ಅಧಿಕಾರಿಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗದ ರೀತಿಯಲ್ಲಿ ವರ್ತಿಸಬೇಕು– ಕ್ಯಾವಟರ್ ಆಫ್

Get real time updates directly on you device, subscribe now.

Koppal :

ಧಾರ್ಮಿಕ ಭಾವನೆಗಳಿಗೆ ಧಕ್ಕೆಯೆಂಬ ಕುಂಟು ನೇಪ ಹೇಳಿಕೆ ನೀಡಿ ಗಂಗಾವತಿ ತಹಶೀಲ್ದಾರ್ ಅವರು, ಗಂಗಾವತಿ ನಗರದಲ್ಲಿನ ಅಲಂಕಾರಿಕ ವಿದ್ಯುತ್ ದೀಪಗಳ ತೆರವಿಗೆ ಮೊದಲು ಮುಂದಾಗಿದ್ದರು. ಪವಾಡ ಪುರುಷ ಹನುಮನ ಮೂಲಕ ದೇಶ – ವಿದೇಶದಲ್ಲಿ ಪ್ರಸಿದ್ಧಿ ಪಡೆದ ನಮ್ಮ ಗಂಗಾವತಿ ಕ್ಷೇತ್ರದಲ್ಲಿ ನಗರದ ಸೌಂದರ್ಯೀಕರಣಕ್ಕಾಗಿ ಬೀದಿ ದೀಪಗಳಿಗೆ ರಾಮನ ಬಿಲ್ಲು, ತಿಮ್ಮಪ್ಪನ ನಾಮ ಹಾಗೂ ಹನುಮನ ಗದೆ ಹಾಕಿ ಗಂಗಾವತಿ ನಗರವನ್ನು ದೀಪಗಳ ಅಲಂಕಾರಿಕವಾಗಿ ಮಾಡಿ, ಭಕ್ತರಿಗೆ ಒಂದು ಪುಣ್ಯಕ್ಷೇತ್ರಕ್ಕೆ ಬಂದಿರುವಾಗ ಅದರ ಮನನ ಮಾಡುವ ಪ್ರಯತ್ನ ಇದರ ಹಿಂದಿದೆ ಎಂದು ಬಿಜಿಪಿಯ
ರಾಜ್ಯ ಕಾರ್ಯಕರಣಿ ಸದಸ್ಯರು ಹಾಗೂ ನಿಕಟಪೂರ್ವ ಅಭ್ಯರ್ಥಿ, ಕೊಪ್ಪಳ ಲೋಕಸಭಾ ಕ್ಷೇತ್ರ   ಡಾ. ಬಸವರಾಜ ಎಸ್ ಕ್ಯಾವಟರ್  ಹೇಳಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು

ಆದರೆ, ಗಂಗಾವತಿಯ ತಹಸೀಲ್ದಾರ ಅವರು, ಸ್ಥಳೀಯ ಕೆಲವು ಸಂಘಟನೆಗಳ ವಿನಾಕಾರಣ ಆರೋಪ ಪರಿಗಣಿಸಿ, ಪ್ರಾರಂಭದಲ್ಲಿ ತೆರವುಗೊಳಿಸುವಂತೆ ಮಾಡಿ, ಪ್ರಕರಣ ದಾಖಲಿಸುವ ಪ್ರಯತ್ನ ಮಾಡಿದ್ದರು. ಸ್ಥಳಕ್ಕೆ ತೆರಳಿ ಪರಿಶೀಲಿಸದೇ ಲಿಖಿತ ಆದೇಶ ನೀಡಿ, ರಾಜ್ಯ ಕಾಂಗ್ರೆಸ್ ಸರಕಾರದ ಕೈಗೊಂಬೆಯAತೆ ಕೆಲಸ ಮಾಡಿದ್ದರು. ತಹಸೀಲ್ದಾರ್ ಈ ಕ್ರಮಕ್ಕೆ ನಾಗರೀಕ ವಲಯದಿಂದ ಟೀಕೆ ವ್ಯಕ್ತವಾದ ಬಳಿಕ ತಮ್ಮ ಆದೇಶ ಹಿಂಪಡೆದಿದ್ದಾರೆ.

