ಪಟ್ಟಣ ಪಂಚಾಯತ್ ನೂತನ ಉಪಾಧ್ಯಕ್ಷ ಹೊನ್ನೂರಸಾಬ್ ಬೈರಾಪುರರಿಗೇ ಸನ್ಮಾನ
ಭಾಗ್ಯನಗರ : ಭಾಗ್ಯನಗರ ಪಟ್ಟಣ ಪಂಚಾಯತ್ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಹೊನ್ನೂರ ಸಾಬ್ ಬೈರಾಪುರ ಅವರಿಗೆ ಭಾಗ್ಯನಗರ ಜಾಮಿಯಾ ಮಜೀದ್ ಕಮಿಟಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಹಿಂದೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಹೊನ್ನೂರ್ಸಾಬ್ ಬೈರಾಪುರ ಸಮಾಜ ಸೇವೆಯಲ್ಲಿ ನಿರಂತರ ತೊಡಗಿಸಿಕೊಂಡು ಪಟ್ಟಣ ಪಂಚಾಯತಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಇವರಿಂದ ಪಟ್ಟಣಕ್ಕೆ ಉತ್ತಮ ಸೇವೆ ಒದಗುವಂತಾಗಲಿ ಜನರ ಆಶಯಗಳು ಈಡೇರುವಂತಾಗಲಿ ಪಟ್ಟಣ ಮತ್ತಷ್ಟು ಅಭಿವೃದ್ಧಿಯಾಗ ಲಿ ಎಂದು ಕಮಿಟಿಯ ಅಧ್ಯಕ್ಷರಾದ ಇಬ್ರಾಹಿಂ ಸಾಬ್ ಬಿಸರಳ್ಳಿ ಹಾರೈಸಿದರು .
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮೌಲಹುಸೈನ್ ಹಣಗಿ ಕಾರ್ಯದರ್ಶಿ ಎಫ್ ಎ ನೂರ್ ಭಾಷಾ, ಸಹಕಾರ್ಯದರ್ಶಿ ಶರೀಫ್ ಸಾಬ್, ಹಾಜಿ ಕುತ್ಬುದ್ದಿನ್ ಸಾಬ್, ಮರ್ದಾನ್ ಸಾಬ್ ಹಿರೇ ಮಸೂತಿ ಮೆಹಬೂಬ್ ಬಳಿಗಾರ್, ರಶೀದ್ ಸಾಬ್ ಆದೋನಿ, ಕಬೀರ್ ಸಾಬ್ ಬೈರಾಪುರ, ಜಾಫರ್ ಸಾಬ್ ಹಿರೇ ಮಸೂತಿ, ಖಾಜಾ ಸಾಬ್ ಒಂಟಿ ಕುದುರೆ, ಬಾಬಾ ಪಟೇಲ್ ಮರ್ಧಾನ್ ಸಾಬ್ ಪೀರಸಾಬ್ ಬೈರಾಪುರ ಅಮೀನ್ ಸಾಬ್ ಸೂಡಿ, ರಾಜಭಕ್ಷಿ ನೂರಭಾಷಾ, ಶಾಕಿರ್ ಸೇರಿದಂತೆ ಇನ್ನಿತರ ಸಮಾಜ ಬಾಂಧವರು ಉಪಸ್ಥಿತರಿದ್ದರು.
Comments are closed.