ಕಾಂಗ್ರೆಸ್ ಸಂವಿಧಾನ ವಿರೋಧಿ ನೀತಿ ಸಂಗಮೇಶ್ ಸುಗ್ರೀವ ಕಿಡಿ
ಗಂಗಾವತಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ರಾಜ್ಯಪಾಲರು ಪ್ರಾಜೂಕೇಷನ್‌ಗೆ ಅನುಮತಿ ನೀಡಿದ್ದಕ್ಕೆ ಕಾಂಗ್ರೆಸ್ ಪ್ರತಿಭಟಿಸಿ ರಾಜ್ಯಪಾಲರ ಪ್ರತಿಕೃತಿ ದಹಿಸುತ್ತಿರುವುದು ಹಾಗು ಅವಾಚ್ಯ ಪದಗಳ ಮೂಲಕ ನಿಂದಿಸಿ ರಾಜ್ಯದ ಪ್ರಥಮ ಪ್ರಜೆಯ ಘನತೆಯನ್ನು ಕುಂದಿಸುವುದಲ್ಲದೆ ಸಂವಿಧಾನ ವಿರೋಧಿ ನಡೆ ಅನುಸರಿಸುತ್ತಿದೆ ಎಂದು ಬಿಜೆಪಿ ಮುಖಂಡರಾದ ಸಂಗಮೇಶ್ ಸುಗ್ರೀವ ಕಿಡಿಕಾರಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ಸಂಸತ್ತಿನಲ್ಲಿ ಕಾಂಗ್ರೆಸ್ ವರೀಷ್ಠ ರಾಹುಲ್ ಗಾಂಧಿಯವರು ಸಂವಿಧಾನ ಉಳಿಸಿ ಆಂಧೋಲನ ನಡೆಸುತ್ತಿದ್ದಾರೆ ಆದರೆ ಕರ್ನಾಟಕದಲ್ಲಿ ಸಂವಿಧಾನ ವಿರೋಧಿ ನಡೆ ಅನುಸರಿಸಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಪ್ರತಿಭಟನೆ ನೆಡೆಸುವವರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಕ್ಲೀನ್ ಹ್ಯಾಂಡ್ ಆಗಿದ್ದರೆ ರಾಜೀನಾಮೆ ನೀಡಿ ತನಿಖೆಯ ನಂತರ ಮತ್ತೆ ಹುದ್ದೆ ಅಲಂಕರಿಸಲಿ, ರಾಜ್ಯದಲ್ಲಿ ಅರಾಜಕತೆ ಸೃಷ್ಟಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಇದಕ್ಕೆ ಪೂರಕ ಸಚಿವ ಜಮೀರ್ ಆಹ್ಮದ್ ಹಾಗು ಡಿಸೋಜಾ ಅವರ ಹೇಳಿಕೆಗಳು ಎಂದು ಅಕ್ರೊಶ ವ್ಯಕ್ತಪಡಿಸಿದರು.
ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದಲ್ಲಿ ಒಂದೇ ಒಂದು ಭೂಮಿ ಪೂಜೆ ನೆರವೇರಿಲ್ಲ, ರಸ್ತೆಗಳಿಗೆ ಅನುದಾನ ನೀಡಲು ದುಡ್ಡಿಲ್ಲ, ನೆರಬಂದ ರೈತರ ರಕ್ಷಣೆಗೆ ಸರಕಾರ ಧಾವಿಸಿಲ್ಲ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಗಂಗಾವತಿಯಲ್ಲಿ ಗಾಂಜಾ, ಡ್ರಗ್ಸ್, ಜೂಜಾಟ ಹಾಗು ಮಟಗಾ ಮಿತಿ ಮೀರಿದೆ, ಇದರ ನಡುವೆ ಬೆಂಗಳೂರು ಬಿಬಿಎಂಪಿ ಹೆಸರಿನಲ್ಲಿ ಮೂರ‍್ನಾಲ್ಕು ಕೋಟಿ ರು ಸಾಲ ಅಭಿವೃದ್ಧಿ ಹೆಸರಿನಲ್ಲಿ ಪಡೆಯಲಾಗುತ್ತಿದೆ ಆದರೆ ಇದು ಗುಳುಂ ಮಾಡಲು ಎಂದು ಲೇವಡಿ ಮಾಡಿದರು. ಕೆಲವೆ ದಿನಗಳಲ್ಲಿ ಬಿಜೆಪಿಯಿಂದ ರಾಜ್ಯದ ಎಲ್ಲಾ ತಾಲೂಕಾ ಕೇಂದ್ರಗಳಲ್ಲೂ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
Comments are closed.