ಕೊಪ್ಪಳದಲ್ಲಿ ಮಹಿಳಾ ಸಮಾನತೆ ದಿನಾಚರಣೆ ಆಚರಣೆ
ಕೊಪ್ಪಳ, ೨೯: ನಗರದ ಲಯನ್ಸ್ ಕ್ಲಬ್ ಇವರ ಸಹಯೋಗದಲ್ಲಿ ನವ ಪ್ರಗತಿ ಮಹಿಳಾ ಮಂಡಳ, ಕೊಪ್ಪಳ ವತಿಯಿಂದ ಮಹಿಳಾ ಸಮಾನತೆ ದಿನಾಚರಣೆಯನ್ನು ಆಚರಿಸಲಾಯಿತು.
ಲಯನ್ಸ್ ಕ್ಲಬ್ ಕೊಪ್ಪಳದ ಅಧ್ಯಕ್ಷರಾದ ಲಯನ್ ಪರಮೇಶ್ವರಪ್ಪ ಕೊಪ್ಪಳ ಹಾಗೂ ಮಹಿಳಾ ಮಂಡಳದ ಅಧ್ಯಕ್ಷರಾದ ಶ್ರೀಮತಿ ಸುಜಾತಾ ಗುರುರಾಜ ಹಲಗೇರಿ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಆರಂಭದಲ್ಲಿ ಶ್ರೀಮತಿ ಸುಮಂಗಲಾ ಸೋಮಲಾಪೂರ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಖ್ಯ ಅತಿಥಿಗಳಾದ ಶ್ರೀಮತಿ ಸವಿತಾ ರಮೇಶ, ವಕೀಲರಾದ ಇವರು ಮಹಿಳಾ ಸಮಾನತೆ ಕುರಿತು ಸವಿವರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕೊಪ್ಪಳ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಇಲಾಖಾಧಿಕಾರಿಗಳಾದ ಶ್ರೀಮತಿ ಪೂರ್ಣಿಮಾ ಏಳುಭಾವಿ ಇವರು ಪಾಲ್ಗೋಂಡು ಸಾಧಕರಿಗೆ ಸನ್ಮಾನಿಸಿದರು.
ಸಾಧಕಾರಾದ ಮಸಬಹಂಚಿನಾಳ ಗ್ರಾಮದ ಶ್ರೀಮತಿ ವೀಣಾ, ಕೃಷಿಯಲ್ಲಿ ಢ್ರೋಣ್ ಬಳಕೆ ಹಾಗೂ ಕೋಳೂರು ಗ್ರಾಮದ ಶ್ರೀಮತಿ ಶಶಿಕಲಾ ನವದೆಹಲಿಯಲ್ಲಿ ನಡೆದ ೨೦೨೪ರ ಅಗಸ್ಟ್ ೧೫ ರಂದು ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡ ಇರ್ವರು ಸನ್ಮಾನ ಸ್ವೀಕರಿಸಿದರು.
ಸಮಾರಂಭದಲ್ಲಿ ಲಯನ್ಸ್ ಕ್ಲಬ್, ಕೊಪ್ಪಳ ವತಿಯಿಂದ ಲಯನ್ ಶ್ರೀನಿವಾಸ ಗುಪ್ತಾ, ಲಯನ್ ಗುರುರಾಜ ಹಲಗೇರಿ, ಲಯನ್ ಮನೋಹರ ದಾದ್ಮಿ ಮತ್ತು ಲಯನ್ ಪಂಪಣ್ಣ ವಾರದ ಹಾಗೂ ನವ ಪ್ರಗತಿ ಮಹಿಳಾ ಮಂಡಳ, ಕೊಪ್ಪಳದ ಎಲ್ಲಾ ಪದಾಧಿಕಾರಿಗಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.
Comments are closed.