ಕಲಬುರಗಿ ಸಚಿವ ಸಂಪುಟ ಸಭೆ: ಕೊಪ್ಪಳ ಜಿಲ್ಲೆಗೆ ನಿರಂತರ ಅನ್ಯಾಯ ಖಂಡನೆ

ಕೊಪ್ಪಳ : ಕಲಬುರಗಿಯಲ್ಲಿ ಸೆ.17ಕ್ಕೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೊಪ್ಪಳ ಜಿಲ್ಲೆಗೆ ಯಾವುದೇ ಬೃಹತ್ ಯೋಜನೆಗಳು ಮಂಜೂರು ಮಾಡದೆ ಅನ್ಯಾಯ ಮಾಡಿದ್ದಾರೆ ಎಂದು ಜನಪರ ಸಂಘಟನೆಗಳ ಒಕ್ಕೂಟ ಮತ್ತು ಕೊಳಚೆ ನಿರ್ಮೂಲನಾ ವೇದಿಕೆ ನೇತೃತ್ವದಲ್ಲಿ ಹಲವು ಸಂಘಟನೆಗಳು ಖಂಡಿಸಿವೆ.
ಕಲ್ಯಾಣ ಕರ್ನಾಟಕ ವೆಂದರೆ ಕಲಬುರಗಿ ಜಿಲ್ಲೆ ಮಾತ್ರ ಎಂಬಂತಾಗಿ ಆರು ಜಿಲ್ಲೆಗಳನ್ನು ಕಡೆಗಣಿಸಿ ಕಲಬುರಗಿ ಜಿಲ್ಲೆಗೆ ಅನೇಕ ಬೃಹತ್ ಯೋಜನೆಗಳು ಈ ಹಿಂದಿನ ಸರ್ಕಾರಗಳು ಜಾರಿಗೊಳಿಸುತ್ತಾ ಬಂದಿವೆ. ಅದನ್ನೇ ಈ ಸರ್ಕಾರವು ಮುಂದುವರಿಸಿದೆ.ಕರ್ನಾಟಕದಲ್ಲಿ ಹಿಂದುಳಿದ ಕಲ್ಯಾಣ ಕರ್ನಾಟಕದಲ್ಲೇ ಅತ್ಯಂತ ನಿರ್ಲಕ್ಷಿಸಲ್ಪಟ್ಟ ಕೊನೆಯ ಭಾಗದ ಜಿಲ್ಲೆಯಾದ ಕೊಪ್ಪಳಕ್ಕೆ ಅತ್ಯಾಧುನಿಕ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ಸರ್ಕಾರಿ ಕಾನೂನು ಕಾಲೇಜು ಸೇರಿದಂತೆ ಅಭಿವೃದ್ದಿಗೆ ಪೂರಕವಾದ ಹಲವು ದೊಡ್ಡ ಯೋಜನೆಗಳನ್ನು ಮಂಜೂರು ಮಾಡಿ. ಕಲಬುರಗಿಯಲ್ಲಿರುವ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕೊಪ್ಪಳ ಜಿಲ್ಲೆಗೆ ಸ್ಥಳಾಂತರಿಸುವ ಮೂಲಕ ಜಿಲ್ಲೆಯಲ್ಲಿ ಆರೋಗ್ಯ ಮತ್ತು ಕಾನೂನಾತ್ಮಕ ಶಿಕ್ಷಣದೊಂದಿಗೆ ಇತರೆ ಹಲವು ರಂಗಗಳಲ್ಲೂ ಇಲ್ಲಿನ ಜನರ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಮಂಜೂರು ಮಾಡಬೇಕು.
ಸಿದ್ದರಾಮಯ್ಯ ಅವರು ತಮ್ಮ ಅವಧಿಯಲ್ಲಿ ಪ್ರತಿಯೊಬ್ಬ ನಾಗರಿಕರು ನೆನಪಿಡುವಂತಹ ಪುರಾತನ ಕಾಲದಿಂದ ನಡೆದು ಬಂದಂತಹ ಗಿಡಮೂಲಿಕೆಯ ಮುಂದುವರೆದ ಅತ್ಯಾಧುನಿಕ ಆಯುರ್ವೇದ ಚಿಕಿತ್ಸಾ ಪದ್ದತಿಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ಸರ್ಕಾರಿ ಕಾನೂನು ಕಾಲೇಜು ಸೇರಿದಂತೆ ಹಲವು ಮಹತ್ತರ ಯೋಜನೆಗಳನ್ನು ಮಂಜೂರು ಮಾಡುತ್ತಿರೆಂಬ ಬಹುನಿರೀಕ್ಷೆಯಿಂದ ಈ ಭಾಗದ ಜನರು ಕಾತರದಿಂದ ಕಾಯುತ್ತಿದ್ದರು. ಆದರೆ ಮಂಗಳವಾರ ಕಲಬುರ್ಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ದೊಡ್ಡ ಯೋಜನೆಗಳನ್ನು ಮಂಜೂರು ಮಾಡದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತ್ಯಂತ ಹಿಂದುಳಿದ ಕೊಪ್ಪಳ ಜಿಲ್ಲೆಗೆ ಸಂಪೂರ್ಣವಾಗಿ ನಿರ್ಲಕ್ಷಿಸಿ ಇಲ್ಲಿಯ ಜನರಿಗೆ ಅನ್ಯಾಯ ಮಾಡಿದ್ದಾರೆ ಎಂದು ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್.ಕೊಳಚೆ ನಿರ್ಮೂಲನಾ ವೇದಿಕೆಯ ಜಿಲ್ಲಾ ಸಂಚಾಲಕ ತುಕಾರಾಮ್ ಬಿ.ಪಾತ್ರೋಟಿ. ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್. ಮುಖಂಡರಾದ ಮೌಲಾ ಹುಸೇನ್ ಹಣಗಿ. ನೂರ್ ಸಾಬ್ ಹೊಸಮನಿ. ಜಾಫರ್ ಕುರಿ. ಗೌಸ್ ನೀಲಿ ಮುಂತಾದವರು ಖಂಡಿಸಿದ್ದಾರೆ.
Comments are closed.