ನಮ್ಮ ದೇಶದಲ್ಲಿಮಹಿಳೆಯರು ಅಮೇರಿಕಾಕ್ಕಿಂತ ಹೆಚ್ಚಾಗಿ ಪ್ರಧಾನಿ ಮತ್ತು ರಾಷ್ಟ್ರಪತಿಗಳು ಆಗಿದ್ದಾರೆ : ಕುಲಪತಿ ಪ್ರೊ. ಬಿ. ಕೆ ರವಿ
ಮಹಿಳೆಯರು ನಮ್ಮ ದೇಶದಲ್ಲಿ ಅಮೇರಿಕಾಕ್ಕಿಂತ ಹೆಚ್ಚಾಗಿ ಪ್ರಧಾನಿ ಮತ್ತು ರಾಷ್ಟ್ರ ಪತಿಗಳು ಆಗಿದ್ದಾರೆ ಎಂದು ಕೊಪ್ಪಳ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ ಕೆ ರವಿ ಅವರು ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಮಾಹಿಳಾ ಕಾಲೇಜಿನಲ್ಲಿ ಮಂಗಳವಾರದಂದು ಹಮ್ಮಿಕೊಂಡಿದ್ದ 2023-24 ನೇ ಸಾಲಿನ ಸಾಂಸ್ಕೃತಿಕ, ಭಾರತ ಸ್ಕೌಟ್ ಅಂಡ್ ಗೈಡ್ಸ್, ಎನ್. ಎಸ್. ಎಸ್, ಕ್ರೀಡೆ, ರೆಡ್ ಕ್ರಾಸ್, ಪ್ಲೇಸ್ ಮೆಂಟ್ ಸೆಲ್, ಐಕ್ಯೂಎಸಿ ಮತ್ತು ಇತರೆ ಸಹಪಠ್ಯ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಬಿ ಎ, ಬಿ ಕಾಂ ಮತ್ತು ಬಿ ಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಅವರು ಮುಂದುವರೆದು ಮಾತನಾಡುತ್ತ ಪದವಿ ಮುಗಿದ ನಂತರ ಈಗ ನಿಮ್ಮ ಜೀವನ ಆರಂಭ ಆಗುತ್ತಿದೆ.
ಭಾರತ ಶ್ರೇಣಿಕೃತ ವರ್ಗದಲ್ಲಿ ಮಹಿಳೆಯರು ಬಹಳ ಕಷ್ಟಗಳನ್ನು ಪಟ್ಟಿದ್ದಾರೆ. ಇಂತಹ ಕಷ್ಟಗಳ ನಡುವೆ ಮಹಿಳೆಯರು ಬಹಳ ಸಾಧನೆಗಳ್ನನ್ನು ಮಾಡಿದ್ದಾರೆ.
ನಮ್ಮ ದೇಶದಲ್ಲಿ
ಜನಪದ ಸಾಹಿತ್ಯಕ್ಕೆ ಮಹಿಳೆಯರು ಹೆಚ್ಚು ಕೊಡುಗೆ ಕೊಟ್ಟಿದ್ದಾರೆ. ಇಂದು ಕೂಡ ರಾಜಕೀಯದಲ್ಲಿ ಮಹಿಳೆಯರಿಗೆ ಸೂಕ್ತವಾದ ಪ್ರಾತಿನಿಧ್ಯ ಸಿಕ್ಕಿಲ್ಲ.
ಇಂದು ಮಹಿಳೆಯರು ಸಬಲೀಕರಣ ಆಗುತ್ತಿದ್ದಾರೆ.. ಮಹಿಳೆಯರ ಮೇಲೆ ಹೆಚ್ಚು ದೌರ್ಜನ್ಯ ಗಳು ನಡೆಯುತ್ತಿವೆ. ನೀವು ಕೀಳುರಿಮೆ ಇಟ್ಟುಕೊಳ್ಳಬಾರದು. ನೀವು ಯಾರಿಗಿಂತ ಕಡಿಮೆ ಇಲ್ಲ. ಪದವಿ ಮುಗಿದ ನಂತರ ಉನ್ನತ ಶಿಕ್ಷಣ ಪಡೆಯಿರಿ. ಇಂದು ಎಲ್ಲ ಕ್ಷೆತ್ರಗಳಲ್ಲಿ ಮಹಿಳೆಯರು ಬಹಳ ಸಾಧನಗಳನ್ನು ಮಾಡುತ್ತಿದ್ದಾರೆ. ನೀವು ಸ್ಪರ್ಧೆತ್ಮಕ ಪರೀಕ್ಷೆಗಳನ್ನು ಬರೆಯಿರಿ. ಯಾರೂ ಕೂಡ ನಿಮಗೆ ಅವಕಾಶಗಳನ್ನು ಕೊಡುವುದಿಲ್ಲ. ಅವುಗಳನ್ನು ನೀವೇ ಪಡೆದುಕೊಳ್ಳಬೇಕು. ಕಷ್ಟ ಪಟ್ಟು ಓದಿ. ಕಠಿಣ ಪರಿಶ್ರಮ ಪಡಿ ಆಗ ಉನ್ನತ ಮಟ್ಟದ ಸಾಧನೆ ಮಾಡುವುದಕ್ಕೆ ಸಾಧ್ಯ.
