ಮಹಿಳಾ ಅತ್ಯಾಚಾರ & ದೌರ್ಜನ್ಯದ ವಿರುದ್ಧ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪ್ರತಿಭಟನೆ

Get real time updates directly on you device, subscribe now.

ಕೊಪ್ಪಳ ಮಹಿಳಾ ಅತ್ಯಾಚಾರ & ದೌರ್ಜನ್ಯದ ವಿರುದ್ಧ ಅಶೋಕ ವೃತ್ತದ ಹತ್ತಿರ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಮಹಿಳಾ ಘಟಕದಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ದೇಶ ಸ್ವಾತಂತ್ರಗೊಂಡು ೭೭ ವರುಷ ಕಳೆದರೂ ಮಹಿಳೆ ಇನ್ನು ಸ್ವಾತಂತ್ರಗೊಂಡಿಲ್ಲ. ದೇಶದಲ್ಲಿ ಮಹಿಳೆಯರ ಮೇಲೆ ದಿನೇ ದಿನೇ ಅತ್ಯಾಚಾರ, ದೌರ್ಜನ್ಯ, ಕೊಲೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಲೇ ಇವೆ. ಮಹಿಳೆಗೆ ನಿರ್ಜೀವ ವಸ್ತುವಿನಂತೆ ಹೀನಾಯ ಸ್ಥಿತಿಗೆ ತಳ್ಳಲಾಗುತ್ತಿದೆ.
ಇದೇ ಆಗಸ್ಟ್‌ನಲ್ಲಿ ನಾವು ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿರುವ ಸಂದರ್ಭದಲ್ಲಿ ಪ್ರಸ್ತುತ ಕಲ್ಕತ್ತಾದ ಆರ್.ಜಿ.ಕರ್ ಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ನಡೆದ ಕ್ರೂರ ಅತ್ಯಾಚಾರ, ಉತ್ತರಾಖಂಡದಲ್ಲಿ ನಡೆದ ನರ್ಸ್ ಮೇಲಿನ ಅತ್ಯಾಚಾರ, ಬಿಹಾರದಲ್ಲಿ ೯ನೇ ತರಗತಿ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ, ಉತ್ತರ ಪ್ರದೇಶದಲ್ಲಿ ಮೂರು ವರ್ಷದ ಮಗುವಿನ ಮೇಲೆ ನಡೆದ ಅತ್ಯಾಚಾರ, ಮಹಾರಾಷ್ಟ್ರದ ಬದಲಾಪುರದಲ್ಲಿ ೩ ಮತ್ತು ೪ ವರ್ಷದ ಮಕ್ಕಳ ಮೇಲೆ ನಡೆದ ಅತ್ಯಾಚಾರ, ಬೆಂಗಳೂರಿನ ಹೆಚ್.ಆರ್.ಎಸ್. ಲೇಔಟ್ ವ್ಯಾಪ್ತಿಯಲ್ಲಿ ನಡೆದ ಅತ್ಯಾಚಾರ, ಮಂಡ್ಯದಲ್ಲಿ ನಡೆದ ಅತ್ಯಾಚಾರ ಹೀಗೆ ಅತ್ಯಾಚರಾಗಳು ನಿರಂತರವಾಗಿ ನಡೆಯುತ್ತಲೇ ಇವೆ. ಶಾಲಾ, ಕಾಲೇಜು, ಆರೋಗ್ಯ ಕೇಂದ್ರ, ಕೆಲಸ ನಿರ್ವಹಿಸುವ ಸ್ಥಳ, ವಾಹನಗಳಲ್ಲಿ ಹೀಗೆ ಯಾವುದೇ ಸ್ಥಳದಲ್ಲಿ ಇವತ್ತು ಮಹಿಳೆ ಸುರಕ್ಷಿತವಾಗಿಲ್ಲ.

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಮಹಿಳಾ ವಿಭಾಗ ಮಹಿಳೆಯರ ಮೇಲೆ ನಡೆಯುತ್ತಿರುವ ಈ ಅತ್ಯಾಚಾರ, ದೌರ್ಜನ್ಯವನ್ನು ತೀವ್ರವಾಗಿ ಖಂಡಿಸುತ್ತದೆ. ಈ ಮೂಲಕ ಮಾನ್ಯ ರಾಷ್ಟ್ರಪತಿಯವರನ್ನು ಆಗ್ರಹಿಸುವುದೇನೆಂದರೆ ತಾವು ಕೂಡಾ ಓರ್ವ ಮಹಿಳೆಯಾಗಿದ್ದೀರಿ. ಮಹಿಳೆಯರವ ಮೇಲೆ ನಡೆಯುತ್ತಿರುವ ಈ ದೌರ್ಜನ್ಯಗಳನ್ನು ಗಮನಿಸುತ್ತಿದ್ದೀರಿ. ದಯವಿಟ್ಟು ತಾವು ಮಧ್ಯಸ್ಥಿಕೆ ವಹಿಸಿ ಈ ಅತ್ಯಾಚಾರ ಮತ್ತು ದೌರ್ಜನ್ಯಗಳನ್ನು ತಡೆಯುವುದಕ್ಕೆ ಸೂಕ್ತ ಕ್ರಮ ವಹಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮಹಿಳೆಯರ ಸುರಕ್ಷತೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಿಕ್ಕೆ ನಿರ್ದೇಶನ ನೀಡಬೇಕು. ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ನಡೆಸುವವರಿಗೆ ತ್ವರಿತಗತಿಯಲ್ಲಿ ತನಿಖೆ ನಡೆಸಿ ಕಠಿಣ ಶಿಕ್ಷೆ ಆಗುವ ಹಾಗೆ ಮಾಡಬೇಕೆಂದು ಮಾನ್ಯ ಜಿಲ್ಲಾಧಿಕಾರಿಗಳು ಕೊಪ್ಪಳ ರವರ ಮುಖಾಂತರ ಗೌರವಾನ್ವಿತ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯ ನೇತೃತ್ವವನ್ನು ರಾಜ್ಯ ಮಹಿಳಾ ಘಟಕದ ಅಧ್ಯಕ್ಷರು ಹಾಗೂ ಕೊಪ್ಪಳ ನಗರ ಸಭೆಯ ಸದಸ್ಯರು ಸಬಿಯಾ ಪಟೇಲ್ ವಹಿಸಿದ್ದರು. ಈ ಸಂದರ್ಭದಲ್ಲಿ ರಿಜ್ವಾನ ಬೇಗಮ್ ಎIಊ ಮಹಿಳಾ ಘಟಕದ ಜಿಲ್ಲಾ ಸಂಚಾಲಕಿ, ಫಿರಾಸತ್ ಫಾತಿಮಾ ಎIಊ ಕಾರ್ಯದರ್ಶಿ ಕೊಪ್ಪಳ, ಮಹೇಕ್ ಮಾರಿಯಾ ಸಂಚಾಲಕಿ ಉIಔ ಕೊಪ್ಪಳ, ಅನೀಸ್ ಫಾತಿಮಾ ಉIಔ ಪ್ರಾದೇಶಿಕ ಸಂಚಾಲಕಿ ಕರ್ನಾಟಕ ಮತ್ತು ಅನೇಕ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!