ಕ್ರಿಕೆಟ್ ಆಯ್ಕೆ ಪ್ರಕ್ರಿಯೆ ೧೨, ೧೩ ರಂದು
ಗಂಗಾವತಿ: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ಕ್ರಿಕೆಟ್ ಆಸಕ್ತಿಇರುವ ೧೯ ವಯೋಮಾನದ ಬಾಲಕರ ಜುಲೈ ೧೨ ಮತ್ತು ೧೩ ರಂದು ಕಲಬುರ್ಗಿ ನಗರದ ಕೆಬಿಎನ್ ಮೈದಾನದಲ್ಲಿ ನಡೆಯಲಿದೆ ಎಂದು ರಾಯಚೂರು ಜಿಲ್ಲೆಯ ನಿರ್ದೇಶಕ ಮಂಜುನಾಥ ಹಾನಗಲ್ ಕೊಪ್ಪಳ ಜಿಲ್ಲೆಯ ನಿರ್ದೇಶಕ ಚಂದ್ರಶೇಖರ ಮೈಲಾರ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಜುಲೈ ೧೨ ಬೆಳಗ್ಗೆ ೯ ಕ್ಕೆ ವಿಜಯಪುರ, ೧೧ ಗಂಟೆ ಬಾಗಲಕೋಟೆ, ೨ ಗಂಟೆಗೆ ಬೀದರ್, ೪ ಗಂಟೆಗೆ ಕಲಬುರ್ಗಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಜುಲೈ ೧೩ ರಂದು ಬೆಳಗ್ಗೆ ರಾಯಚೂರು, ೧೧ ಗಂಟೆಗೆ ಕೊಪ್ಪಳ, ಮಧ್ಯಾಹ್ನ ೨ ಗಂಟೆಗೆ ಯಾದಗಿರಿ ಜಿಲ್ಲೆಯ ೧೯ ವರ್ಷ ವಯಸ್ಸಿನ ಬಾಲಕರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆದ್ದರಿಂದ ಕ್ರಿಕೆಟ್ ಆಸಕ್ತ ಬಾಲಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಕೋರಿದ್ದಾರೆ.
Comments are closed.