ಬಡ ವಿದ್ಯಾರ್ಥಿಗೆ ಸಕಾ೯ರಿ ವೈದ್ಯಕೀಯ ಸೀಟು : ಧನ ಸಹಾಯದ ಭರವಸೆ ನೀಡಿದ MLA, MP Hitnal
ಬಡ ವಿದ್ಯಾರ್ಥಿಗೆ ಸಕಾ೯ರಿ ವೈದ್ಯಕೀಯ ಸೀಟು ಸಿಕ್ಕರೂ ಶುಲ್ಕ ಭರಿಸುವ ಶಕ್ತಿ ಇಲ್ಲ…
ಕೊಪ್ಪಳ ತಾಲೂಕಿನ ಬೇಳೊರು ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಯಾದ ಕು.ಪ್ರಕಾಶ ತಳವಾರ ಈತನಿಗೆ ನೀಟ್ ಪರೀಕ್ಷೆಯಲ್ಲಿ ಎಂಬಿಬಿಎಸ್ ಸೀಟ್ ದೊರೆತಿದ್ದು,ಆದರೆ ಮುಂದೆ ಓದಲು ಮನೆಯಲ್ಲಿ ಕಡು ಬಡತನವಿದ್ದು ಪಾಲಕರಿಗೆ ಮಗನನ್ನು ಓದಿಸಲು ಶಕ್ತಿ ಇಲ್ಲ, ಬಡ ವಿದ್ಯಾರ್ಥಿ ಪ್ರಕಾಶ ನೀಟ್ ಪರೀಕ್ಷೆಯಲ್ಲಿ ,720 ಅಂಕಗಳಿಗೆ 594 ಅಂಕಗಳನ್ನು ಪಡೆದು ಎಂಬಿಬಿಎಸ್ ಪ್ರವೇಶಕ್ಕೆ ಅಹ೯ತೆ ಪಡೆದು ಹುಬ್ಬಳ್ಳಿಯ ಕೀಮ್ಸ್ ಕಾಲೇಜಿಗೆ ಪ್ರವೇಶ ಪಡೆಯಲು ಪ್ರವೇಶ ಪತ್ರ ಬಂದಿದ್ದು ಪ್ರವೇಶ ಪಡೆಯಲು ಹಣಕಾಸಿನ ಸಮಸ್ಯೆ ಇದ್ದು, ಮನೆಯಲ್ಲಿ ಕಡು ಬಡತನ ಇರುವುದರಿಂದ ಪಾಲಕರಿಗೆ ಮಗನಿಗೆ ಪ್ರವೇಶ ಕೊಡಿಸುವ ಶಕ್ತಿ ಇಲ್ಲ.
ಕಾರಣ ಸವ೯ ಜನಾಂಗದವರು, ಶಿಕ್ಷಣ ಪ್ರೇಮಿಗಳು,ಸಕಾ೯ರಿ ಅಧಿಕಾರಿಗಳು,ವ್ಯಾಪಾರಸ್ಥರು, ರಾಜಕೀಯ ನಾಯಕರು, ಉದ್ಯಮಿಗಳು ಉದ್ಯೋಗಸ್ಥ ಯುವಕರು ತಾಯಂದಿರು ಅಕ್ಕ ತಂಗಿಯರು ಅಣ್ಣಾ ತಮ್ಮಂದಿರು ಎಲ್ಲರೂ ತಮ್ಮ ಕೈಲಾದ ಸಹಾಯ ಸಹಕಾರ ನೀಡಿ ಜೀವನದಲ್ಲಿ ವೈಧ್ಯನಾಗಬೇಕೆಂಬ ಕನಸನ್ನು ಕಂಡಿರುವ ಬಡ ವಿದ್ಯಾರ್ಥಿಯ ಕನಸನ್ನು ಈಡೇರಿಸುವದಕ್ಕೆ ಬಡ ವಿಧ್ಯಾರ್ಥಿಯ ವಿಧ್ಯಾಭ್ಯಾಸಕ್ಕೆ ಸಹಾಯ ಸಹಕಾರ ನೀಡಬೇಕೆಂದು ಸವ೯ರಲ್ಲಿ ಗೌರವಪೂರ್ವಕವಾಗಿ ವಿನಂತಿಮಾಡಿಕೊಳ್ಳುತ್ತೆನೆ..
ಸಂಪರ್ಕ..ಪ್ರಕಾಶ ತಳವಾರ ಈತನಿಗೆ ಸಹಾಯ ಮಾಡುವವರು..
ಸಿಂಡಿಕೇಟ್ ಬ್ಯಾಂಕಿನ ಖಾತೆ ಸಂಖ್ಯೆ.18122210055807..
ಐಎಫ್ಎಸ್ ಸಿ.. ಕೋಡ್ .SYN80001812.
ಈ ಖಾತೆಗೆ ನೆರವು ನೀಡಬಹುದು.. ಅಲ್ಲದೇ . ಪೋನ್ ಪೇ ನಂಬರ್..8431393640.ಧಾನಿಗಳು ಸಹಾಯ ಮಾಡಬಹುದು…
ಕೊಪ್ಪಳ ವಿಧಾನಸಭಾ ಕ್ಷೇತ್ರದ ಬೇಳೂರು ಗ್ರಾಮದ ಪ್ರತಿಭೆ ಪ್ರಕಾಶ.ಕನಕಪ್ಪ.ತಳವಾರರವರಿಗೆ ಧನ ಸಹಾಯದ ಭರವಸೆ ನೀಡಿದ ಶಾಸಕರು ರಾಘವೇಂದ್ರ ಹಿಟ್ನಾಳ ಹಾಗೂ ಸಂಸದರು ರಾಜಶೇಖರ.ಹಿಟ್ನಾಳ
Comments are closed.