೪ ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ರಸ್ತೆಯ ಸೌಂದರ್ಯೀಕರಣ ಹಾಳು ಗೇಡವಲು ಸ್ಥಳೀಯ ರಾಜಕೀಯ ಹಿತಾಸಕ್ತಿಗಳು ಹಾಗೂ ಎಸ್ ಡಿ ಪಿ ಐ ನಂತಹ ಸಂಘಟನೆಗಳು ಕಾಯ್ದು ಕುಳಿತಿವೆ. ಅಂತವರ ಜತೆಗೆ ಅಧಿಕಾರಿಗಳು ಶಾಮಿಲ್ ಆಗಿದ್ದಾರೆ. ದೇಶದಲ್ಲಿ ರಾಮನಿಗೆ ಎಷ್ಟು ಪಾವಿತ್ರತೆ ಇದೆಯೋ ಅದೇತರ ಹನುಮನಿಗೂ ಇದೆ. ಆದರೆ, ರಾಜಕೀಯ ಕಾರಣಕ್ಕಾಗಿ ಗಂಗಾವತಿ ನಗರದ ದೀಪ ಅಲಂಕಾರಕ್ಕೆ ವಿರೋಧ ವ್ಯಕ್ತಪಡಿಸುವ ಮನಸ್ಥಿತಿ ಅಧಿಕಾರಿಗಳಲ್ಲಿ ಬಂದಿರುವುದು ಸರಿಯಲ್ಲ. ಸದ್ಯ ಆದೇಶ ಹಿಂಪಡೆದಿದ್ದರೂ ತಹಸೀಲ್ದಾರ್ ಈ ಪ್ರಕರಣದಲ್ಲಿ ನಡೆದುಕೊಂಡಿರುವ ರೀತಿ ಬೇಸರ ತರಿಸಿದೆ. ಮುಂದೆ ಈ ರೀತಿಯ ಘಟನೆಗಳಾಗಬಾರದು.

ಅಧಿಕಾರಿಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗದ ರೀತಿಯಲ್ಲಿ ವರ್ತಿಸಬೇಕು. ಹಾಗೂ ಅಭಿವೃದ್ಧಿ ಕೆಲಸ ಕಾರ್ಯಕ್ಕೆ ದಾರಿ ಮಾಡಿಕೊಡಬೇಕು.ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು. ಅಲ್ಲದೆ, ಈ ವಿಚಾರವನ್ನು ಇಲ್ಲಿಗೆ ಬಿಡುವುದಿಲ್ಲ. ಸದರಿ ಘಟನೆಯನ್ನು ಕೇಂದ್ರ ಸರಕಾರದ ಗಮನಕ್ಕೆ ಮತ್ತು ಮುಂದಿನ ದಿನಗಳಲ್ಲಿ ಕೇಂದ್ರದ ಅಧಿವೇಶನ ಸಮಯದಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವಂತೆ ಮಾಡುತ್ತೇನೆ. ಅಲ್ಲದೆ, ಇನ್ನೂ ಹೆಚ್ಚಿನ ಹಣವನ್ನು ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಕೆಂದ್ರ ಸರಕಾರದಿಂದ ತರುವ ಪ್ರಾಮಾಣಿಕ ಪ್ರಯತ್ನ ಮಾಡುವೆ. ಜತೆಗೆ ಸ್ಥಳೀಯ ಶಾಸಕರ ಹಾಗೂ ಹಿಂದೂಪರ ಸಂಘಟನೆಗಳ ಜತೆಗೂಡಿ ಅಂಜನಾದ್ರಿ ಅಭಿವೃದ್ದಿಗೆ ಕೈಜೋಡಿಸುತ್ತೇನೆೆ ಎಂದು ಹೇಳಿದ್ದಾರೆ.

Get real time updates directly on you device, subscribe now.

Comments are closed.

error: Content is protected !!