ಕಾಮನೂರು ಆಯುಷ್ಮಾನ್ ಆರೋಗ್ಯ ಮಂದಿರಕ್ಕೆ ರಾಷ್ಟ್ರೀಯ ಮಾನ್ಯತೆ

Get real time updates directly on you device, subscribe now.

 : ಕೊಪ್ಪಳ ಜಿಲ್ಲೆಯ ಕಾಮನೂರು ಆಯುಷ್ಮಾನ್ ಆರೋಗ್ಯ ಮಂದಿರವು ರಾಷ್ಟ್ರೀಯ ಮಾನ್ಯತೆಯನ್ನು ಪಡೆದಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ ಪಿ.ಬಿ.ಹಿರೇಗೌಡರ ಅವರು ತಿಳಿಸಿದ್ದಾರೆ.
NATIONAL ACCREDATION BOARD FOR HOSPITALS &HEALTH CARE PROVIDERS(NABH) ರವರು ಕರ್ನಾಟಕ ರಾಜ್ಯದ ಆಯುಷ್ ಇಲಾಖೆಯ 50 ಆಯುಷ್ಮಾನ ಆರೋಗ್ಯ ಮಂದಿರಗಳಿಗೆ ರಾಷ್ಟ್ರೀಯ ಮಾನ್ಯತೆಯನ್ನು ನೀಡಿದ್ದು, ಈ 50 ಆಯುಷ್ಮಾನ ಆರೋಗ್ಯ ಮಂದಿರದಲ್ಲಿ ಕೊಪ್ಪಳ ಜಿಲ್ಲೆಯ ಕಾಮನೂರಿನ ಆಯುಷ್ಮಾನ ಆರೋಗ್ಯ ಮಂದಿರವು ಒಂದಾಗಿದ್ದು, ತುಂಬಾ ಸಂತೋಷ ಹಾಗೂ ಹೆಮ್ಮೆ ಅನಿಸುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ ಕುಗ್ರಾಮವಾದ ಕಾಮನೂರ ಆಯುಷ್ಮಾನ ಆರೋಗ್ಯ ಮಂದಿರದ ಮುಖಾಂತರ ಗುರುತಿಸಿಕೊಳ್ಳತಿರುವುದು ಕೊಪ್ಪಳ ಆಯುಷ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಆಯುಷ ಇಲಾಖೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!