ಅಪರಿಚಿತ ವ್ಯಕ್ತಿ ಶವದ ಅಸ್ಥಿಪಂಜರ, ಮಹಿಳೆ ಶವ ಪತ್ತೆ: ಪ್ರಕರಣ ದಾಖಲು
ಅಪರಿಚಿತ ವ್ಯಕ್ತಿ ಮೃತಪಟ್ಟ ವ್ಯಕ್ತಿ ಶವದ ಅಸ್ಥಿಪಂಜರ ಪತ್ತೆ ಹಿನ್ನೆಲೆಯಲ್ಲಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್.ನಂ:5/2023 ಕಲಂ: 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ವೆಂಕಟಗಿರಿ ಹೋಬಿಳಿಯ ರಾಮನ ಮೂಲೆಯ ಗುಡ್ಡದಲ್ಲಿ ಒಂದು ಗಂಡಸಿನ ಶವದ ಅಸ್ಥಿಪಂಜರ ಬಿದ್ದಿರುತ್ತದೆ, ಸುಮಾರು 15 ರಿಂದ 20 ದಿನಗಳ ಹಿಂದೆ ಶವ ಬಿದ್ದು ಮೈಮೇಲಿನ ಚರ್ಮ, ಮಾಂಸಖಂಡ ಕಿತ್ತಿ ಹೋಗಿ ಕೇವಲ ಎಲುಬು ಮತ್ತು ಮೂಳೆಗಳು ಅಸ್ಥಿ ಪಂಜರದಂತೆ ಕಂಡುಬರುತ್ತದೆ. ಮುಖದಲ್ಲಿ ಬಿಳಿಯ ಗಡ್ಡ ಕಂಡುಬರುತ್ತಿದ್ದು, ಈ ಶವವು ಅಂದಾಜು 50 ರಿಂದ 55 ವರ್ಷದ ವ್ಯಕ್ತಿಯಂತೆ ಕಂಡುಬರುತ್ತಿದ್ದು, ಶವ ಮೇಲೆ ಆಫ್ ಶರ್ಟ ಇದ್ದು, ಹಳೆಯ ಮಾಸಿದಂತಾಗಿದ್ದು, ಈ ಶರ್ಟಿನ ಮೇಲೆ ಆರ್.ಬಿ.ಟೈಲರ್ ಬಸಾಪಟ್ಟಣ ಎಂದು ಇರುತ್ತದೆ. ಈ ವ್ಯಕ್ತಿಯ ಚರ್ಮವನ್ನು ಕಾಡು ಪ್ರಾಣಿಗಳು ಕಿತ್ತಿ ತಿಂದಂತೆ ಕಂಡುಬರುತ್ತದೆ.
ಈ ಮೃತ ವ್ಯಕ್ತಿಯ ಬಗ್ಗೆ ಗುರುತು ಹಾಗೂ ವಾರಸುದಾರರ ವಿಳಾಸ ಪತ್ತೆಯಾದಲ್ಲಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ದೂ.ಸಂ: 08533-230854, ಪಿ.ಐ ಮೊ.ಸಂ: 9480803730, ಇಲ್ಲಿಗೆ ಮಾಹಿತಿ ನೀಡುವಂತೆ ಗಂಗಾವತಿ ಗ್ರಾಮೀಣ ಪೊಲೀಸ ಠಾಣೆಯ ಆರಕ್ಷಕ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅನಾಮಧೇಯ ಮಹಿಳೆ ಶವ ಪತ್ತೆ
ಜಿಲ್ಲೆಯ ಗಂಗಾವತಿಯ ತಾಲ್ಲೂಕಿನ ವಿರುಪಾಪುರ ಗಡ್ಡಿಯ ನದಿಯ ಅಡಕಲ್ಲು ಗುಂಡಿನ ಹತ್ತಿರ ಅನಾಮಧೇಯ ಮಹಿಳೆಯ ಶವ ಪತ್ತೆಯಾಗಿದ್ದು, ಗಂಗಾವತಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ:21/2024 ಕಲಂ 194(3)(6) ಬಿ.ಎನ್.ಎಸ್.ಎಸ್ 2023 ಅಡಿ ಪ್ರಕರಣ ದಾಖಲಾಗಿದೆ.
2024ರ ಜುಲೈ 03ರಂದು ವಿರುಪಾಪುರ ಗಡ್ಡಿಯ ನದಿಯ ಅಡಕಲ್ಲು ಗುಂಡಿನ ಹತ್ತಿರ ಅನಾಮಧೇಯ ಮಹಿಳೆಯ ಶವ ಕಂಡು ಬಂದ ಹಿನ್ನೆಲೆಯಲ್ಲಿ ವಿರುಪಾಪೂರು ಗ್ರಾಮದ ಪರಶುರಾಮ ಎಂಬುವರು ಗಂಗಾವತಿಯ ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿರುತ್ತಾರೆ. ಈ ಮಹಿಳೆಯು ಸುಮಾರು 15 ರಿಂದ 20 ದಿನಗಳ ಹಿಂದೆ ಬಿದ್ದಿರುವಂತೆ ಮಹಿಳೆಯ ದೇಹದ ಕೆಳಗಿನ ಭಾಗ ಕೈ.ಕಾಲುಗಳು ಹಾಗೂ ಇತರೆ ಕಡೆಗಳಲ್ಲಿ ಯಾವುದೋ ಪ್ರಾಣಿ ತಿಂದಂತೆ ಮತ್ತು ಶವವು ಸಂಪೂರ್ಣ ಕೊಳೆತಿದೆ. ಮೃತ ಮಹಿಳೆಯ ಎಡಗೈ ಮೇಲೆ ಅಮ್ಮ ಅಂತಾ ಹಚ್ಚೆ ಇದ್ದು, ಈ ಮೃತ ಮಹಿಳೆಯ ಸಂಬಂಧಿಕರು ಹಾಗೂ ವಾರಸುದಾರರಿದ್ದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಗಂಗಾವತಿ ಗ್ರಾಮೀಣ ಪೋಲಿಸ್ ಠಾಣೆ ಪಿಐ ದೂ.ಸಂ: 08533-230854, ಮೊ.ಸಂ: 9480803730, ಎಸ್‌ಪಿ ಕಚೇರಿ ದೂ.ಸಂ: 08539-230111 ಗೆ ಸಂಪರ್ಕಿಸಿ ಮಾಹಿತಿ ನೀಡಬೇಕು ಎಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.