ಮಹಾನ್ ಕಿಡ್ಸ್ ಶಾಲೆಯ ವಿದ್ಯಾರ್ಥಿಗಳು ಚದುರಂಗ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಶೆಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆ
.
ಗಂಗಾವತಿ: ಶಾಲಾ ಶಿಕ್ಷಣ ಇಲಾಖೆಯಿಂದ ಸೆಪ್ಟೆಂಬರ್-೧೮ ರಂದು ಅಖಂಡ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಹಾಗೂ ಚದುರಂಗ ಸ್ಪರ್ಧೆ ಜಿಲ್ಲಾ ಮಟ್ಟದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಮಹಾನ್ ಕಿಡ್ಸ್ ಶಾಲೆಯ ವಿದ್ಯಾರ್ಥಿಗಳಾದ ಸೃಜನಾ, ಲಕ್ಷ್ಮಿ ನರಸಿಂಹ ಇವರುಗಳು ಚದುರಂಗ ಸ್ಪರ್ಧೆಯಲ್ಲಿ ವಿಜೇತರಾಗಿ ಪ್ರಥಮ ಸ್ಥಾನ ಪಡೆದು ಮುಂದೆ ನಡೆಯುವ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹಾಗೂ ಶಟಲ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ವಿಜೇತರಾದ ನಿವೇದ ವಿ. ಪಾಟೀಲ್, ವೈಭವ್ ಅಳವಂಡಿ, ಪ್ರಥಮ್, ಧನುಷ್, ರಾಮ್ ಸೂರ್ಯ ಇವರುಗಳು ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಶೇಷವಾಗಿ ನಿವೇದ ವಿ. ಪಾಟೀಲ್ ಸಿಂಗಲ್ಸ್ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ಹಾಗೂ ನಿವೇದ ವಿ. ಪಾಟೀಲ್, ವೈಭವ್ ಅಳವಂಡಿ, ರಾಮ್ ಸೂರ್ಯ ಡಬಲ್ಸ್‌ನಲ್ಲಿ ರೋಚಕ ಜಯ ತಂದು ಮಹಾನ್ ಕಿಡ್ಸ್ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಮಹಾನ್ ಕಿಡ್ಸ್ ಶಾಲೆಯ ಅಧ್ಯಕ್ಷರಾದ ನೇತ್ರಾಜ್ ಗುರುವಿನ ಮಠ ಶಾಲೆಯ ಪ್ರಾಚಾರ್ಯರಾದ ಸವಿತಾ ಗುರುವಿನ ಮಠ, ಶಾಲಾ ಸಿಬ್ಬಂದಿ ಹಾಗೂ ದೈಹಿಕ ಶಿಕ್ಷಕರಾದ ಮಂಜುನಾಥ ರಾಠೋಡ್ ಮತ್ತು ವಿದ್ಯಾರ್ಥಿಗಳ ಪಾಲಕರಾದ ವೇಣುಗೋಪಾಲ್, ಡಾ|| ವಿವೇಕ್ ವಿ. ಪಾಟೀಲ್ ಶುಭ ಹಾರೈಸಿದರು.
Comments are closed.