ಐತಿಹಾಸಿಕ ವಿಜಯನಗರ ಜಿಲ್ಲೆಗೆ ಹಣಕಾಸು ಆಯೋಗದ ನಿಯೋಗ ಭೇಟಿ
ಹೊಸಪೇಟೆ ವಿಜಯನಗರ )
ಭಾರತ ಸರ್ಕಾರದ 16ನೇ ಕೇಂದ್ರ ಹಣಕಾಸು ಆಯೋಗದ ನಿಯೋಗವು ಐತಿಹಾಸಿಕ ವಿಜಯನಗರ ಜಿಲ್ಲೆಗೆ ಆಗಸ್ಟ್ 30ರಂದು ಭೇಟಿ ನೀಡಿತು.
ಪೂರ್ವ ನಿಗದಿಯಂತೆ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಹೊರಟು ಸಂಜೆ ವೇಳೆಗೆ ತೋರಣಗಲ್ಲಿಗೆ ಆಗಮಿಸಿದ ನಿಯೋಗದಲ್ಲಿನ ಅಧ್ಯಕ್ಷರು ಮತ್ತು ಸದಸ್ಯರಿಗೆ
ವಿಜಯನಗರ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆಯಿಂದ ಆತ್ಮೀಯವಾಗಿ ಸ್ವಾಗತ ಕೋರಲಾಯಿತು.
ರಾಜ್ಯ ಸರ್ಕಾರದ ಪರವಾಗಿ
ಆರ್ಥಿಕ ಇಲಾಖೆಯ
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಎಲ್.ಕೆ.ಅತಿಕ್, ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಹರಿ ಬಾಬು ಬಿ.ಎಲ್., ಜಿಪಂ ಸಿಇಓ ನೊಂಗ್ಜಾಯ್ ಮೊಹಮದ್ ಅಲಿ ಅಕ್ರಮ ಷಾಹ ಸೇರಿದಂತೆ ಇತರರು ನಿಯೋಗದಲ್ಲಿ ಹಿರಿಯ ಅಧಿಕಾರಿಗಳಿಗೆ ಹೂಗುಚ್ಛ ನೀಡಿ ಆತ್ಮೀಯವಾಗಿ ಬರ ಮಾಡಿಕೊಂಡರು.
*ಪುಳಕಿತರಾದರು:* ತೋರಣಗಲ್ಲಿನ ಮೂಲಕ ರಸ್ತೆ ಮಾರ್ಗವಾಗಿ ವಿಶೇಷ ವಾಹನದ ಮೂಲಕ ವಿಜಯನಗರ ಜಿಲ್ಲೆಯ ಹೊಸಪೇಟೆಯ ಹಂಪಿಗೆ ಆಗಮಿಸುತ್ತಿದ್ದಂತೆ ನಿಯೋಗದಲ್ಲಿನ ಹಿರಿಯ ಅಧಿಕಾರಿಗಳು ಪುಳಕಿತರಾದರು.
*ವಿಜಯವಿಠ್ಠಲ ದೇವಾಲಯಕ್ಕೆ ಭೇಟಿ*: ಹಂಪಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಿಯೋಗದಲ್ಲಿನ ಅಧಿಕಾರಿಗಳು ಮೊದಲಿಗೆ ಹಂಪಿಯ ಪ್ರಸಿದ್ಧ ಶ್ರೀ ವಿಜಯವಿಠ್ಠಲ ದೇವಾಲಯಕ್ಕೆ ಭೇಟಿ ನೀಡಿದರು. ಬಳಿಕ ತಂಡವು ಶ್ರೀ ವಿರುಪಾಕ್ಷೇಶ್ವರ ದೇವಾಲಯಕ್ಕೆ ಭೇಟಿ ನೀಡಿತು.
ಈ ವೇಳೆ ಸಹಾಯಕ ಆಯುಕ್ತರಾದ ವಿವೇಕಾನಂದ ಪಿ., ಜಿಪಂ ಉಪ ಕಾರ್ಯದರ್ಶಿ ಭೀಮಪ್ಪ ಲಾಳಿ ಹಾಗೂ ನಿಯೋಗಕ್ಕೆ ನಿಯೋಜನೆಯಾದ ಲೈಜನ್ ಅಧಿಕಾರಿಗಳು ಇದ್ದರು.
Comments are closed.