ಜನಪರ ಕಾಳಜಿ, ಅಭಿವೃದ್ಧಿ ನಮ್ಮ ಗುರಿ: ಗಡಾದ
ಕೊಪ್ಪಳ : ಜನಪರ ಕಾಳಜಿ, ಅಭಿವೃದ್ಧಿಯೇ ನಮ್ಮ ಗುರಿ. ರಾಜ್ಯದಲ್ಲಿ ನಮ್ಮ ಸರ್ಕಾರವೇ ಇರುವುದರಿಂದ ಖಂಡಿತವಾಗಿ ಅಭಿವೃದ್ಧಿ ಮಾಡುತ್ತೆವೆ ಎಂದು ಭಾಗ್ಯನಗರ ಪಟ್ಟಣ ಪಂಚಾಯತಿ ನೂತನ ಅದ್ಯಕ್ಷ ತುಕರಾಮಪ್ಪ ಗಡಾದ ಹೇಳಿದರು
ತಾಲೂಕಿನ ಭಾಗ್ಯನಗರದ ಪದ್ಮಶಾಲಿ ಸಂಘದ ಬಾಂಧವರಿಂದ ಬುಧವಾರ ಭಾಗ್ಯನಗರದಲ್ಲಿ ಹಮ್ಮಿಕೊಂಡಿದ್ದ ಭಾಗ್ಯನಗರ ಪಟ್ಟಣ ಪಂಚಾಯತಿ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜ ಸೇವೆಯೇ ನನ್ನ ಗುರಿ. ಈ ಅಧಿಕಾರಾವಧಿಯಲ್ಲಿ ಸಮಾಜಿಮುಖಿ ಕಾರ್ಯಗಳೊಂದಿಗೆ ಪಟ್ಟಣ ಪಂಚಾಯತಿ ವ್ಯಾಪ್ತಿಯ ಜನರ ಸಂಕಷ್ಟಗಳಿಗೆ ಸ್ಪಂದಿಸುವುದಾಗಿ ಅವರು ಭರವಸೆ ನೀಡಿದರು.
ನೂತನ ಉಪಾದ್ಯಕ್ಷ ಹೊನ್ನೂರಸಾಬ ಬೈರಾಪೂರ ಮಾತನಾಡಿ, ಭಾಗ್ಯನಗರ ಗ್ರಾಮದ ಮೂಲ ಸೌಕರ್ಯಗಳನ್ನು ಒದಗಿಸುವುದು, ಸಮಗ್ರ ಅಭಿವೃದ್ಧಿ, ಹಿಂದುಳಿದ ಸಮಾಜಗಳ ಪ್ರಗತಿಗೆ ಶ್ರಮಿಸುವುದೇ ನಮ್ಮ ಅದ್ಯತೆ ಎಂದು ತಿಳಿಸಿದರು.
ಅಶೋಕ ಗೊರಂಟ್ಲಿ ಪ್ರಾಸ್ತಾವಿಕ ಮಾತಾಡಿದರು. ಈರಣ್ಣ ಪಗಡಾಲ ನಿರೂಪಿಸಿದರು. ಈ ಸಂದರ್ಭದಲ್ಲಿ ಮಹಾದೇವಪ್ಪ ಏರಿ, ಸುರೇಶ ದರಗದಕಟ್ಟಿ, ಲಕ್ಷ್ಮಣ ಚಳಮರದ, ರಾಘು ಹ್ಯಾಟಿ, ಮಂಜು ಅಜ್ಜರ, ಹಜರತ್, ಚಿದಾನಂದ, ಯುವಕ ಮಂಡಳಿಯ ಸದಸ್ಯರು ಇತರರು ಇದ್ದರು.
Comments are closed.