ಕೊಪ್ಪಳ  ಆಹಾರ ಉದ್ದಿಮೆದಾರ, ಮಾರಟಗಾರರ ಪರವಾನಿಗಾಗಿ ಆ.30 & 31ರಂದು ಅಭಿಯಾನ

Get real time updates directly on you device, subscribe now.

ಆ  ಆಹಾರ ಉತ್ಪಾದಕರು, ತಯಾರಕರು, ವಿತರಕರು ಪರವಾನಿಗೆ (ಲೈಸೆನ್ಸ್) ಅಥವಾ ನೋಂದಣಿ (ರಿಜಿಸ್ಟ್ರೇಷನ್) ಪಡೆದುಕೊಳ್ಳುವ ಅಭಿಯಾನವನ್ನು ಆಗಸ್ಟ್ 30 ಮತ್ತು ಆ.31ರಂದು ಕೈಗೊಳ್ಳಲಾಗಿದೆ ಎಂದು ಕೊಪ್ಪಳ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಯ ಅಂಕಿತ ಅಧಿಕಾರಿಗಳು ತಿಳಿಸಿದ್ದಾರೆ.
ಆಹಾರ ಉತ್ಪಾದಕರು, ವಿತರಕರು ಹಾಗೂ ಮಾರಾಟಗಾರರಿಗೆ ನಿರಂತರವಾಗಿ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ (ಎಫ್.ಎಸ್.ಎಸ್.ಎ) ವತಿಯಿಂದ ಪರವಾನಿಗೆ(ಲೈಸೆನ್ಸ್) ಅಥವಾ ನೋಂದಣಿ (ರಿಜಿಸ್ಟ್ರೇಷನ್) ವಿತರಿಸಲಾಗುತ್ತಿದ್ದು, ಆಯುಕ್ತರು, ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ (ಎಫ್.ಎಸ್.ಎಸ್.ಎ), ಬೆಂಗಳೂರು ಇವರ ಆದೇಶದ ಅನ್ವಯ ಹಾಗೂ ಜಿಲ್ಲೆಯಾದಂತ ಬೃಹತ್ ಸಂಖ್ಯೆಯ ಆಹಾರ ಉತ್ಪಾದಕರು, ವಿತರಕರು ಹಾಗೂ ಮಾರಾಟಗಾರರು ಪರವಾನಿಗೆ(ಲೈಸೆನ್ಸ್) ಅಥವಾ ನೊಂದಣಿ (ರಿಜಿಸ್ಟ್ರೇಷನ್) ಪಡೆಯಲು ಅನುವು ಮಾಡಿಕೊಡುವ ಉದ್ದೇಶದಿಂದ ಆ.30 ಮತ್ತು 31 ಆಗಸ್ಟ್ 2024 ರಂದು ಒಟ್ಟು ಎರಡು ದಿನಗಳ ಕಾಲ ಪರವಾನಿಗೆ(ಲೈಸೆನ್ಸ್) ಅಥವಾ ನೊಂದಣಿ (ರಿಜಿಸ್ಟ್ರೇಷನ್) ಪಡೆದುಕೊಳ್ಳಲು ಸೂಚಿಸಿದೆ.
ಆಹಾರ ಉತ್ಪಾದಕರು, ವಿತರಕರು ಹಾಗೂ ಮಾರಾಟಗಾರರು ಅಗತ್ಯ ದಾಖಲಾತಿಗಳನ್ನು ಆನ್‌ಲೈನ್ ಮೂಲಕ ಅಥವಾ ಕಚೇರಿಗೆ ಭೇಟಿ ನೀಡುವ ಮೂಲಕ ಪರವಾನಿಗೆ(ಲೈಸೆನ್ಸ್) ಪಡೆದುಕೊಳ್ಳಲು ಆಧಾರ್ ಕಾರ್ಡ್, ಪೋಟೊ, ವಿದ್ಯುತ್ ಬಿಲ್ಲು, ಜಿ.ಎಸ್.ಟಿ., ನಗರ ಸಭೆ ಪರವಾನಿಗೆ, ಲ್ಯಾಬ್ ರಿಪೋರ್ಟ್ ಹಾಗೂ ಸೀಲು, ಈ ದಾಖಲೆಗಳು ಅತ್ಯವಶ್ಯಕವಾಗಿವೆ. ನೋಂದಣಿ (ರಿಜಿಸ್ಟ್ರೇಷನ್)ಗಾಗಿ ಆಧಾರ್ ಕಾರ್ಡ್, ಪೋಟೊ ಮತ್ತು ಸೀಲುದೊಂದಿಗೆ ಪಡೆದುಕೊಳ್ಳಬೇಕು. ಆನ್‌ಲೈನ್ ಪಾವತಿಗೆ ನೆಟ್ ಬ್ಯಾಂಕಿಂಗ್ ಅಥವಾ ಪೋನ್ ಬೇಕಾಗುತ್ತದೆ. ಕೊಪ್ಪಳ ಜಿಲ್ಲಾ ಆಹಾರ ಉದ್ದಿಮೆದಾರ, ಮಾರಟಗಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಎಫ್.ಎಸ್.ಎಸ್.ಎ ಜಿಲ್ಲಾ ಕಚೇರಿ ವಿಳಾಸ: ಅಂಕಿತ ಅಧಿಕಾರಿಗಳ ಕಾರ್ಯಾಲಯ, ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ (ಎಫ್.ಎಸ್.ಎಸ್.ಎ), ಹಳೆ ಜಿಲ್ಲಾ ಆಸ್ಪತ್ರೆ ಆವರಣ, ನಗರ ಸಭೆ ಹತ್ತಿರ, ಕೊಪ್ಪಳ-583231, ಮೊ.ಸಂ: 8951458114, ಇಲ್ಲಿಗೆ ಅಥವಾ ಕಚೇರಿ ಎಫ್.ಎಸ್.ಓ.ಗಳಾದ ಕೊಪ್ಪಳದ ಮೊ.ಸಂ: 8951458114, ಗಂಗಾವತಿ ಮೊ.ಸಂ: 9482469457, ಕುಷ್ಟಗಿ ಮೊ.ಸಂ: 7337663555, ಯಲಬುರ್ಗಾ ಮೊ.ಸಂ: 9916306363ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!