ಇಂದು ಎಲ್ಲ ಕೋರ್ಸ್ ಗಳಿಗೆ ಹೆಚ್ಚಿನ ಮೌಲ್ಯ ಇದೆ. ನೀವು ಒಳ್ಳೆಯ ಜೀವನ ರೂಪಿಸಿಕೊಳ್ಳಿ. ಈ ರಾಷ್ಟ್ರಕ್ಕೆ ಹೆಣ್ಣು ಮಕ್ಕಳು ನಾಯಕತ್ವ ಬೇಕು. ಮಹಿಳೆಯರು ಬಹಳ ಪ್ರಾಮಾಣಿಕತೆಯಿಂದ ಕರ್ತವ್ಯ ಮಾಡುತ್ತಿದ್ದಾರೆ.
ಯಾರೂ ಕೂಡ ನಿಮಗೆ ಕರೆದು ಯಾವ ಹುದ್ದೆ ಕೊಡುವುದಿಲ್ಲ.
ಅವು ನಿಮಗೆ ಕಠಿಣ ಪರಿಶ್ರಮದಿಂದ ಬರುತ್ತವೆ . ಯಾರೂ ಕೂಡ ವಿದ್ಯಾಭ್ಯಾಸ ನಿಲ್ಲಿಸಬೇಡಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿರುವ ಗದಗಿನ ಜಾನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿ ಮಠ ಅವರು ಮಾತನಾಡುತ್ತ ಜಾನಪದ ಸಾಹಿತ್ಯ ವನ್ನು ಕಟ್ಟಿ ಉಳಿಸಿ ಬೆಳಸಿಬೇಕು. ಎಲ್ಲರು ಜನಪದ ಸಾಹಿತ್ಯ ವನ್ನು ಪ್ರೀತಿಸಬೇಕು. ಇಂದು ಮೂಲ ಜಾನಪದ ಗೀತೆಗಳು ಕಣ್ಮರೆ ಆಗುತ್ತಿವೆ. ಜಾನಪದ ಕಲೆಯಲ್ಲಿ ಪ್ರೀತಿ, ವಿಶ್ವಾಸ, ಕರುಣೆ, ಕಾರುಣ್ಯ ಇದೆ.
ನಗುದಿಂದ ಅರೋಗ್ಯ ವೃದ್ಧಿ ಆಗುತ್ತಿದೆ. ಆದರೆ ಮೊಬೈಲ್ ಬಂದ ನಂತರ ನಗು ಕಡಿಮೆ ಆಗಿದೆ ಎಂದರು.
ಇವರು ಜಾನಪದ ಗೀತೆಗಳನ್ನು ಹಾಡಿದರು.
ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಾರದ ಡಾ. ಗವಿಸಿದ್ದಪ್ಪ ಅವರು ಮಾತನಾಡುತ್ತ ನೀವು ಪದವಿ ಮುಗಿದ ನಂತರ ಕೂಡ ನಿರಂತರವಾಗಿ ಸಂಪರ್ಕದಲ್ಲಿ ಇರಬೇಕು. ನಮ್ಮಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘ ಇರುತ್ತದೆ. ಅದರಲ್ಲಿ ನೀವು ಸದಸ್ಯತ್ವ ವನ್ನು ಪಡೆದುಕೊಳ್ಳಬೇಕು. ಎಲ್ಲರೂ ಸೇರಿ ನಮ್ಮ ಕಾಲೇಜ್ ನ್ನೂ ಇನ್ನೂ ಉನ್ನತ ಮಟ್ಟಕ್ಕೆ ಅಭಿವೃದ್ಧಿ ಮಾಡೋಣ, ನೀವು ಪದವಿ ಜೊತೆಗೆ ಉತ್ತಮ ಸಂಸ್ಕಾರ ಪಡೆಯಿರಿ.ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿರುವ ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರ ಅವರು ಮಾತನಾಡುತ್ತಾ ಈ ಕಾಲೇಜು ಬಹಳ ಸಮಸ್ಯೆಗಳಿಂದ ಅಭಿವೃದ್ಧಿ ಹೊಂಡುತ್ತಿರುವ ಕಾಲೇಜು,
ಮಹಿಳೆಯರಿಗೆ ಶಿಕ್ಷಣ ಬಹಳ ಮುಖ್ಯ. ನೀವು ಗಂಭೀರವಾದ ಜ್ಞಾನ ವನ್ನು ಪಡೆದುಕೊಳ್ಳಬೇಕು ಎಂದರು.
ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಾಕರಾದ ಶ್ರೀ ವಿಟೊಬ ಅವರು ಮಾತನಾಡುತ್ತ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು. ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಸಂಖ್ಯೆ ಹೆಚ್ಚಳ ಆಗುತ್ತಿದೆ. ಎಲ್ಲರೂ ಒಂದೇ ಎಂಬ ಭಾವನೆ ಇರಬೇಕು. ಜಾತಿ ಧರ್ಮ ಬೇಧ ಭಾವ ಮಾಡಬಾರದು ಎಂದರು.
ಕಾರ್ಯಕ್ರಮದಲ್ಲಿ ಬಿ. ಜಿ ಕರಿಗಾರ ಅವರು ಮಾತನಾಡುತ್ತ ಈ ಕಾಲೇಜ್ ಪ್ರಾರಂಭ ಆಗುವುದಕ್ಕೆ ಬಹಳ ಜನ ಶ್ರಮ ಪಟ್ಟಿದ್ದಾರೆ.
ನೀವೆಲ್ಲ ಉತ್ತಮ ಶಿಕ್ಷಣ ಪಡೆಯಬೇಕು, ನೀವು ಪಠ್ಯತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜ್ ನ ಪ್ರಚಾರ್ಯ ಡಾ. ಗಣಪತಿ ಲಮಾಣಿ ಅವರು ಮಾತನಾಡುತ್ತ ನೀವು ಶಿಕ್ಷಣ ಜೊತೆಗೆ ಇತರೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಇವತ್ತು ಎಲ್ಲ ಕ್ಷೆತ್ರಗಳಲ್ಲಿ ಮಹಿಳೆಯರು ಸಬಲೀಕರಣ ಆಗುತ್ತಿದ್ದಾರೆ.
ಮೊದಲು ನಮ್ಮ ಕಾಲೇಜಿನಲ್ಲಿ ಹಲವಾರು ಸಮಸ್ಯೆ ಗಳಿದ್ದವು ಆದರೆ ಇಂದು ಸ್ವಲ್ಪ ಸಮಸ್ಯೆಗಳು ಕಡಿಮೆ ಆಗಿವೆ ಎಂದರು..
ಕಾರ್ಯಕ್ರಮದಲ್ಲಿ ಬಡ್ತಿ ಹೊಂದಿರುವ ಮತ್ತು ಉನ್ನತ ಶಿಕ್ಷಣ ಪಡೆದುಕೊಂಡಿರುವ ಉಪನ್ಯಾಸಕರಿಗೆ ಮತ್ತು ಕ್ರೀಡೆ ಹಾಗೂ ಇನ್ನಿತರ ಕ್ಷೆತ್ರಗಳಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.
ವಿದ್ಯಾರ್ಥಿಗಳು ಅನಿಸಿಕೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಶ್ರೀ ಮತಿ ನಾಗರತ್ನ ತಮ್ಮಿ,ನಾಳ, ಡಾ. ಹುಲಿಗೆಮ್ಮ, ಡಾ. ಮಲ್ಲಿಕಾರ್ಜುನ, ಡಾ. ಪ್ರದೀಪ್ ಕುಮಾರ್, ಡಾ. ನರಸಿಂಹ, ಡಾ. ಅಶೋಕ ಕುಮಾರ್, ಶ್ರೀ ಮತಿ ಸುಮಿತ್ರಾ, ಅಲ್ಲಾಬಕ್ಷ, ಶ್ರೀ ಮತಿ ಸೌಮ್ಯ ಹಿರೇಮಠ, ಹನುಮಪ್ಪ ಮೇಟಿ, ವಿರೂಪಾಕ್ಷಪ್ಪ, ಶಿವಪ್ರಾಸಾದ್ ಹಾದಿಮನಿ, ಕಾಲೇಜಿನ ಅತಿಥಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿನಿಯರು ಇದ್ದರು
ಆರತಿ ಸಜ್ಜನ್ ಅವರು ವ್ಯಕ್ತಿ ಪರಿಚಯ ಮಾಡಿದರು..
ನಿಂಗಜ್ಜ ಸೋಂಪುರ್ ಸ್ವಾಗತಿಸಿದರು. ಮಹಾದೇವಿ ಪ್ರಾರ್ಥನೆ ಗೀತೆ ಹಾಡಿದರು.ತಸ್ಲೀಮ್ ನಿರೂಪಿಸಿ, ವಂದಿಸಿದರು.
Comments are closed.