ಬಿ.ರಾಚಯ್ಯ ದತ್ತಿನಿಧಿ ರಾಜ್ಯ ಪ್ರಶಸ್ತಿಗೆ ದಿನೇಶ್ ಅಮೀನ್ ಮಟ್ಟು ಆಯ್ಕೆ

ಕರ್ನಾಟಕ ರಾಜ್ಯ ಎಸ್ಸಿ/ ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ವಾರ್ಷಿಕ ಪ್ರಶಸ್ತಿ

Get real time updates directly on you device, subscribe now.

ಕರ್ನಾಟಕ ರಾಜ್ಯ ಎಸ್ಸಿ/ ಎಸ್ಟಿ ಪತ್ರಿಕಾ( ಸರ್ಕಾರದ ಮಾನ್ಯತೆ ಪಡೆದ) ಸಂಪಾದಕರ ಸಂಘದ 2022-23 ನೇ ಸಾಲಿನ ರಾಜ್ಯಮಟ್ಟದ *’ ಬಿ.ರಾಚಯ್ಯ ದತ್ತಿನಿಧಿ ವಾರ್ಷಿಕ ಪ್ರಶಸ್ತಿ’* ಗೆ ಹಿರಿಯ ಪತ್ರಕರ್ತರಾದ *ದಿನೇಶ್ ಅಮೀನ್ ಮಟ್ಟು* ಅವರನ್ನು ಆಯ್ಕೆ ಮಾಡಲಾಗಿದೆ.

ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ದಲಿತ,ದಮನಿತರ ಪರವಾಗಿ ವೃತ್ತಿಪರತೆಯಿಂದ ದುಡಿದಂತಹ ಸಾರ್ವತ್ರಿಕವಾಗಿ ಹಿರಿಯ ಪತ್ರಕರ್ತರೊಬ್ಬರನ್ನು ಗುರುತಿಸಿ ಪ್ರತಿವರ್ಷ ಹಿರಿಯ ಮುತ್ಸದ್ದಿ ರಾಜಕಾರಣಿ *ಬಿ.ರಾಚಯ್ಯ* ಅವರ ಹೆಸರಿನಲ್ಲಿ ಸಂಘದಲ್ಲಿ ಸ್ಥಾಪಿಸಿರುವ ರಾಜ್ಯಮಟ್ಟದ ದತ್ತಿನಿಧಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ.

2022-23 ನೇ ಸಾಲಿನ *ಬಿ.ರಾಚಯ್ಯ ದತ್ತಿನಿಧಿ ರಾಜ್ಯ ಪ್ರಶಸ್ತಿ* ಗೆ ಸುದ್ದಿ ಮಾಧ್ಯಮ‌ಕ್ಷೇತ್ರದಲ್ಲಿ ದಲಿತರು- ದಮನಿತರ ಪರವಾಗಿ ಅಹರ್ನಿಶಿ ದುಡಿಯುತ್ತಿರುವ ಹಿರಿಯ ಪತ್ರಕರ್ತರಾದ *ದಿನೇಶ್ ಅಮೀನ್ ಮಟ್ಟು* ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು 10.000 ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಹೊಂದಿದೆ.

ಅದೇ ರೀತಿ
ಸುದ್ದಿ ಮಾಧ್ಯಮ‌ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಎಸ್ಸಿ/ಎಸ್ಟಿ ಸಮುದಾಯದ ಮೂವ್ವರು ಹಿರಿಯ ಸಂಪಾದಕರಿಗೆ ನೀಡಲಾಗುವ *”ವಾರ್ಷಿಕ ಪ್ರಶಸ್ತಿ”* ಗಳಿಗೆ ಕೋಲಾರದ *ಸಿ .ಮುನಿಯಪ್ಪ,* ಚಿತ್ರದುರ್ಗದ *ಮೈಲಾರಪ್ಪ* ಮತ್ತು ಬೀದರ್ ನ *ಮಾಳಪ್ಪ ಅಡಸಾರೆ* ಅವರಗಳು ಭಾಜನರಾಗಿದ್ದಾರೆ.

ಪ್ರಶಸ್ತಿಯು ತಲಾ 5000 ರೂ. ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿರುತ್ತದೆ.

ಇದೇ ಜುಲೈ ಕೊನೆ ವಾರದಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ ಯ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷರಾದ ಚೆಲುವರಾಜು ಮತ್ತು ಪ್ರಧಾನ ಕಾರ್ಯದರ್ಶಿ ಸೋಮಶೇಖರ ಕೆರಗೋಡು ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!