ಆ.31 ರಂದು ಮಾದಿಗರ ರಕ್ಷಣಾ ವೇದಿಕೆಯ ಜಿಲ್ಲಾ ಕಮಿಟಿ ರಚನೆ : ಗುಡಿಮನಿ

Get real time updates directly on you device, subscribe now.


ಕೊಪ್ಪಳ : ತಾಲೂಕು ಪಂಚಾಯಿತಿ ಅವರಣದಲ್ಲಿರುವ ಸಭಾಂಗಣದಲ್ಲಿ ದಿ.31 ಆಗಸ್ಟ್ ಬೆಳಿಗ್ಗೆ 10 ಗಂಟೆಗೆ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ (ಕೆ.ಎಂ.ಆರ್.ಎ) ಜಿಲ್ಲಾ ಕಮಿಟಿ ರಚಿಸಲಾಗುವುದು ಎಂದು ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಕರಿಯಪ್ಪ ಗುಡಿಮನಿ ಹೇಳಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ, ಉದ್ದೇಶಿಸಿ ಮಾತನಾಡಿ ಸಂಘಟನೆಗೆ ಸೇರಬಯಸುವವರು ವೇದಿಕೆ ಸ್ವಾಭಿಮಾನ-ಸ್ವಾತಂತ್ರ್ಯ-ಸಮಾನತೆ ಸಿದ್ದಾಂತ ಬದ್ಧತೆಯಲ್ಲಿ ನಂಬಿಕೆ ಇರುವವರು ರಾಜಿ ರಹಿತ ರಾಜಕೀಯ ರಹಿತ ಅಳವಡಿಸಿಕೊಂಡು ನೋವುಂಡ ಜನರನ್ನು ಸಂಘಟಿಸಲು ಸದಸ್ಯರಾಗಬಹುದು. ಇಡೀ ಕೊಪ್ಪಳ ಜಿಲ್ಲೆಯಲ್ಲಿ ಅಸ್ಪೃಶ್ಯತೆ ತಾಂಡವಾಡುತ್ತಿದ್ದು ಮೂರು ವರ್ಷಗಳಲ್ಲಿ ನೂರಕ್ಕೂ ಹೆಚ್ಚು ಗ್ರಾಮಗಳಲ್ಲಿ ಸೋಶಿತ ಮಾದಿಗರ ಸಮುದಾಯದ ಮೇಲೆ ಜಾತಿಯತೇಯಿಂದ ಹಲ್ಲೆಯಾಗಿರುವುದು ಜಿಲ್ಲೆಯಲ್ಲಿ ఎల్లరిಗುಾ ಗೊತ್ತಿರುವ – ವಿಷಯವಾಗಿದೆ. ಇತ್ತೀಚಿನ ಕೆಲವು ದಿನಗಳ ಹಿಂದೆ ಯಲಬುರ್ಗಾ ತಾಲೂಕು ಸಂಗನಾಳ ಗ್ರಾಮದಲ್ಲಿ ಕಟ್ಟಿಂಗ್ ವಿಷಯಕ್ಕೆ ಅಸ್ಪೃಶ್ಯತೆ ಆಚರಣೆಯಿಂದ ಗ್ರಾಮದ ಯಮನೂರಪ್ಪ ಹತ್ಯೆಯಾಗಿರುವುದು ಖಂಡಿಸುತ್ತಾ ಅಸ್ಪೃಶ್ಯತೆ ನಾಶಕ್ಕಾಗಿ ಸೌಹಾರ್ಧತೆ ನಿರ್ಮಾಣಕ್ಕಾಗಿ ಅಭಿಯಾನ ಸಾರಬೇಕಾಗಿದೆ.ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಬೇಕಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಿಂದಲೇ ಅಸ್ಪೃಶ್ಯತೆ ನಾಶಮಾಡೋಣ ಸಮಾನತೆಗಾಗಿ ಕೈ ಜೋಡಿಸೋಣ ಅನ್ನುವ ಮೂಲಕ ಕಹಳ ಊದಿಸೋಣ. ನಮ್ಮ ಜೊತೆಗೆ ಕೈ ಜೋಡಿಸುವುದು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮುದುಕಪ್ಪ ಹೊಸಮನಿ,ವಿರುಪಾಕ್ಷಪ್ಪ ಎಡೆಯಾಪುರ,ಹುಲುಗಪ್ಪ ಹ್ಯಾಟಿ,ಯಮನೂರಪ್ಪ ಮುದ್ದಾಬಳ್ಳಿ ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!