು ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಮಾಡಿ ಕೊಡಲೇ ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು. ಮೇಹಬೂಬು ನಗರದ 6ನೇ ಕ್ರಾಸ್, 7ನೇ ಕ್ರಾಸ್, 8ನೇ ಕ್ರಾಸ್, 9ನೇ ಕ್ರಾಸ್ ಮುಖ್ಯ ರಸ್ತೆ ಮತ್ತು ಒಳಗಿನ ಓಣಿ ರಸ್ತೆಗಳನ್ನು ಕೂಡಲೇ ನಿರ್ಮಿಸಬೇಕು. ವೈಜ್ಞಾನಿಕ ಚರಂಡಿ ವ್ಯವಸ್ಥೆ ನಿರ್ಮಾಣ ಮಾಡಬೇಕು.
ಮಳೆ ನೀರು ನಿಲ್ಲದಂತೆ ಸ್ವಚ್ಛತೆ ಕೈಗೊಂಡು ಸೊಳ್ಳೆ ಹಾವಳಿ ನಿಯಂತ್ರಿಸಬೇಕು. ರಸ್ತೆಯಲ್ಲಿರುವ ಬೀದಿ ದೀಪದ ಕಂಬಗಳನ್ನು ಬದಿಯಲ್ಲಿ ಹಾಕಿ ರಾತ್ರಿ ವೇಳೆ ಸದಾ ಬೆಳಕಿನ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು. ನಗರ ಸಬೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು ಈ ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಶರಣಬಸವ ಪಾಟೀಲ್, ಮಂಗಳೇಶ ರಾಠೋಡ್ ದ್ಯಾಮಣ್ಣ ಡೊಳ್ಳಿನ, ನಗರದ ನಿವಾಸಿಗಳಾದ ಲಲಿತಮ್ಮ ಈರಮ್ಮ ಲಕ್ಷ್ಮಿ ಜಾಲಗಾರ್,ಬಾನು ಜಿ ನೀಲಗಾರ, ದೇವಮ್ಮ, ಉಷಾ ಬಂಡಾರಿ, ಸುಮಾ, ಗೌಷಿಯ, ಸಂಗಮ್ಮ,ತುಳುಸಮ್ಮ, ಸ್ವಪ್ನ, ಮುಂತಾದವರು ಭಾಗವಹಿಸಿದ್ದರು.
Comments are closed.